Malana: ಮಲಾನ ಎಂಬ ಹಳ್ಳಿಯಲ್ಲಿದೆ ವಿಚಿತ್ರ ನಿಯಮ: ಇಲ್ಲಿ ಪ್ರವಾಸಿಗರು, ಗ್ರಾಮದಲ್ಲಿನ ಮನೆಗಳ ಗೋಡೆಯನ್ನೂ ಸಹ ಮುಟ್ಟುವಂತಿಲ್ಲ!

tourist cannot touch the walls
Malana

ಭಾರತವನ್ನು(India) ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಎನ್ನಲಾಗುತ್ತದೆ. ಇಲ್ಲಿ ಅನೇಕ ಸಂಪ್ರದಾಯ, ಆಚಾರ ವಿಚಾರಗಳನ್ನು ಕಾಣಬಹುದಾಗಿದೆ.

ಒಂದೊಂದು ರಾಜ್ಯದ(State) ಸಂಪ್ರದಾಯವು ಇನ್ನೊಂದು ರಾಜ್ಯಕ್ಕಿಂತ ಭಿನ್ನವಾಗಿರುತ್ತದೆ. ಕೆಲವು ರಾಜ್ಯಗಳು ಸಂಸ್ಕೃತಿಯನ್ನು ಎತ್ತಿ ಹಿಡಿದರೆ, ಇನ್ನೂ ಕೆಲವು ರಾಜ್ಯಗಳ ಸಂಸ್ಕೃತಿ, ಆಚರಣೆಗಳು ಬಹಳ ವಿಭಿನ್ನವಾಗಿರುತ್ತದೆ.

ಅಂತಹದ್ದೇ ಒಂದು ವಿಚಿತ್ರ ಹಳ್ಳಿಯ ಬಗ್ಗೆ ತಿಳಿಯೋಣ. ಹಿಮಾಚಲ ಪ್ರದೇಶದ (Himachal Pradesh) ಕುಲ್ಲು ಕಣಿವೆಯಲ್ಲಿನ ಸಣ್ಣ ಹಳ್ಳಿ ಮಲಾನ, ದೇಶದ ಇತರ ಹಳ್ಳಿಗಳಿಗಿಂತ ಬಹಳ ಭಿನ್ನವಾಗಿದೆ.

ಮಲಾನಾ (Malana)ಹಳ್ಳಿಯಲ್ಲಿ ಅನೇಕ ರಹಸ್ಯಗಳಿವೆ, ಈ ಕಾರಣದಿಂದ ಇದು ಪ್ರವಾಸಿಗರನ್ನು ಸೆಳೆಯುವ ಒಂದು ವಿಶಿಷ್ಟ ಪ್ರವಾಸಿ (tourist) ಕೇಂದ್ರವಾಗಿಬಿಟ್ಟಿದೆ.

https://vijayatimes.com/gautham-adani-richest-man/

ಹಲವಾರು ವಿಚಿತ್ರ ಆಚರಣೆಗಳು ಈ ಹಳ್ಳಿಯಲ್ಲಿದ್ದು, ಇಂದಿಗೂ ಅವುಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಮಲನಾ ಸಂಸ್ಕೃತಿಯು ಬಹಳ ನಿಗೂಢವಾಗಿದ್ದು,

ಅವರ ಸಂಪ್ರದಾಯಗಳು ಭಾರತದ ಇತರ ಸಾಂಪ್ರದಾಯಗಳಿಗಿಂತ ಬಹಳ ವಿಭಿನ್ನವಾಗಿವೆ.ಅಸಲಿಗೆ, ಭಾರತೀಯರು ತಮ್ಮನ್ನು ತಾವು ನೋಡುವ ದೃಷ್ಠಿಯೇ ಇಲ್ಲಿ ಬದಲಾಗಿದೆ.

