ಟೊಮೆಟೋ ಬೆಲೆ 100 ರೂ.ಗೆ ಜಂಪ್‌ : ಸರ್ಕಾರದಿಂದ ಬೆಲೆ ಏರಿಕೆ ತಡೆಯಲು ‘ಟೊಮೆಟೋ ಗ್ರಾಂಡ್‌ ಚಾಲೆಂಜ್‌’

New Delhi (ಜೂನ್ 28, 2023): ಬಹುತೇಕ ರಾಜ್ಯಗಳಲ್ಲಿ ಕೇಜಿಗೆ 20 ರಿಂದ 30 ರು. ಇದ್ದ ಟೊಮೆಟೋ ಬೆಲೆ ದಿಢೀರ್‌ ಗಗನಕ್ಕೇರಿದ್ದು 100 ರೂ. (tomato price skyrocketed to hundred) ತಲುಪಿದೆ.

ಇನ್ನು ಕೇಜಿಗೆ 110 ರೂ. ಗಡಿದಾಟುವ ಮೂಲಕ ಮಧ್ಯಪ್ರದೇಶ ಇಂದೋರ್‌ನಲ್ಲಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಈ ಬಾರಿ ಅತಿಯಾದ ಬಿಸಿಲಿನಿಂದ ಹಾಗೂ ಮುಂಗಾರು ದೇಶವನ್ನು ತಡವಾಗಿ ಪ್ರವೇಶಿಸಿದ್ದರಿಂದ ಟೊಮೆಟೋ ಬೆಳೆಗೆ ಹಾನಿಯುಂಟಾಗಿದೆ.

tomato price

ಇನ್ನು ಕೆಲವೆಡೆ ಅತಿಯಾದ ಮಳೆಯಿಂದಾಗಿಯೂ ಬೆಳೆ ನಾಶವಾಗಿದೆ, ಮತ್ತೊಂದೆಡೆ ಈ ವರ್ಷ ಟೊಮೆಟೋ ಬೆಳೆ ಬಿತ್ತನೆಯೂ ಕಡಿಮೆ ಪ್ರಮಾಣದಲ್ಲಿದೆ ಹೀಗಾಗಿ ಟೊಮೆಟೋ ಪೂರೈಕೆಯಲ್ಲಿ ದೇಶದೆಲ್ಲೆಡೆ ವ್ಯತ್ಯಯವಾಗಿದ್ದು ಸಗಟು ದರವು 70-90 ರೂ. ಗೆ ಏರಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಟೊಮೆಟೊ ಕೇಜಿಗೆ 125 ರೂ. ಗೆ ಏರಿಕೆಯಾಗಿದೆ.ಅಗತ್ಯ ಪ್ರಮಾಣದಲ್ಲಿ ಟೊಮೆಟೋ ಮಾರುಕಟ್ಟೆಗೆ ಪೂರೈಕೆಯಾಗದೇ ಇದ್ದಲ್ಲಿ ಬೆಲೆಯು ಕೇಜಿಗೆ 150 ರೂ. ವರೆಗೂ ಇನ್ನು

ಮುಂದಿನ ಕೆಲ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಚಿಲ್ಲರೆ ಮಾರಾಟವು ಕೇಜಿಗೆ 100 ರೂ. ಗೆ ಏರಿಕೆಯಾಗಿದೆ

ಮತ್ತು ಸಗಟು ದರವು ಬೆಲೆ 80 ರಿಂದ 90 ರೂ. ಗೆ (tomato price skyrocketed to hundred) ಏರಿದೆ.

ಮೋದಿ ಸರ್ಕಾರ ಬೆಲೆ ಏರಿಕೆಗೆ ಕಾರಣ: ಕಾಂಗ್ರೆಸ್‌

ಪ್ರಧಾನಿ ಮೋದಿ ಕೈಗೊಂಡ ತಪ್ಪು ನಿರ್ಧಾರಗಳೇ ಟೊಮೆಟೋ ಬೆಲೆ ಏರಿಕೆಗೆ ಕಾರಣ ಎಂದು ಕಾಂಗ್ರೆಸ್‌ ಕಿಡಿಕಾರಿದೆ. ಮೋದಿಯವರು ‘ಟೊಮೆಟೋ, ಈರುಳ್ಳಿ ಮತ್ತು ಆಲೂಗೆಡ್ಡೆಗಳು ಪ್ರಮುಖ ಆದ್ಯತೆಗಳೆಂದು ಬಣ್ಣಿಸಿದ್ದಾರೆ.

