2022ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಟಾಪ್ ಫುಟ್‌ಬಾಲ್ ಆಟಗಾರರು ಇವರೇ ನೋಡಿ

New York : ಅತ್ಯುತ್ತಮ ಆಟಗಾರರ ವೇತನವು ಗಣನೀಯವಾಗಿ ವರ್ಷ ಕಳೆದಂತೆ ಏರಿಕೆ ಕಾಣುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಫುಟ್ಬಾಲ್ (Top 10 Football Players) ಹಣ ಕೇಂದ್ರಿತ ಆಟವಾಗಿದ್ದು,

ತಂಡಗಳು ಮತ್ತು ತಂಡದ ಆಟಗಾರರ ವೇತನಗಳು, ವರ್ಗಾವಣೆ ಶುಲ್ಕಗಳು ಮತ್ತು ಆದಾಯ ಪಟ್ಟಿಯು ಹಲವರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವಂತಿದೆ.

ಫುಟ್ಬಾಲ್ (Top 10 Football Players) ಉದ್ಯಮವು ಸದ್ಯ ಹಣಕಾಸಿನ ವಿಷಯದಲ್ಲಿ ಸರಾಗವಾಗಿ ಮುನ್ನಡೆಯುತ್ತಿದ್ದು, ಪ್ರೀಮಿಯರ್ ಲೀಗ್ ಸೇರಿದಂತೆ ದೊಡ್ಡ, ದೊಡ್ಡ ಲೀಗ್ ಗಳಿಗೆ ಖರ್ಚು ಮಾಡುವಲ್ಲಿ ಮುಂಚೂಣಿಯಲ್ಲಿದೆ.

2022 ರಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಹತ್ತು ಫುಟ್‌ಬಾಲ್ ಆಟಗಾರರ ಪಟ್ಟಿ ಪ್ರಕಟವಾಗಿದ್ದು, ಪಟ್ಟಿಯ ವಿವರ ಹೀಗಿದೆ.

ಕೈಲಿಯನ್ MBAPPE (PSG) – $62 ಮಿಲಿಯನ್/ವರ್ಷ : ಈ ಪಟ್ಟಿಯಲ್ಲಿ ಫ್ರೆಂಚ್ನವರು ಪ್ರಮುಖರು. ಫ್ರೆಂಚ್ ಆಟಗಾರರ ಸಾಮರ್ಥ್ಯ, ಆಟದ ವೈಖರಿ ನಾವು ನೋಡಿದ್ದೇವೆ.

ಈ ಪೈಕಿ ಕೈಲಿಯನ್ ಅಗ್ರಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ಐದು ಫುಟ್‌ಬಾಲ್ ತಾರೆಗಳಲ್ಲಿ ಮೂವರು PSG ಕ್ಲಬ್‌ನವರಾಗಿದ್ದಾರೆ.


ಕೈಲಿಯನ್ ಎಂಬಪ್ಪೆ ಅವರು PSG ಕ್ಲಬ್ನೊಂದಿಗೆ ಬೃಹತ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

https://fb.watch/hps_vRXX6z/ Dangerous Tea! ಡೆಡ್ಲಿ ಟೀ ! ಆರೋಗ್ಯಕ್ಕೆ ಬಹಳ ಕೆಟ್ಟದು ಟೀ, ಕಾಫಿ.

ಲಿಯೋನೆಲ್ ಮೆಸ್ಸಿ(PSG) – $41 ಮಿಲಿಯನ್/ವರ್ಷ : ತಮ್ಮ 35ನೇ ವಯಸ್ಸಿನಲ್ಲಿಯು ಸಹ ಲಿಯೋನೆಲ್ ಮೆಸ್ಸಿಯ(Leonel Messi) ಅವರ ಆಟಕ್ಕೆ ಮನಸೋಲದವರೇ ಇಲ್ಲ!

ಈಗಲೂ ಕೂಡ ಅವರ ಅಭಿಮಾನಿಗಳು ಅವರನ್ನು GOAT ಎಂದೇ ಕರೆಯುತ್ತಾರೆ. ಕ್ಯಾಂಪ್ ನೌ(Camp Nou)ಅನ್ನು ತೊರೆದ ಸ್ವಲ್ಪ ದಿನಗಳಲ್ಲೇ ಮೆಸ್ಸಿ PSG ಕ್ಲಬ್ ಸೇರಿದರು.

