ಪುಟ್ಟ ಮಕ್ಕಳ ಆರೋಗ್ಯದ ಕಾಳಜಿಗೆ ಇಲ್ಲಿವೆ ಪರಿಣಾಮಕಾರಿ ಸಲಹೆಗಳು

ಹೆಚ್ಚಿನ ಪ್ರಮಾಣದ ನೀರು ಅಗತ್ಯ : ನಮ್ಮ ದೇಹದ ಗಮನಾರ್ಹ ಭಾಗವು ನೀರಿನಿಂದ ಮಾಡಲ್ಪಟ್ಟಿದೆ. ನೀರು(Tips For Kids Health) ಹಲವಾರು ಜೈವಿಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಉದಾಹರಣೆಗೆ ತ್ಯಾಜ್ಯದ ವಿಸರ್ಜನೆ, ಕೀಲುಗಳ ನಯಗೊಳಿಸುವಿಕೆ ಮತ್ತು ಬೆನ್ನು ಹುರಿಯಂತಹ ಸೂಕ್ಷ್ಮ ಅಂಗಾಂಶಗಳ ರಕ್ಷಣೆ ಮಾಡುತ್ತದೆ.

ದೇಹದ ಉಷ್ಣತೆಯ(Body Temperature) ನಿಯಂತ್ರಣ ಮಾಡುತ್ತದೆ ಮತ್ತು ಮಲಬದ್ಧತೆ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಎಂಟು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ(Tips For Kids Health) ದಿನಕ್ಕೆ ಎರಡು ಲೀಟರ್ ನೀರನ್ನು ತಜ್ಞರು ಶಿಫಾರಸು ಮಾಡುತ್ತಾರೆ.


ನಿಯಮಿತವಾಗಿರಲಿ ಸಿಹಿತಿಂಡಿಗಳು : ಒಮ್ಮೊಮ್ಮೆ ಸಿಹಿ ತಿನ್ನುವುದು ತಪ್ಪಲ್ಲ ಆದರೆ ಸ್ವಲ್ಪ ಪ್ರಮಾಣದಲ್ಲಿ ಕೊಡಿ. ಅನೇಕ ಪೋಷಕರು ಪ್ರೀತಿಯನ್ನು ಪ್ರದರ್ಶಿಸಲು ಮಿಠಾಯಿಗಳು ಮತ್ತು ಚಾಕೊಲೇಟ್‍ಗಳನ್ನು ಕೊಡುತ್ತಾರೆ.

ಈ ಅಭ್ಯಾಸವನ್ನು ತಪ್ಪಿಸಿ. ಹಣ್ಣುಗಳು ಮತ್ತು ತರಕಾರಿಗಳು ಊಟದಲ್ಲಿ ಹೇರಳವಾಗಿರಲಿ.

https://fb.watch/gricY6bzEH/ ಇದು ಗಂಧದ ಗುಡಿ ಅಲ್ಲ ದೇವರ ಗುಡಿ

ಏಕೆಂದರೆ, ಹಣ್ಣು ತರಕಾರಿಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಇದು ಆರೋಗ್ಯಕರ ಅಂಗಗಳು ಮತ್ತು ರೋಗನಿರೋಧಕ ಶಕ್ತಿಗೆ ಅವಶ್ಯಕವಾಗಿದೆ.

ಹೆಚ್ಚಿನ ಮಕ್ಕಳು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದಿಲ್ಲ. ಪೋಷಕರು ಬಲವಂತ ಮಾಡಿಯಾದರೂ ತಿನ್ನಿಸಬೇಕು.


ಸಾಕಷ್ಟು ನಿದ್ರೆ : ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ನಿದ್ರೆಯಲ್ಲಿ ದೇಹವು ತನ್ನನ್ನು ತಾನೇ ಸರಿಪಡಿಸಿಕೊಳ್ಳುತ್ತದೆ ಮತ್ತು ಪ್ರತಿರಕ್ಷಣಾ ಕಾರ್ಯವನ್ನು ಸುಧಾರಿಸುತ್ತದೆ.

