Job News : ಪದವಿ (Graduation)ಅಥವಾ ಸ್ನಾತಕೋತ್ತರ ಪದವಿಯನ್ನು(Master’s degree) ಉತ್ತೀರ್ಣ ಹೊಂದಿ ಸದ್ಯ ಒಳ್ಳೆಯ ಉದ್ಯೋಗಕ್ಕಾಗಿ(TRIFED organization Job Opportunity)
ಹುಡುಕಾಟ ಆರಂಭಿಸಿದ್ದೀರಾ..? ಹಾಗಾದರೆ ಇಲ್ಲಿದೆ ನೋಡಿ ಜಾಬ್ ಆಫರ್. ಇಂಟರ್ನ್ಗಳು(Intern) ಮತ್ತು ಪ್ರೋಗ್ರಾಂ ಅಸೋಸಿಯೇಟ್ಗಳಿಗೆ(Program Associate) ಕೇಂದ್ರ ಸರ್ಕಾರದ ಟ್ರೈಫೆಡ್
ಸಂಸ್ಥೆಯು(TRIFED organization) ಅರ್ಜಿ ಆಹ್ವಾನಿಸಿದೆ. ಅರ್ಹತೆ ತಿಳಿದು ಅರ್ಜಿ ಹಾಕಿರಿ.
ಭಾರತ ಸರ್ಕಾರದ ಒಂದು ಸಂಸ್ಥೆಯಾಗಿದೆ ಈ ಟ್ರೈಬಲ್ ಕೋಆಪರೇಟಿವ್ ಮಾರ್ಕೆಟಿಂಗ್ ಡೆವಲಪ್ಮೆಂಟ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ (Tribal Cooperative Marketing Development
Federation of India Limited) – ಟ್ರೈಫೆಡ್. ಇದು ಬುಡಕಟ್ಟು ಜನಾಂಗದವರ(Tribe) ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಇದರಲ್ಲಿ ಪ್ರೋಗ್ರಾಂ
ಸಹವರ್ತಿಗಳಾಗಿ ಮತ್ತು ಇಂಟರ್ನ್ಗಳು ಹುದ್ದೆಗಳಿಗೆ ನೇಮಕ (TRIFED organization Job Opportunity) ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.

ಹುದ್ದೆಗಳ ಹೆಸರು : ಇಂಟರ್ನ್ಗಳು ಮತ್ತು ಪ್ರೋಗ್ರಾಂ ಸಹವರ್ತಿಗಳು
ಹುದ್ದೆಗಳ ಸಂಖ್ಯೆ : 30
ನೇಮಕಾತಿ ಪ್ರಾಧಿಕಾರ : ಟ್ರೈಫೆಡ್
ವಿದ್ಯಾರ್ಹತೆ : ಯಾವುದೇ ಪದವಿ / ಸ್ನಾತಕೋತ್ತರ ಪದವಿ.
ಇದನ್ನೂ ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 53 ಹುದ್ದೆಗಳಿಗೆ ನೇರ ನೇಮಕಾತಿ: ಅರ್ಜಿ ಆಹ್ವಾನ… ಇಲ್ಲಿದೆ ಮಾಹಿತಿ
ಆಯ್ಕೆ ಪ್ರಕ್ರಿಯೆ ಹೀಗಿದೆ
ಮೊದಲನೇ ಹಂತ : ಟ್ರೈಫೆಡ್ ಕೇಂದ್ರ ಕಛೇರಿಯಲ್ಲಿ ಅರ್ಜಿಗಳನ್ನು ಸಂದರ್ಶನಕ್ಕೆ ಶಾರ್ಟ್ ಲಿಸ್ಟ್(Short list) ಮಾಡಲಾಗುತ್ತದೆ.
ಎರಡನೇ ಹಂತ ; ನೇರ ಸಂದರ್ಶನವನ್ನು ಪ್ರಾದೇಶಿಕ ಕಛೇರಿಗಳಲ್ಲಿ ನಡೆಸಲಾಗುತ್ತದೆ.
ಮೂರನೇ ಹಂತ : ನಿಖರತೆಗಾಗಿ ದೆಹಲಿ(Delhi) ಕೇಂದ್ರ ಕಛೇರಿಯಲ್ಲಿ ಸಂದರ್ಶನ.
ಸಂಭಾವನೆ ಹೇಗಿರುತ್ತದೆ
ಮಾಸಿಕ ರೂ.30,000 ಜತೆಗೆ ಇತರೆ ಪ್ರಯಾಣ ಭತ್ಯೆಗಳನ್ನು ಪದವೀಧರರು / ಸ್ನಾತಕೋತ್ತರ ಪದವೀಧರರಿಗೆ ನೀಡಲಾಗುತ್ತದೆ.

ಅರ್ಹತೆಗಳು ಏನಿದೆ
ಪದವಿ / ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.
ಲಿಖಿತ ಮತ್ತು ಮೌಖಿಕ ಸಂವಹನ ಕೌಶಲ ಮತ್ತು ಸಾಮಾಜಿಕ ಜಾಲತಾಣ ಬಳಕೆ ಗೊತ್ತಿರಬೇಕು
ಕಂಪ್ಯೂಟರ್ ಬಳಕೆ (ಎಕ್ಸೆಲ್, ವರ್ಡ್, ಪವರ್ಪಾಯಿಂಟ್)
ಒಟ್ಟು 03 ಇಂಟರ್ನಿಗಳನ್ನು ಕರ್ನಾಟಕ ಕೇರಳ ಗೋವಾ ತಮಿಳುನಾಡುಗಳಲ್ಲಿ ನೇಮಕ ಮಾಡಲಾಗುತ್ತದೆ.
ಇದನ್ನೂ ಓದಿ : NESTS ಶಿಕ್ಷಣ ಸೊಸೈಟಿಯಲ್ಲಿ ಪದವೀಧರ ಶಿಕ್ಷಕರು ಸೇರಿದಂತೆ ಒಟ್ಟು 6329 ಹುದ್ದೆ ನೇಮಕ : ಕೇಂದ್ರ ಸರ್ಕಾರದ ವೇತನ ಜೊತೆಗೆ ಇತರೆ ಸೌಲಭ್ಯಗಳು
ಅರ್ಜಿ ಸಲ್ಲಿಸಬೇಕಾದ ವಿಳಾಸ : ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿ ವಿಭಾಗ, ಟ್ರೈಫೆಡ್, ಪ್ರಧಾನ ಕಚೇರಿ, ನವದೆಹಲಿ. ಇವರಿಗೆ ತ್ವರಿತ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಕೆಳಗಿನ
ಇ-ಮೇಲ್ ವಿಳಾಸಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇ-ಮೇಲ್ ವಿಳಾಸ : pers.div.trifed@gmail.com

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 28-08-2023
ನೇರ ಸಂದರ್ಶನ ದಿನಾಂಕ : 11-09-2023 ರಂದು ಸಂಜೆ 05 ಗಂಟೆವರೆಗೆ.
ದೃಢೀಕರಣ ಸಂದರ್ಶನ ದಿನಾಂಕ : 25-09-2023 ರಂದು.
ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿತ್ತಾರೋ ಅವರ ಆಯ್ಕೆ ಪ್ರಕ್ರಿಯೆ, ಸಂದರ್ಶನಕ್ಕೆ ಆಹ್ವಾನದ ಬಗ್ಗೆ ಮುಂತಾದವುಗಳನ್ನು ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ ಸಂಪರ್ಕಿಸಲಾಗುವುದು.
ರಶ್ಮಿತಾ ಅನೀಶ್