ವರದಿ ಅನುಸಾರ ಮೆಸ್ಸಿ $41 ಮಿಲಿಯನ್ ನಿವ್ವಳ ವಾರ್ಷಿಕ ವೇತನವನ್ನು ಪಡೆಯುತ್ತಿದ್ದಾರೆ.

ನೇಮಾರ್ JR (PSG) – $36.5 ಮಿಲಿಯನ್/ವರ್ಷ : ಮೆಸ್ಸಿಯ ಸಹ ಆಟಗಾರ ನೇಮರ್ ಅವರು 2021 ಮಾರ್ಚ್ ತಿಂಗಳಲ್ಲಿ PSG ಕ್ಲಬ್ ನೊಂದಿಗೆ ಒಪ್ಪಂದದ ವಿಸ್ತರಣೆಗೆ ಸಹಿ ಹಾಕಿದರು.

ನೇಮರ್ ಅವರು ಕೂಡ ಭಾರಿ ಸಂಭಾವನೆ ಪಡೆದ ಆಟಗಾರರ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊ (ಮ್ಯಾಂಚೆಸ್ಟರ್ ಯುನೈಟೆಡ್) – $36 ಮಿಲಿಯನ್/ವರ್ಷ : ಫುಟ್ಬಾಲ್ ಕ್ರೀಡೆಯಲ್ಲಿ ರೋಚಕ ಇತಿಹಾಸ ಹೊಂದಿರುವ ಆಟಗಾರ ಅಂದ್ರೆ ಅದು ಕ್ರಿಸ್ಟಿಯಾನೋ ರೊನಾಲ್ಡೊ.

ಮೆಸ್ಸಿ, ನೇಮರ್ ಅವರಂತೆಯೇ ತಮ್ಮದೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

2021 ರಲ್ಲಿ ತಮ್ಮ ಹಿಂದಿನ ಕ್ಲಬ್ ಆದ ಮ್ಯಾಂಚೆಸ್ಟರ್ ಯುನೈಟೆಡ್‌ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದಾಗ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿದ್ದರು.

ತಮ್ಮ 37ನೇ ವಯಸ್ಸಿನಲ್ಲಿಯೂ ವಿಶ್ವದ ನಾಲ್ಕನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿ ರೊನಾಲ್ಡೋ ಹೊರಹೊಮ್ಮಿದ್ದಾರೆ.

ಆಸ್ಕರ್ (ಶಾಂಘೈ SIPG) – $34 ಮಿಲಿಯನ್/ವರ್ಷ : 2016 ರಲ್ಲಿ ಆಸ್ಕರ್ ಅವರು ತಮ್ಮ ವೃತ್ತಿಜೀವನದ ಮುಖ್ಯ ಘಟ್ಟಕ್ಕೆ ತಲುಪಲು ಚೀನಾಗೆ ತೆರಳಿದಾಗ ಅವರ ಆಟದ ಶೈಲಿಯು ಫುಟ್ಬಾಲ್ ಅಭಿಮಾನಿಗಳು ರಂಜಿಸುವಲ್ಲಿ ಯಶಸ್ವಿಯಾಯಿತು.

ಬ್ರೆಜಿಲಿಯನ್ ಅವರು ಬ್ಲೂಸ್‌ನಲ್ಲಿ ಗಳಿಸಿದ್ದಕ್ಕಿಂತ ಮೂರು ಪಟ್ಟು ಸಂಭಾವನೆಯನ್ನು ಆಸ್ಕರ್ ಶಾಂಘೈನಲ್ಲಿ ಗಳಿಸಿದ್ದಾರೆ.

ಆಂಡ್ರೆಸ್ ಇನಿಯೆಸ್ಟಾ (ವಿಸ್ಸೆಲ್ ಕೋಬ್) – $31 ಮಿಲಿಯನ್ / ವರ್ಷ : 2018 ರಲ್ಲಿ ವಿಸ್ಸೆಲ್ ಕೋಬ್‌ಗೆ ಸೇರಿದಾಗಿನಿಂದ, ಇನಿಯೆಸ್ಟಾ ತಮ್ಮ ಹೊಸ ಕ್ಲಬ್‌ನೊಂದಿಗೆ ಕಿಂಗ್ ಕಪ್ ಮತ್ತು ಜಪಾನೀಸ್ ಸೂಪರ್ ಕಪ್ ಅನ್ನು ಗೆದ್ದಿದ್ದಾರೆ.

