Visa ಇಲ್ಲದೆ ವಿದೇಶಕ್ಕೆ ಹೋಗುವ ಕನಸು ಈಗ ನನಸು

ವಿಮಾನದಲ್ಲಿ ಕುಳಿತು ವಿದೇಶಕ್ಕೆ(Travel Foriegn Without Visa) ಹೋಗುವುದು ಎಷ್ಟೋ ಜನರ ಕನಸು. ಆದರೆ ಅದು ಸುಲಭದ ಮಾತ? ಪಾಸ್ಪೋರ್ಟ್ ಮತ್ತು ವೀಸಾ ಎಂದೆಲ್ಲಾ ತಲೆನೋವು ಇದ್ದಿದ್ದೇ. ಆದರೆ ಇದೀಗ ವಿದೇಶ ಪ್ರಯಾಣಿಗರಿಗೆ ಸಿಹಿ ಸುದ್ದಿ .

ಆಧಾರ್ ಕಾರ್ಡ್(Aadhaar card) ಒಂದಿದ್ದರೆ ಸಾಕು ವಿಮಾನದ ಪಯಣ ಸರಳ ಹಾಗೂ ಸುಲಭ. ಕೇವಲ ಫೋಟೋ ಐಡಿ(Photo ID) ಇದ್ದರೆ ಸಾಕು ವಿಮಾನದಲ್ಲಿ ಪ್ರಯಾಣ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ.

ಅಂದರೆ ಇನ್ನೂ ಮುಂದೆ ವಿದೇಶಕ್ಕೆ ಹೋಗುವಾಗ ಪಾಸ್ಪೋರ್ಟ್(Passport) ಕಡ್ಡಾಯವಾಗಿ ಹೊಂದಿರುವ ಅಗತ್ಯವಿಲ್ಲ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ.


ಹಾಗಾದರೆ ವಿದೇಶಕ್ಕೆ ಟಿಕೆಟ್ ಬುಕ್ (Travel Foriegn Without Visa) ಮಾಡಿಕೊಂಡು ವಿಮಾನ ಹತ್ತಿ ವಿದೇಶಕ್ಕೆ ಹೋಗಬಹುದಾ? ಪಾಸ್‌ಪೋರ್ಟ್ ಇಲ್ಲದೆ ಎಲ್ಲಾ ದೇಶಗಳಿಗೂ ಪ್ರಯಾಣಿಸಬಹುದಾ?

ಅಥವಾ ಕೆಲವೇ ದೇಶಗಳಿಗೆ ಮಾತ್ರ ಪ್ರಯಾಣಿಸಬಹುದಾ? ಅಂತ ಅನೇಕರಿಗೆ ಹಲವಾರು ರೀತಿಯ ಪ್ರಶ್ನೆಗಳು ಮೂಡಿರುತ್ತದೆ.

ಇದನ್ನೂ ಓದಿ : https://vijayatimes.com/covid-19-precaution/

ಕೆಲವು ದೇಶಗಳಿಗೆ ಪ್ರಯಾಣಿಸಲು ಪಾಸ್‌ಪೋರ್ಟ್ ಬೇಕಾಗಿಲ್ಲ. ಕೇವಲ ಫೋಟೋ ಐಡಿ ಇದ್ದರೆ ಸಾಕು, ಈ ದೇಶಗಳಲ್ಲಿ ಪ್ರಯಾಣಿಸಲು ಅನುಮತಿ ಸಿಗುತ್ತದೆ.

ಆದರೆ ಇದಕ್ಕೊಂದು ನಿಯಮವಿದೆ.ಪ್ರಯಾಣಿಗರು 15 ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು,

ಆಧಾರ್ ಕಾರ್ಡನ್ನು ತೋರಿಸುವ ಮೂಲಕ ನೀವು ಭೂತಾನ್ (Bhutan) ಮತ್ತು ನೇಪಾಳ(Nepala) ದೇಶಗಳಿಗೆ ಪ್ರವೇಶವನ್ನು ಪಡೆಯಬಹುದು.

ಪಾಸ್‌ಪೋರ್ಟ್ ಮತ್ತು ವೀಸಾ (Visa) ಇಲ್ಲದೆ ಕೆಲವು ದೇಶಗಳಿಗೆ ಹೇಗೆ ಪ್ರಯಾಣಿಸಬಹುದು ಎಂಬ ವಿಷಯ ಈಗ ಕುತೂಹಲ ಮೂಡಿಸಿದೆ.

ಭೂತಾನ್ ಗೆ ಭೇಟಿ ನೀಡಲು ಬಯಸುವ ಭಾರತೀಯ ಪ್ರಯಾಣಿಕರು ಪಾಸ್‌ಪೋರ್ಟ್ ಅನ್ನು ಹೊಂದಿರಬೇಕಾಗುತ್ತದೆ.

