ಟ್ರಾಫಿಕ್‌ ಗುಡ್ ನ್ಯೂಸ್‌: ದಂಡ ಕಟ್ಟದೆ ಬಾಕಿ ಉಳಿಸಿದವರಿಗೆ 50% ರಿಯಾಯಿತಿ

Bengaluru: ರಸ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದರೆ ಇಂದೇ ಕೊನೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ (Traffic Good News) ಸೆಪ್ಟೆಂಬರ್‌ 9ಕ್ಕೆ

ಮುಕ್ತಾಯವಾಗಲಿದ್ದು, 65 ದಿನ ಕೊಟ್ಟರೂ ವಾಹನ ಸವಾರರು ಆಸಕ್ತಿಯಿಂದ ಇದನ್ನು ಸದುಪಯೋಗಪಡಿಸಿಕೊಳ್ಳದೆ ರಾಜ್ಯಾದ್ಯಂತ ಇನ್ನೂ 100 ಕೋಟಿ ರೂಪಾಯಿ ದಂಡ ಬಾಕಿ ಇರುವುದಲ್ಲದೆ ಇನ್ನು

ಫೈನ್‌ (Traffic Good News) ಬಾಕಿ ಉಳಿಸಿಕೊಂಡಿರುವವರೆಲ್ಲರು ಕಟ್ಟಬೇಕಾಗಿದೆ.

ಇದೇ ವರ್ಷ ಫೆಬ್ರವರಿ 2 ಕ್ಕಿಂತ ಹಿಂದೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಇ-ಚಲನ್‌ಗಳಲ್ಲಿ ದಾಖಲಾಗಿರುವ ಕೇಸ್‌ಗಳಿಗೆ ಮಾತ್ರವೇ ಅನ್ವಯವಾಗುವಂತೆ ಜುಲೈ 5ರಂದು

ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಆದರೆ ಡಿಸ್ಕೌಂಟ್‌ ಸದುಪಯೋಗಪಡಿಸಿಕೊಳ್ಳಲು ವಾಹನ ಸವಾರರು ಹಿಂದೇಟು ಹಾಕಿದ್ದರು

ಫೈನ್‌ ನಿಂದಾಗಿ 8 ಕೋಟಿ ಸಂಗ್ರಹ
ಬರೋಬ್ಬರಿ ಎರಡು ತಿಂಗಳ ಡಿಸ್ಕೌಂಟ್‌ ಅವಧಿಯಲ್ಲಿ ಬೆಂಗಳೂರು (Bengaluru) ನಗರಕ್ಕೆ ಸಂಬಂಧಿಸಿದಂತೆ 2,53,519 ಕೇಸ್‌ಗಳನ್ನು ಇತ್ಯರ್ಥಪಡಿಸಿಕೊಂಡಿರುವ ವಾಹನ ಸವಾರರು

ಸುಮಾರು 8,07,73,190 ರೂ. ದಂಡ ಪಾವತಿಸಿದ್ದು, ರಾಜ್ಯದ ವಿವಿಧ ನಗರಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ದಂಡ ಪಾವತಿಯಾಗಿಲ್ಲ ಎಂದು ತಿಳಿದು ಬಂದಿದೆ.

ಅಲ್ಲದೆ ರಸ್ತೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಮುಲಾಜಿಲ್ಲದೆ ತಡೆದು ಸ್ಥಳದಲ್ಲೇ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾದ ಅಲೋಕ್‌ ಮೋಹನ್‌

ಅವರು ಟ್ರಾಪಿಕಾ ಪೋಲಿಸರಿಗೆ ಸೂಚನೆ ಹೊರಡಿಸಿದ್ದು, ಸಂಚಾರ ಟ್ರಾಫಿಕ್ (Traffic) ಪೊಲೀಸ್‌ ಸಿಬ್ಬಂದಿ ಮೊದಲೇ ಸಂಚಾರ ರಸ್ತೆಯ ಮೇಲಿದ್ದು ತಮ್ಮ ವ್ಯಾಪ್ತಿಗೆ ಸಂಬಂಧಪಟ್ಟ ರಸ್ತೆಗಳಲ್ಲಿ

ಸರಿಯಾದ ಕ್ರಮಕೈಗೊಳ್ಳಬೇಕು ಇಲ್ಲದೆ ಹೋದರೆ ಇದರಿಂದ ಸಂಚಾರ ಪೊಲೀಸರಿಗೆ ತಮ್ಮ ವ್ಯಾಪ್ತಿಯಲ್ಲಿ ಆ ಕ್ಷಣದ ಸಂಚಾರ ಸಮಸ್ಯೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ.

ಕಣ್ಣಿಗೆ ಗೋಚರಿಸುವ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಹೊರತುಪಡಿಸಿ ಬೇರೆ ವಾಹನ ಸವಾರರನ್ನು ರಸ್ತೆಯಲ್ಲಿ ತಡೆಯಬಾರದು ಮತ್ತು ಟ್ರಾಫಿಕ್ ಪೊಲೀಸರು ಸಾಧ್ಯವಾದಷ್ಟು

ಎಲ್ಲ ವೇಳೆಯಲ್ಲೂ ಬಾಡಿ ವೋರ್ನ್‌ ಕ್ಯಾಮೆರಾ (Camera) ದರಿಸತಕ್ಕದು ಎಂದು ಸೂಚನೆ ನೀಡಲಾಗಿದೆ.