ಇವರಿಗೆ 37 ವರ್ಷ ವಯಸ್ಸಾಗಿದ್ದು, ಇನ್ನೂ 40 ವರ್ಷ ವಯಸ್ಸಿನ ಅವಧಿಯವರೆಗು ಆಟವಾಡುವ ಸಾಮರ್ಥ್ಯವಿದೆ ಎಂದು ಅಭಿಮಾನಿಗಳು ಹೇಳುತ್ತಾರೆ.

ಈಡೆನ್ ಹಜಾರ್ಡ್ (ರಿಯಲ್ ಮ್ಯಾಡ್ರಿಡ್) – $26 ಮಿಲಿಯನ್ / ವರ್ಷ : ಟಾಪ್ ೧೦ರ ಸಂಭಾವನೆ ಪಟ್ಟಿಯಲ್ಲಿ ಈಡೆನ್ ಹಜಾರ್ಡ್ ಹೆಸರು ಕೂಡ ಪ್ರಮುಖವಾದದು.

2019 ರಲ್ಲಿ ಚೆಲ್ಸಿಯಾದಿಂದ ಮರಳಿದ ಬಳಿಕ ಈಡೆನ್ ಹಜಾರ್ಡ್ ತನ್ನ ಹೆಚ್ಚಿನ ಸಮಯವನ್ನು ರಿಯಲ್ ಮ್ಯಾಡ್ರಿಡ್‌ನ ಆಸ್ಪತ್ರೆಯಲ್ಲಿ ಕಳೆದಿದ್ದರು ಎಂಬುದು ಬೇಸರದ ಸಂಗತಿಯೇ!

ಮೊಹಮದ್ ಸಲಾಹ್ (ಲಿವರ್‌ಪೂಲ್) – $26 ಮಿಲಿಯನ್ / ವರ್ಷ : ಈಜಿಪ್ಟಿನ ಕಿಂಗ್ ಲಿವರ್‌ಪೂಲ್‌ ಜುಲೈ ಆರಂಭದಲ್ಲಿ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕುವ ಮುಖೇನ ಉತ್ತಮ ಸಂಭಾವನೆ ಪಡೆಯುವ ಆಟಗಾರರ ಪಟ್ಟಿಗೆ ಸೇರಿದರು.

ಇದು ಅವರನ್ನು ಕ್ಲಬ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನನ್ನಾಗಿ ಮಾಡಿತು.

ಕೆವಿನ್ ಡಿ ಬ್ರೂಯ್ನೆ (ಮ್ಯಾಂಚೆಸ್ಟರ್ ಸಿಟಿ) – $24 ಮಿಲಿಯನ್/ವರ್ಷ : ಇದೀಗ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ಕೆವಿನ್ ಡಿ ಬ್ರೂಯ್ನೆ, ಫುಟ್ಬಾಲ್ ಆಟಗಾರರಲ್ಲಿ ಉತ್ತಮ ಹೆಸರು ಗಳಿಸಿದ ಆಟಗಾರ.

2021 ರಲ್ಲಿ ನವೀಕರಿಸಿದ ಬೆಲ್ಜಿಯನ್ ಮಿಡ್‌ಫೀಲ್ಡರ್ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದಾರೆ.

ಕೆವಿನ್ ಡಿ ಬ್ರೂಯ್ನೆ ಅವರು ಟಾಪ್ ಹತ್ತರ ಪಟ್ಟಿಯಲ್ಲಿ ೯ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಎರ್ಲಿಂಗ್ ಹಾಲೆಂಡ್ (ಮ್ಯಾಂಚೆಸ್ಟರ್ ಸಿಟಿ) – $24 ಮಿಲಿಯನ್/ವರ್ಷ : ಟಾಪ್ ಗೋಲ್‌ಸ್ಕೋರರ್ ಆದ ಎರ್ಲಿಂಗ್ ಹಾಲೆಂಡ್ ಅವರು ಈಗ ಅತೀ ಹೆಚ್ಚು ಸಂಭಾವನೆ ಪಡೆಯುವ ಪುಟ್ಬಾಲ್ ಆಟಗಾರರ ಪಟ್ಟಿಯಲ್ಲಿ 1೦ನೇ ಸ್ಥಾನದಲ್ಲಿದ್ದಾರೆ.

ಇದಿಷ್ಟು ಟಾಪ್ ೧೦ರ ಪಟ್ಟಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್ ೧೦ ಫುಟ್ಬಾಲ್ ಆಟಗಾರರು.

Exit mobile version