ಇದು ಕನಿಷ್ಠ 6 ತಿಂಗಳ ಸಿಂಧುತ್ವವನ್ನು ಹೊಂದಿದೆ. ಒಂದು ವೇಳೆ ಪ್ರಯಾಣಿಗರ ಬಳಿ ಪಾಸ್‌ಪೋರ್ಟ್ ಇಲ್ಲದಿದ್ದರೆ, ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಸಹ ಭೂತಾನ್ ಗೆ ಹೋಗಬಹುದು.

ಮಕ್ಕಳು ವಿದೇಶಕ್ಕೆ ಪ್ರಯಾಣ ಮಾಡುವುದಾದರೆ ಜನನ ಪ್ರಮಾಣಪತ್ರ (Birth Certificate) ಅಥವಾ ಶೈಕ್ಷಣಿಕ ಶಾಲಾ ಗುರುತಿನ ಚೀಟಿಯನ್ನು (Educational School Identity Card) ಹೊಂದಿದ್ದರೆ ಭೂತಾನ್ ಪ್ರಯಾಣ ಮಾಡಬಹುದು.

ಇದನ್ನೂ ಓದಿ : https://vijayatimes.com/nirmala-sitharaman-admitted-to-hospital/

ನೇಪಾಳಕ್ಕೆ ಭೇಟಿ ನೀಡಲು ಭಾರತೀಯರಿಗೆ ಪಾಸ್‌ಪೋರ್ಟ್ ಅಥವಾ ವಿಸಾದ ಅಗತ್ಯವಿದೆಯೇ ? ಎಂಬ ಪ್ರಶ್ನೆಗೆ ನೇಪಾಳ ಸರ್ಕಾರವು(Nepal Government ) ಭಾರತೀಯ ಪೌರತ್ವವನ್ನು(Indian citizenship) ಸಾಬೀತುಪಡಿಸುವ ಅಂತಹ ಒಂದು ದಾಖಲೆ ಪತ್ರ ಮಾತ್ರ ನಮಗೆ ಬೇಕು.

ಇದಕ್ಕಾಗಿ ನೀವು ನಿಮ್ಮ ಮತದಾರರ ಗುರುತಿನ ಚೀಟಿ ಅಥವಾ ಭಾರತೀಯ ಪಾಸ್‌ಪೋರ್ಟ್ ಅನ್ನು ಪ್ರಸ್ತುತಪಡಿಸಬಹುದು ಎಂದು ತಿಳಿಸಿದೆ.

ಒಟ್ಟಾರೆ ನೇಪಾಳ್ ಗೆ ಹೋಗಬೇಕು ಎಂದರೇ ಸದ್ಯಕ್ಕೆ ಭಾರತೀಯ ಎಂಬ ದಾಖಲೆ ಪತ್ರ ಇದ್ದರೆ ಸಾಕು.

ಭೂತಾನ್ ಮತ್ತು ನೇಪಾಳ ದೇಶವನ್ನು ಹೊರತುಪಡಿಸಿ, ಪಾಸ್‌ಪೋರ್ಟ್ ಅಗತ್ಯವಿರುವ ಕೆಲವು ದೇಶಗಳಿವೆ ಅಲ್ಲಿ ವೀಸಾದ ಅಗತ್ಯವಿಲ್ಲ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಾಗಿ,

ವಿಶ್ವದಾದ್ಯಂತದ 58 ಪ್ರವಾಸಿ ತಾಣಗಳಿಗೆ ಪೂರ್ವ ವೀಸಾದ ಅನುಮೋದನೆಯಿಲ್ಲದೆ ಪ್ರಯಾಣಿಸಬಹುದು.

ಮಾಲ್ಡೀವ್ಸ್, ಮಾರಿಷಿಯಸ್(Mauritius), ಶ್ರೀಲಂಕಾ, ಥೈಲ್ಯಾಂಡ್, ಮಕಾವ್,ಕಾಂಬೋಡಿಯಾ,ಕೀನ್ಯಾ, ಮ್ಯಾನ್ಮಾರ್, ಕತಾರ್(Qatar), ಉಗಾಂಡಾ, ಇರಾನ್, ಸೀಶೆಲ್ಸ್ ಮತ್ತು ಜಿಂಬಾಬ್ವೆ

ವಿದೇಶಕ್ಕೆ ಹೋಗಿ ಬರಬೇಕು ಅನ್ನೋ ಆಸೆ ಇರುವವರಿಗೆ ಇದೊಂದು ಸಿಹಿಸುದ್ದಿ ಎಂದರೇ ತಪ್ಪಲ್ಲ ಇದರ ಸದುಪಯೋಗ ಪಡೆದುಕೊಂಡು ವಿಮಾನದ ಪಯಣದ ಆಸೆ ನನಸು ಮಾಡಿಕೊಳ್ಳಿ.

Exit mobile version