ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 2 ರೂ. ಇಳಿಕೆ: ಮಾರ್ಚ್ 15ರಂದು ಜಾರಿ

New Delhi: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ (Todays Petrol-Deiseal Price) ಬೆಲೆಯಲ್ಲಿ 2 ರೂಪಾಯಿ ಇಳಿಕೆ ಮಾಡಲಿವೆ ಎಂದು ಕೇಂದ್ರ ಪೆಟ್ರೋಲಿಯಂ

ಸಚಿವಾಲಯ ಆದೇಶ ಹೊರಡಿಸಿದೆ. ಆದೇಶದನ್ವಯ ಪರಿಷ್ಕೃತ ದರ ಮಾರ್ಚ್ (March) 15 ಬೆಳಗ್ಗೆ 6 ಗಂಟೆಯಿಂದ ಜಾರಿಯಾಗಲಿದೆ. ಮಹಿಳಾ ದಿನಾಚರಣೆಯಂದು ಕೇಂದ್ರ ಸರ್ಕಾರ ಗೃಹ ಬಳಕೆಯ

ಎಲ್ಪಿಜಿ (LPG) ದರವನ್ನು ಇಳಿಕೆ ಮಾಡಿತ್ತು. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಡಿತ ಮಾಡುವ ಮೂಲಕ ಕೇಂದ್ರ ಸರ್ಕಾರ ಪ್ರಜೆಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಪೆಟ್ರೋಲಿಯಂ ಸಚಿವಾಲಯ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ನಾಗರಿಕರಿಗೆ ಅನೇಕ ಪ್ರಯೋಜನವನ್ನು ಕೇಂದ್ರ ಸರ್ಕಾರ

(Central Government) ನೀಡುತ್ತದೆ. ಅವುಗಳೆಂದರೆ, ಹೆಚ್ಚು ಆದಾಯ, ಪ್ರವಾಸೋದ್ಯಮ ಮತ್ತು ಪ್ರಯಾಣ ಉದ್ಯಮಗಳಿಗೆ ಉತ್ತೇಜನ, ಹಣದುಬ್ಬರದ ಮೇಲೆ ನಿಯಂತ್ರಣ, ಹೆಚ್ಚಿದ ಗ್ರಾಹಕರ ವಿಶ್ವಾಸ

ಮತ್ತು ಖರ್ಚು, ಸಾರಿಗೆಯನ್ನು ಅವಲಂಬಿಸಿರುವ ವ್ಯವಹಾರಗಳಿಗೆ ಕಡಿಮೆ ವೆಚ್ಚಗಳು, ಲಾಜಿಸ್ಟಿಕ್ಸ್ (Logistics), ಉತ್ಪಾದನೆ ಮತ್ತು ಚಿಲ್ಲರೆ ವಲಯಗಳಿಗೆ ವರ್ಧಿತ ಲಾಭದಾಯಕತೆ, ಟ್ರಾಕ್ಟರ್ ಕಾರ್ಯಾಚರಣೆಗಳು

ಮತ್ತು ಪಂಪ್ ಸೆಟ್ಗಳಲ್ಲಿ ರೈತರಿಗೆ ಹೊರಹೋಗುವಿಕೆಯನ್ನು (Todays Petrol-Deiseal Price) ಕಡಿಮೆ ಮಾಡಲಾಗಿದೆ ಎಂದಿದೆ.

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಿಂದ 58 ಲಕ್ಷ ಸರಕು ವಾಹನ, 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಕೇಂದ್ರ

ಪೆಟ್ರೋಲಿಯಂ ಸಚಿವಾಲಯ ಹೇಳಿದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಿರುವುದಾಗಿ ತಿಳಿಸಿದ್ದು, ಹೊಸ ಬೆಲೆಗಳು 15ನೇ ಮಾರ್ಚ್ 2024, 06:00 AM ರಿಂದ ಜಾರಿಗೆ ಬರುತ್ತದೆ.

ಇದನ್ನು ಓದಿ: ಸೇವೆ v/s ಸುಲಿಗೆ: ಡಿ.ಕೆ. ಸುರೇಶ್ ವಿರುದ್ದ ಜೆಡಿಎಸ್ ವಾಗ್ದಾಳಿ

Exit mobile version