ರೈಲು ದುರಂತ: ಆಂಧ್ರದಲ್ಲಿ ನಿಂತಿದ್ದ ರೈಲಿಗೆ ಮತ್ತೊಂದು ರೈಲು ಡಿಕ್ಕಿ, 9 ಪ್ರಯಾಣಿಕರ ದುರ್ಮರಣ

Visakhapatam : ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂ ಜಿಲ್ಲೆಯಲ್ಲಿ ರೈಲು ದುರಂತ ಸಂಭವಿಸಿದ್ದು, ಎರಡು ರೈಲುಗಳ ಮಧ್ಯೆ ನಡೆದ ಘರ್ಷಣೆಯ ತೀವ್ರತೆಗೆ 9 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಿಗ್ನಲಿಂಗ್ (Signaling) ಸಮಸ್ಯೆಯಿಂದ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ವಿಜಯನಗರಂನಿಂದ ರಾಯಗಢಕ್ಕೆ (Raigad) ತೆರಳುತ್ತಿದ್ದ ಪ್ಯಾಸೆಂಜರ್‌ ರೈಲು, ವಿಶಾಖಪಟ್ಟಣಂನಿಂದ ಪಲಾಸಾಗೆ ತೆರಳುತ್ತಿದ್ದ ಪ್ಯಾಸೆಂಜರ್‌ (Passenger) ರೈಲಿಗೆ ಅದೇ ಮಾರ್ಗದಲ್ಲಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಎರಡೂ ರೈಲಿನ ಒಟ್ಟು 4 ಬೋಗಿಗಳು ಹಳಿತಪ್ಪಿದ್ದು, ಅಪಘಾತದ ತೀವ್ರತೆಗೆ 9 ಜನ ಮೃತಪಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆಗಳಿವೆ.

ತುರ್ತು ಪರಿಹಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದು, ಘಟನೆಗೆ ಆಘಾತ ವ್ಯಕ್ತಪಡಿಸಿರುವ ಸಿಎಂ ಜಗನ್‌ ಮೋಹನ್‌ ರೆಡ್ಡಿ (Jagan Mohan Reddy) ಅವರು, ಗಾಯಗೊಂಡವರಿಗೆ ತ್ವರಿತ ವೈದ್ಯಕೀಯ ಸೇವೆಗಳು ಸಿಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಸಹಾಯವಾಣಿ ಬಿಡುಗಡೆ ಮಾಡಲಾಗಿದೆ.

ಇನ್ನು ಸಿಗ್ನಲಿಂಗ್‌ ದೋಷದಿಂದ ಈ ಅಪಘಾತ ನಡೆದಿರಬಹುದು ಎಂದು ರೈಲ್ವೆ ಮೂಲಗಳು ತಿಳಿಸಿವೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅಪಘಾತದಲ್ಲಿ ಮೈತರಾದವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ

ಭವ್ಯಶ್ರೀ ಆರ್ ಜೆ

Exit mobile version