ಟ್ರಾಫಿಕ್ ಫೈನ್ ಕಲೆಕ್ಟ್ ಮಾಡಲು ಪೊಲೀಸರು ಮಾಸ್ಟರ್ ಪ್ಲಾನ್

ಬೆಂಗಳೂರು, ಡಿ. 08:  ವಾಹನ ಸವಾರರೇ ಎಚ್ಚರ! ಇನ್ಮುಂದೆ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವ ವಾಹನಕ್ಕೆ ಇನ್ಶುರೆನ್​​ ಮತ್ತು ಎಮಿಷನ್ ಟೆಸ್ಟ್ ಸಿಗಲ್ಲ.

ಬಾಕಿ ಉಳಿದಿರುವ 330 ಕೋಟಿ ರೂಪಾಯಿ ಟ್ರಾಫಿಕ್ ಫೈನ್ ಕಲೆಕ್ಟ್ ಮಾಡಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ವಾಹನಗಳಿಗೆ ಇನ್ಶುರೆನ್ಸ್​ ಚಾಲ್ತಿ ಮಾಡಿವಾಗ ಹಾಗೂ ಎಮಿಷನ್ ಟೆಸ್ಟ್ ಮಾಡಿಸುವ ವೇಳೆ ಬಾಕಿ ದಂಡ ಪಾವತಿ ಕಡ್ಡಾಯ. ಇಲ್ಲವಾದಲ್ಲಿ ಈ ಎರಡೂ ಸೌಲಭ್ಯ ಸಿಗುವುದಿಲ್ಲ. ಈ ಕಾನೂನನ್ನು ಶೀಘ್ರವೇ ಜಾರಿಗೆ ತರಲು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ದಂಡ ಪಾವತಿಸದೆ 90 ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಕೇಸ್ ಬಾಕಿ ಇವೆ. ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಮೂರು ವರ್ಷದಲ್ಲಿ ಶೇ.10 ಮಾತ್ರ ದಂಡ ವಸೂಲಿ ಆಗಿದೆ. ಈಗಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

ಬಾಕಿ ಉಳಿದಿರುವ ದಂಡ ವಸೂಲಿಗೆ ವಿಮಾ ಕಂಪನಿಗಳ ಜತೆ ಸಂಚಾರಿ ಪೊಲೀಸರು ಕೈ ಜೋಡಿಸುತ್ತಿದ್ದು, ದಂಡ ಬಾಕಿ ಇಲ್ಲದ ವಾಹನಕ್ಕಷ್ಟೇ ಎಮಿಷನ್ ಟೆಸ್ಟ್ ಹಾಗೂ ಇನ್ಶುರೆನ್ಸ್ ಸೌಲಭ್ಯ ಸಿಗಲಿದೆ. ಈ ಸಂಬಂಧ ವಿಮಾ ಕಂಪನಿಗಳಿಗೆ ಹಾಗೂ ಮಾಲಿನ್ಯ ನಿಯಂತ್ರಣ ಕೇಂದ್ರಕ್ಕೆ ಆರ್​ಟಿಒ ಇಲಾಖೆಯು ಪತ್ರ ರವಾನಿಸಿದೆ. ತಮ್ಮೊಂದಿಗೆ ಕೈ ಜೋಡಿಸುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪತ್ರ ಬರೆದಿದ್ದಾರೆ.

ಇನ್ಶುರೆನ್ಸ್ ಹಾಗೂ ಎಮಿಷನ್ ಟೆಸ್ಟ್ ಚಾಲ್ತಿ ವೇಳೆ ಬಾಕಿ ಇರುವ ದಂಡ ವಸೂಲಿ ಮಾಡಲು ಪೊಲೀಸರು ಪ್ಲಾನ್ ಮಾಡಿದ್ದಾರೆ.

Exit mobile version