ರಾವಣ ಪಾತ್ರಧಾರಿ ತ್ರಿವೇದಿ ವಿಧಿವಶ

ಮುಂಬೈ ಅ 6 : ಹಿಂದಿಯ ಜನಪ್ರಿಯ  ರಾಮಾಯಣ ಧಾರವಾಹಿಯ  ಪಾತ್ರಧಾರಿ ಹಿರಿಯ ಕಲಾವಿಧ ನಟ ಅರವಿಂದ ತ್ರಿವೇದಿ (82) ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಅರವಿಂದ ತ್ರಿವೇದಿ ಅವರು ಕೆಲವು ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು ಹಾಗೂ ಹೃದಯಾಘಾತ, ಬಹುಅಂಗಾಂಗ ವೈಫಲ್ಯದ ಕಾರಣಗಳಿಂದಾಗಿ ಅವರು ಸಾವಿಗೀಡಾದರು. ಮುಂಬೈನ ದಹನಕರವಾಡಿಯಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದೆ

1938ರಲ್ಲಿ ಇಂದೋರ್‌ ನಲ್ಲಿ  ಜನಿಸಿದ ಅವರು ಅನೇಕ ಸೂಪರ್‌ ಹಿಟ್ ಚಲನ ಚಿತ್ರಗಳಲ್ಲಿ ನಟಿಸಿದ್ದರು. ಗುಜರಾತಿ ಚಿತ್ರರಂಗದಲ್ಲಿ 40 ವರ್ಷಗಳ ಕಾಲ ಅರವಿಂದ್ ತ್ರಿವೇದಿ ಸಕ್ರೀಯರಾಗಿದ್ದರು. ಹಿಂದಿ ಮತ್ತು ಗುಜರಾತಿ ಸೇರಿದಂತೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅರವಿಂದ್ ತ್ರಿವೇದಿ ಮಿಂಚಿದ್ದರು. ಸಾಮಾಜಿಕ ಮತ್ತು ಪೌರಾಣಿಕ ಸಿನಿಮಾಗಳಲ್ಲಿ ಪಾತ್ರ ನಿಭಾಯಿಸುತ್ತಿದ್ದ ಅರವಿಂದ್ ತ್ರಿವೇದಿ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಿದ್ದರು.

ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ತ್ರಿವೇದಿ

ಅರವಿಂದ್ ತ್ರಿವೇದಿ ಅವರು ಚತ್ರರಂಗ ಮಾತ್ರವಲ್ಲದೆ ರಾಜಕಾರಣಕ್ಕೂ ಧುಮುಕಿದ್ದರು, 1991 ರಿಂದ 1996 ರವರೆಗೆ ಸಂಸತ್ ಸದಸ್ಯರಾಗಿ ಅರವಿಂದ್ ತ್ರಿವೇದಿ ಆಯ್ಕೆ ಆಗಿದ್ದರು. ಸೆನ್ಸಾರ್ ಬೋರ್ಡ್ ಫಾರ್ ಫಿಲ್ಮ್ ಸರ್ಟಿಫಿಕೇಷನ್‌ನ ಅಧ್ಯಕ್ಷರಾಗಿಯೂ ಅರವಿಂದ್ ತ್ರಿವೇದಿ ಕಾರ್ಯನಿರ್ವಹಿಸಿದ್ದರು.

Exit mobile version