Malana


ಹೌದು, ಈ ಸ್ಥಳಕ್ಕೆ ಭೇಟಿ ನೀಡಿದ ಪ್ರವಾಸಿಗರು ಅಥವಾ ಹೊರಗಿನವರು, ಸೂಚಿಸಲಾದ ಸ್ಥಳದಲ್ಲಿಯೇ ನಿಲ್ಲಬೇಕು. ಅಲ್ಲಿನ ಯಾವುದೇ ಗೋಡೆಗಳು(walls), ಮನೆಗಳು, ಜನರು ಮತ್ತು ಯಾವುದೇ ವಸ್ತುವನ್ನು ಮುಟ್ಟಬಾರದು.

ಒಂದು ವೇಳೆ ಅಲ್ಲಿನ ಗೋಡೆಯನ್ನಾಗಲಿ ಯಾವುದನ್ನಾಗಲಿ ಮುಟ್ಟಿದರೆ ದಂಡವನ್ನು ಪಾವತಿಸಬೇಕಾಗುತ್ತದೆ. ಮನೆಯನ್ನೆಲ್ಲಾ ಶುದ್ಧೀಕರಿಸಬೇಕಾಗುತ್ತದೆ.

https://vijayatimes.com/russia-detains-islamic-state-terrorist/

ಹಾಗೆಯೇ, ಹೊರಗಿನ ಊರಿನಿಂದ ಯಾರೇ ಈ ಊರಿಗೆ ಬಂದರೂ ಕೆಲವು ನೀತಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ.

ಇಲ್ಲಿನ ಜನರು ತಮ್ಮ ಮನೆಯಲ್ಲಿ ಮಾಡಲಾದ ಅಡುಗೆಯನ್ನಷ್ಟೇ ಸೇವಿಸುತ್ತಾರೆಯೇ ಹೊರತು ಹೊರಗಿನವರು ನೀಡಿದ ಆಹಾರವನ್ನು ಸೇವಿಸುವುದಿಲ್ಲ. ಆದರೆ ತಾವು ಅಡುಗೆ ಮಾಡಿ ಇತರರಿಗೆ ನೀಡುತ್ತಾರೆ.


ಇನ್ನು, ಇಲ್ಲಿ ಯಾರಿಗೂ ಕ್ಯಾನಬಿಯನ್ (Canadian) ಗಿಡಗಳನ್ನು ಮುಟ್ಟಲು ಬಿಡುವುದಿಲ್ಲ. ಅಷ್ಟೇ ಅಲ್ಲ ತಮ್ಮ ಮನೆಯ ಹೆಣ್ಮಕ್ಕಳ ಬಗ್ಗೆಯೂ ಹೆಚ್ಚು ಸುರಕ್ಷತೆಯಿಂದ ಇರುತ್ತಾರೆ.

ಮಹಿಳೆಯರನ್ನು ಮುಟ್ಟಲೂ ಬಿಡುವುದಿಲ್ಲ, ಯಾರೇ ಆಗಲಿ ಮನೆಯ ಹೆಣ್ಮಗಳಿಗೆ ಯಾವುದೇ ರೀತಿಯ ಹಿಂಸೆ ನೀಡಿದ್ದಲ್ಲಿ ಬ್ಲೇಡ್, ಚಾಕುವಿನಿಂದ ಹಲ್ಲೆ ಮಾಡುತ್ತಾರೆ. ಮಲನಾದ ಸ್ಥಳೀಯರು ‘ಕಾನಾಶಿ’ (Kanashi) ಭಾಷೆಯನ್ನು ಮಾತನಾಡುತ್ತಾರೆ.

ಅದು ನೆರೆಯ ಹಳ್ಳಿಗಳಲ್ಲಿ ಮಾತನಾಡುವ ಯಾವುದೇ ಉಪಭಾಷೆಗಳಂತೆ ಇರುವುದಿಲ್ಲ. ಈ ಭಾಷೆಯು ಗ್ರಾಮದ ರಹಸ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ, ಈ ಭಾಷೆಯನ್ನು ನೆರೆ ಹಳ್ಳಿಯವರು ಅಥವಾ ಹೊರಗಿನವರು ಬಳಸಲು ಅನುಮತಿಯಿಲ್ಲ!

ಪವಿತ್ರ

Exit mobile version