ನೊ ಪಾರ್ಕಿಂಗ್
ವಾಹನ ನಿಲುಗಡೆ ನಿರ್ಬಂಧಿತ ಸ್ಥಳದಲ್ಲಿ ನಿಲುಗಡೆ ಮಾಡಿದ ವಾಹನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಲ್ಲದೆ ಅಂತಹ ಸಂದರ್ಭದಲ್ಲಿ ವಾಹನಗಳನ್ನು ಕೂಡಲೇ ತೆರವುಗೊಳಿಸಿ

ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ರಸ್ತೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಮ್ಮ ವ್ಯಾಪ್ತಿಗೆ ಸಂಬಂಧಪಟ್ಟ ಎಎಸ್‌ಐ (ASI) ಹಾಗೂ ಮೇಲ್ಪಟ್ಟ ಅಧಿಕಾರಿಗಳಿಗೆ

ತಕ್ಷಣ ರವಾನಿಸಬೇಕು ಎಂದು ಸೂಚಿಸಲಾಗಿದೆ.

ರಾಜ್ಯಾದ್ಯಂತ 259 ಕೋಟಿ ಫೈನ್‌ ಬಾಕಿ!
ರಾಜ್ಯಾದ್ಯಂತ ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟ ವಾಹನ ಸವಾರರು ಹಲವು ವರ್ಷಗಳಿಂದ ದಂಡ ಪಾವತಿಸದೆ ಸುಮಾರು 259 ಕೋಟಿರೂಪಾಯಿ ಉಳಿಸಿಕೊಂಡಿದ್ದು,

ಹೀಗಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸಾರಿಗೆ ಹಾಗೂ ಸಂಚಾರ ಪೊಲೀಸರ ಜೊತೆ ಚರ್ಚಿಸಿ ಶೇಖಡಾ 50ರಷ್ಟು ದಂಡ ವಿನಾಯಿತಿ ಘೋಷಿಸುವಂತೆ ಸರಕಾರಕ್ಕೆ

ಶಿಫಾರಸು ಮಾಡಿದ್ದು, ಈ ಪರಿಣಾಮ ಫೆಬ್ರವರಿ (February) ಹಾಗೂ ಮಾರ್ಚ್‌ನಲ್ಲಿ ಎರಡು ಅವಧಿಯಲ್ಲಿ ವಿನಾಯಿತಿ ನೀಡಲಾಗಿತ್ತು.

ಸರ್ಕಾರದ ಖಜಾನೆ 120 ಕೋಟಿ!
ಶೇಕಡಾ 50 ರಷ್ಟುದಂಡ ವಿನಾಯಿತಿ ಘೋಷಿಸಿದ್ದಕ್ಕೆ ವಾಹನ ಸವಾರರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, 35.60 ಲಕ್ಷ ಬಾಕಿ ಕೇಸ್‌ಗಳು ಇತ್ಯರ್ಥಗೊಂಡು 120 ಕೋಟಿ ರೂ.ಗಳಿಗೆ ಹೆಚ್ಚು ಮೊತ್ತ

ಸರಕಾರದ ಖಜಾನೆ ಸೇರಿದ್ದು ಇದೀಗ ಮೂರನೇ ಬಾರಿ ಜುಲೈ (July) 5 ರಂದು 60 ದಿನಗಳಿಗೂ ಹೆಚ್ಚು ಕಾಲಾವಕಾಶ ನೀಡಿದರೂ ಸಹ ವಾಹನ ಸವಾರರು ಬೇಜವಾಬ್ದಾರಿ ತೋರಿಸಿದ್ದಾರೆ ಎನ್ನಲಾಗಿದೆ.

ಮತೊಮ್ಮೆ ಸಿಗುತ್ತಾ ವಿನಾಯಿತಿ!
ಈ ರಿಯಾಯಿತಿ ಅವಧಿ ಮುಕ್ತಾಯಗೊಂಡ ನಂತರ ಕಾನೂನು ಸೇವಾ ಪ್ರಾಧಿಕಾರ ಮತ್ತು ರಾಜ್ಯ ಸರಕಾರಕ್ಕೂ ದಂಡ ಸಂಗ್ರಹ, ಬಾಕಿ ದಂಡದ ಕುರಿತು ವರದಿ ಸಲ್ಲಿಸಲಾಗುವುದು ಅಲ್ಲದೆ ಅವಧಿಯನ್ನು

ವಿಸ್ತರಿಸುವ ಬಗ್ಗೆ ಪ್ರಾಧಿಕಾರ ನಿರ್ಧರಿಸಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು ಎನ್ನಲಾಗುತ್ತಿದೆ.

ಫೈನ್‌ ಪಾವತಿ ಹೇಗೆ ಪಾವತಿಸಬೇಕು?
೧. ಕರ್ನಾಟಕ ಒನ್‌ ಆನ್‌ಲೈನ್‌ ಪೋರ್ಟಲ್‌ (Portal).
೨. ಸಮೀಪದ ಕರ್ನಾಟಕ ಒನ್‌,
೩. ಹತ್ತಿರದ ಸಂಚಾರಿ ಪೊಲೀಸ್‌ ಠಾಣೆ.
೪. ಬೆಂಗಳೂರು ಒನ್‌ನಂತಹ ಸೇವಾಕೇಂದ್ರ ಇಲ್ಲಿ ಪಾವತಿಸಬಹುದಾಗಿದೆ.

ಇದನ್ನು ಓದಿ: ಮೈತ್ರಿ ಮಾತುಕತೆ: ಬಿಜೆಪಿ- ಜೆಡಿಎಸ್ ನಡುವೆ ಮೈತ್ರಿಯಾದರೆ 28 ಸ್ಥಾನ ಗೆಲ್ಲುತ್ತೇವೆ ಕೆ.ಎಸ್.ಈಶ್ವರಪ್ಪ

Exit mobile version