ಅಫ್ಘಾನಿಸ್ತಾನಕ್ಕೆ 5000 ಅಮೆರಿಕ ಸೈನಿಕರ ನಿಯೋಜನೆ

ಕಾಬೂಲ್ ಆ 21 : ತಾಲಿಬಾನ್ ನಲ್ಲಿ ನರಮೇದ ನಡೆಯುತ್ತಿರುವ ಹಿನ್ನಲೆಯಲ್ಲಿ ಇದೀಗ ಅಮೆರಿಕ ತನ್ನ 5000 ಸೈನಿಕರನ್ನು ಕಾಬೂಲ್‌ನ್ಲಲಿ ನಿಯೋಜಿಸಿದೆ.

ಈ ಬಗ್ಗೆ ಮಾತನಾಡಿದ ಅಮೆರಿಕ ಸೇನೆಯ ಮೇಜರ್ ಜನರಲ್ ವಿಲಿಯಂ ಹ್ಯಾಂಕ್ ಟೇಲರ್ ಕಾಬೂಲ್‍ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇದೀಗ ಸುರಕ್ಷಿತವಾಗಿದೆ ಮತ್ತು ವಿಮಾನ ಕಾರ್ಯಾಚರಣೆ ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ 5,200ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದ್ದು, ವಿಮಾನ ನಿಲ್ದಾಣವು ಸುರಕ್ಷಿತವಾಗಿದೆ ಮತ್ತು ವಿಮಾನ ಕಾರ್ಯಾಚರಣೆ ಮುಕ್ತಗೊಳಿಸಲಾಗಿದೆ. ಆಗಸ್ಟ್ 14ರಿಂದ ಇಲ್ಲಿಯವರೆಗೂ ಸುಮಾರು 7 ಸಾವಿರ ಜನರನ್ನು ಸ್ಥಳಾಂತರಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಾವು ಅಮೇರಿಕನ್ನರನ್ನು ಸುರಕ್ಷಿತವಾಗಿ ರಕ್ಷಿಸಲು ನಿರಂತರವಾಗಿ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಈ ಗುರಿಯನ್ನು ತಲುಪಲು ನಮ್ಮ ಬಳಿ ಇರುವ ಎಲ್ಲಾ ಶಸ್ತ್ರಾಸ್ತ್ರ ಸಾಧನಗಳನ್ನು ಬಳಸುತ್ತಿದ್ದೇವೆ. ಎಷ್ಟು ಬೇಗ ಸಾಧ್ಯವಾಗುತ್ತದೆಯೋ ಅಷ್ಟು ಬೇಗ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Exit mobile version