ಎನ್‌ಎಲ್‌ಎಫ್‌ಟಿ ಉಗ್ರರಿಂದ ಇಬ್ಬರು ಬಿಎಸ್‌ಎಫ್‌ ಯೋಧರ ಹತ್ಯೆ

ನವದೆಹಲಿ: ತ್ರಿಪುರಾದ ಧಲಾಯಿ ಜಿಲ್ಲೆಯಲ್ಲಿ ಮಂಗಳವಾರ ನಿಷೇಧಿತ ನ್ಯಾಷನಲ್ ಲಿಬರೇಷನ್‌ ಫ್ರಂಟ್‌ ಆಫ್ ತ್ರಿಪುರಾ(ಎನ್‌ಎಲ್‌ಎಫ್‌ಟಿ) ಸಂಘಟನೆಯ ಉಗ್ರರು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರು ಹೊಂಚು ಹಾಕಿ ಈ ದುಷ್ಕೃತ್ಯ ಎಸಗಿದ್ದಾರೆ. ಹತ್ಯೆಯಾದವರಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಒಬ್ಬರು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

Exit mobile version