ಆರೋಗ್ಯಕರ ಬೆಳವಣಿಗೆಗೆ ಮಕ್ಕಳಿಗೆ ಸಾಕಷ್ಟು ನಿದ್ರೆ ಬೇಕು. ಆರು ಮತ್ತು 12 ವರ್ಷದೊಳಗಿನ ಮಕ್ಕಳಿಗೆ 9-12 ಗಂಟೆಗಳ ರಾತ್ರಿ ನಿದ್ರೆಯ ಅಗತ್ಯವಿರುತ್ತದೆ, ಆದರೆ 13 ಮತ್ತು 18 ರ ನಡುವಿನ ಹದಿಹರೆಯದವರಿಗೆ ಪ್ರತಿ ರಾತ್ರಿ 8-10 ಗಂಟೆಗಳ ನಿದ್ದೆ ಬೇಕಾಗುತ್ತದೆ.


ಸಮಯಕ್ಕೆ ಸರಿಯಾಗಿ ವ್ಯಾಕ್ಸಿನೇಷನ್ ಹಾಕಿಸಿ : ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವ್ಯಾಕ್ಸಿನೇಷನ್ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಪ್ರತಿರಕ್ಷಣೆ ಪಡೆದ ವ್ಯಕ್ತಿಯು ಹೆಚ್ಚು ಕಾಲ ಮತ್ತು ಆರೋಗ್ಯಕರವಾಗಿ ಬದುಕಲು ಸಹಾಯ ಮಾಡುತ್ತದೆ. ಹಾಗಾಗಿ, ಆಯಾ ಕಾಲಕ್ಕೆ ಸರಿಯಾದ ವ್ಯಾಕ್ಸಿನೇಷನ್ ಹಾಕಿಸಿ.


ಉತ್ತಮ ನೈರ್ಮಲ್ಯ : ಸಮತೋಲಿತ ಆಹಾರ ಮತ್ತು ದೈಹಿಕ ಚಟುವಟಿಕೆಯಂತೆಯೇ ನೈರ್ಮಲ್ಯವೂ ಅಷ್ಟೇ ಮುಖ್ಯ. ಸರಿಯಾದ ನೈರ್ಮಲ್ಯವು ರೋಗಕಾರಕ ಸೂಕ್ಷ್ಮಜೀವಿಗಳ ವಿರುದ್ಧ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ನಿಮ್ಮ ಮಗುವಿಗೆ ಆರೋಗ್ಯಕರ ನೈರ್ಮಲ್ಯ ಅಭ್ಯಾಸಗಳನ್ನು ಕಲಿಸಿ, ಉದಾಹರಣೆಗೆ ಸೀನುವಾಗ ಅಥವಾ ಕೆಮ್ಮುವಾಗ ಕರ್ಚಿಫ್ ಬಳಸುವುದು, ಮತ್ತು ಇತರರೊಂದಿಗೆ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳದಿರುವುದನ್ನು ಹೇಳಿಕೊಡಿ.

ಇದನ್ನೂ ಓದಿ : https://vijayatimes.com/review-of-appu-gandadagudi/


ಕನಿಷ್ಠ ಸಕ್ಕರೆ ಸೇವನೆ : ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, ಸಕ್ಕರೆಯು ಮಗುವಿನ ದೈನಂದಿನ ಆಹಾರ ಮತ್ತು ಪಾನೀಯ ಸೇವನೆಯ 17% ರಷ್ಟಿದೆ.

ಸಕ್ಕರೆಯಿಂದ ದೈನಂದಿನ ಕ್ಯಾಲೊರಿಗಳಲ್ಲಿ 10% ಕ್ಕಿಂತ ಹೆಚ್ಚು ಪಡೆಯುವ ಮಕ್ಕಳು ಹೆಚ್ಚಿನ ಕೊಲೆಸ್ಟ್ರಾಲ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೊಂದಿರುತ್ತಾರೆ. ದೀರ್ಘಾವಧಿಯಲ್ಲಿ ಹಲ್ಲಿನ ಸಮಸ್ಯೆ ಬರುತ್ತದೆ. ಅದಕ್ಕೆ ಕಡಿಮೆ ಸಕ್ಕರೆ ಸೇವನೆ ಒಳ್ಳೆಯದು.

Exit mobile version