ಟೋಕಿಯೋ ಒಲಂಪಿಕ್ಸ್: ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಫೈನಲ್​ಗೆ ಲಗ್ಗೆ

ಟೋಕಿಯೋ, ಜು. 04: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಸ್ಪರ್ಧೆಯ ಪುರುಷರ‌ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ಫೈನಲ್​ಗೆ ಅರ್ಹತೆ ಪಡೆದಿದ್ದು, ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕದ ಕನಸು ಮೂಡಿದೆ.

ಮಂಗಳವಾರ ಬೆಳಗ್ಗೆ ಗ್ರೂಪ್ ಎ ವಿಭಾಗದಲ್ಲಿ ಸ್ಪರ್ಧಿಸಿದ್ದ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ 86.65 ಮೀಟರ್ ದೂರದ ಸಾಧನೆ ಮಾಡಿದರು. ಈ ವಿಭಾಗದಲ್ಲಿ ವಿಶ್ವದ ನಂ.1 ಜರ್ಮನಿಯ ಜೊಹಾನ್ಸ್ ವೆಟರ್ 82.04 ಮೀಟರ್ ಸಾಧನೆ ಮಾಡಿದರು. ಆದರೆ, ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಪ್ರದರ್ಶನ ತೋರಿ ಫೈನಲ್ ಹಂತಕ್ಕೆ ನೇರ ಪ್ರವೇಶ ಪಡೆದುಕೊಂಡಿದ್ದಾರೆ.

ಆದರೆ ಇದೇ ಸ್ಪರ್ಧೆಯ ಪುರುಷರ ವಿಭಾಗದ ಬಿ ಗುಂಪಿನಿಂದ ಸ್ಪರ್ಧಿಸಿದ್ದ ಭಾರತದ ಮತ್ತೊಬ್ಬ ಆಟಗಾರ ಶಿವಪಾಲ್ ಸಿಂಗ್, ಮುಂದಿನ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲರಾದರು. ಸ್ಪರ್ಧೆಯ ಮೂರು ಪ್ರಯತ್ನದಲ್ಲೂ ಕ್ವಾಲಿಫೈಯಿಂಗ್ ಹಂತಕ್ಕೇರಲು ಅಗತ್ಯವಿದ್ದ ಗುರಿ ತಲುಪಲು ಸಾಧ್ಯವಾಗದೆ ನಿರಾಸೆ ಅನುಭವಿಸಿದರು. ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ಪಂದ್ಯ ಆಗಸ್ಟ್ 7 ರಂದು ನಡೆಯಲಿದ್ದು ಭಾರತ ಮತ್ತೊಂದು ಪದಕದ ನಿರೀಕ್ಷೆಯಲ್ಲಿದೆ.

Exit mobile version