ಆದರೆ ಮೊದಲು ಟೊಮೆಟೋವನ್ನು ಅವರ ತಪ್ಪು ನೀತಿಗಳಿಂದಾಗಿ ರಸ್ತೆಯಲ್ಲಿ ಬಿಸಾಕಲಾಯಿತು. ಇದೀಗ ಅದರ ಬೆಲೆ ಕೇಜಿಗೆ 100 ರೂ. ಆಗಿದೆ’ ಎಂದು ಈ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಜೈರಾಂ ರಮೇಶ್‌ ಟ್ವೀಟ್‌ ಮಾಡಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರದಿಂದ ಬೆಲೆ ಏರಿಕೆ ತಡೆಯಲು ‘ಟೊಮೆಟೋ ಗ್ರಾಂಡ್‌ ಚಾಲೆಂಜ್‌’


ಸರ್ಕಾರವು ಟೊಮೆಟೋ ಬೆಲೆಯಲ್ಲಿ ದಿಢೀರ್‌ ಇಳಿಕೆಯನ್ನು ಮತ್ತು ಏರಿಕೆಯನ್ನು ತಡೆಗಟ್ಟಲು ಕೇಂದ್ರ ಗ್ರಾಹಕ ಸಚಿವಾಲಯ ವಿನೂತನ ಯೋಜನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ

‘ಟೊಮೆಟೋ ಗ್ರೇಟ್‌ ಚಾಲೆಂಜ್‌’ ಅನ್ನು ಆರಂಭಿಸಲಿದೆ ಎಂದು ಮಂಗಳವಾರ ಹೇಳಿದೆ. ಟೊಮೆಟೋ ಉತ್ಪಾದನೆಯ ಹೆಚ್ಚಳ, ಸಂಸ್ಕರಣೆ ಮತ್ತು ಸಂಗ್ರಹಣೆಗೆ ಸೇರಿದಂತೆ ಹಲವು ಅಭಿಪ್ರಾಯಗಳನ್ನು

ಈ ಯೋಜನೆಯ ಮೂಲಕ ಜನರಿಂದ ಸಂಗ್ರಹ ಮಾಡಲಾಗುತ್ತದೆ.

ಟೊಮೆಟೋ ಗ್ರಾಂಡ್‌ ಚಾಲೆಂಜ್‌ ಅನ್ನು ಈ ವಾರ ನಾವು ಆರಂಭ ಮಾಡಲಿದ್ದೇವೆ. ಈ ಮೂಲಕ ನಾವು ಮಾದರಿಗಳನ್ನು ಮತ್ತು ಸೃಜನಾತ್ಮಕ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ.

ಈರುಳ್ಳಿ ಬೆಲೆ ಹೆಚ್ಚಳವಾದಾಗಲೂ ಇದನ್ನೇ ನಾವು ಕೈಗೊಂಡಿದ್ದೆವು.ಇನ್ನು ಗ್ರಾಹಕ ಸಚಿವಾಲಯದ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಈ ಬಗ್ಗೆ ಮಾತನಾಡಿ ಈ ವೇಳೆ ನಾವು 600ಕ್ಕೂ

ಹೆಚ್ಚು ಅಭಿಪ್ರಾಯಗಳನ್ನು ಪಡೆದುಕೊಂಡಿದ್ದು, ಅದರಲ್ಲಿ 13 ಅಭಿಪ್ರಾಯಗಳನ್ನು ತಜ್ಞರೊಂದಿಗೆ ಚರ್ಚಿಸುತ್ತಿದೇವೆ ಎಂದು ಹೇಳಿದ್ದಾರೆ.

ರಶ್ಮಿತಾ ಅನೀಶ್

Exit mobile version