ತಮ್ಮ ನೆಚ್ಚಿನ ಕ್ರಿಕೆಟ ಆಟಗಾರರ ಶೈಕ್ಷಣಿಕ ಅರ್ಹತೆ ಏನು ಎನ್ನುವ ವಿಚಾರ (top indian cricketers qualification) ಬಹುತೇಕ ಜನರಿಗೆ ಗೊತ್ತಿರುವುದಿಲ್ಲ. ಭಾರತದ ತಂಡದ ಆಟಗಾರರ ಶೈಕ್ಷಣಿಕ
ವಿದ್ಯಾರ್ಹತೆಯ ವಿವರ ಇಲ್ಲಿದೆ ನೋಡಿ.

• ವಿರಾಟ್ ಕೊಹ್ಲಿ (Virat kohli) : ವಿಶ್ವಮಾನ್ಯ ಆಟಗಾರ ವಿರಾಟ್ ಕೊಹ್ಲಿ(Virat kohli) ದೆಹಲಿಯ (Delhi) ವಿಶಾಲ್ ಭಾರತಿ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಬಳಿಕ ಕೊಹ್ಲಿ 12ನೇ ತರಗತಿವರೆಗೂ
ಸೇವಿಯರ್ ಕಾನ್ವೆಂಟ್ ಸ್ಕೂಲ್ನಲ್ಲಿ (Saviour’s Convent School) ವ್ಯಾಸಂಗ ಮಾಡಿ ಓದು ನಿಲ್ಲಿಸಿದರು.
• ರೋಹಿತ್ ಶರ್ಮಾ (Rohit Sharma): ರೋಹಿತ್ ಶರ್ಮಾ (Rohit Sharma) ಓದಿದ್ದು ಕೇವಲ 12ನೇ ತರಗತಿ ಮಾತ್ರ. ಪಿಯುಸಿ (PUC) ಬಳಿಕ ಎಜುಕೇಶನ್ ಮುಂದುವರೆಸಲಿಲ್ಲ. ಆದರೆ ಕ್ರಿಕೆಟ್ (Cricket)
ಪ್ರಾದಾರ್ಪಣೆ ಮಾಡಿ, ಸಾಕಷ್ಟು ಸಾಧನೆ (top indian cricketers qualification) ಮಾಡಿದರು.
• ರವಿಚಂದ್ರನ್ ಅಶ್ವಿನ್ (Ravichandran Ashwin): ಹಾಲಿ ಕ್ರಿಕೆಟಿಗರ ಪೈಕಿ ಅಶ್ವಿನ್ (Ashwin), ಅತಿಹೆಚ್ಚು ಶಿಕ್ಷಣ ಪಡೆದ ಆಟಗಾರ ಎನಿಸಿದ್ದಾರೆ. ಅಶ್ವಿನ್, ಎಸ್ಎಸ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ
ಇನ್ಫಾರ್ಮೇಶನ್ ಟೆಕ್ನಾಲಜಿ ವಿಭಾಗದಲ್ಲಿ ಬಿ.ಟೆಕ್ (B.tech) ಪದವಿ ಪಡೆದಿದ್ದಾರೆ.
- ಯುಜುವೇಂದ್ರ ಚಹಲ್ (Yujuvendra Chahal): ಲೆಗ್ ಸ್ಪಿನ್ನರ್ (Leg Spinner) ಯುಜುವೇಂದ್ರ ಚಹಲ್, ಹರ್ಯಾಣದ (Hariyana) ಮಹಾತ್ಮ ಗಾಂಧಿ ಕಾಲೇಜ್ ಆಫ್ ಹೆಲ್ತ್ ಸೈನ್ಸ್ನಲ್ಲಿ ಪದವಿ ಪಡೆದುಕೊಂಡಿದ್ದಾರೆ.

- ಸೂರ್ಯಕುಮಾರ್ ಯಾದವ್ (Suryakumar Yadav): ಸೂರ್ಯಕುಮಾರ್ ಯಾದವ್, ಮುಂಬೈನ (Mumbai) ಪಿಲ್ಲೈ ಆರ್ಟ್ಸ್, ಕಾಮರ್ಸ್ & ಸೈನ್ಸ್ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
- ಎಂ ಎಸ್ ಧೋನಿ (MS Dhoni): ಎಂ.ಎಸ್. ಧೋನಿ (MS Dhoni) ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 66% ಮಾರ್ಕ್ಸ್ ಪಡೆದುಕೊಂಡಿದ್ದರು. ನಂತರ ಇಂಟರ್ ಮೀಡಿಯೇಟ್ (Inter Mediate) ಪರೀಕ್ಷೆಯಲ್ಲಿ
56% ಅಂಕ ಪಡೆದು, ರೈಲ್ವೆ (Railway) ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
• ಕೆಎಲ್ ರಾಹುಲ್ (KL Rahul): ರಾಹುಲ್ , ಮಂಗಳೂರಿನ (Mangaluru) ಸೂರತ್ಕಲ್ನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದುಕೊಂಡಿದ್ದು, ನಂತರ ಬೆಂಗಳೂರಿನ (Bengaluru) ಶ್ರೀ ಭಗವಾನ್ ಮಹಾವೀರ್ ಜೈನ್
ಕಾಲೇಜಿನಲ್ಲಿ ಬಿ.ಕಾಂ (B.com) ಪದವಿ ಪಡೆದುಕೊಂಡಿದ್ದಾರೆ. ಇದಾದನಂತರ ಉನ್ನತ ಶಿಕ್ಷಣ ಮುಂದುವರೆಸಲಿಲ್ಲ.
• ರಿಷಭ್ ಪಂತ್ (Rishabh Pant): ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್, ದೆಹಲಿ (Dehli) ಯೂನಿವರ್ಸಿಟಿಯ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಬಿ,ಕಾಂ (B.com) ಪದವಿ ಪೂರೈಸಿದ್ದಾರೆ.
• ಹಾರ್ದಿಕ್ ಪಾಂಡ್ಯ (Hardik Pandya) : ಹಾರ್ದಿಕ್ ಪಾಂಡ್ಯ ಎಂ.ಕೆ ಹೈಸ್ಕೂಲ್ನಲ್ಲಿ (MK High School) ಕೇವಲ 9ನೇ ತರಗತಿಯವರೆಗೆ ಮಾತ್ರ ಓದಿದ್ದು, ನಂತರ ಓದಿಗೆ ಗುಡ್ ಬೈ (Good bye) ಹೇಳಿದ್ಧಾರೆ.
ಮಹೇಶ್