ಕಾರು ಹತ್ತಿಸಿ ದಲಿತರಿಬ್ಬರ ಹತ್ಯೆ : ಹೋಟೆಲ್‌ನಲ್ಲಿ ನೀರು ಕುಡಿದ ವಿಚಾರಕ್ಕೆ ಜಾತಿ ನಿಂದನೆ ಆರೋಪ

Bengaluru ಮೇ 11 : ಇತ್ತೀಚಿಗೆ ಹೆಸರುಘಟ್ಟದ ಹೋಟೆಲ್‌ವೊಂದರಲ್ಲಿ ನೀರು ಕುಡಿದ ವಿಚಾರಕ್ಕೆ ಗಲಾಟೆ ನಡೆದಿತ್ತು, ಇಪ್ಪತ್ತು ದಿನಗಳ ಬಳಿಕ ಆ ಘಟನೆಯನ್ನೇ ಮುಂದಿಟ್ಟುಕೊಂಡು ಇಬ್ಬರು ದಲಿತರನ್ನು ಕಾರು ಹತ್ತಿಸಿ (Two Dalit youths were killed) ಹತ್ಯೆಗೈದಿದ್ದಾರೆ. ರಾಜಾನಕುಂಟೆ ಪೊಲೀಸ್ ಠಾಣೆ (Rajanakunte Police Station) ಎದುರು ದಲಿತರಿಬ್ಬರ ಶವವಿಟ್ಟು ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಾಗರಾಜ್ ಹಾಗೂ ರಾಮಯ್ಯ ಎಂಬುವರನ್ನು ಹತ್ಯೆ ಮಾಡಲಾಗಿದೆ. ಇವರು ಹೆಸರಘಟ್ಟ ಹೋಬಳಿಯ ಚಲ್ಲಹಳ್ಳಿ ನಿವಾಸಿಗಳಗಿದ್ದಾರೆ.

ಇವರನ್ನು ಜಾತಿಯ ವಿಚಾರಕ್ಕೆ ಹಾಡುಹಾಗಲೇ ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ. ಬಿಎಸ್ಪಿ ನಾಯಕರು,

ಮೃತರ ಸಂಬಂಧಿಕರು ಇಂತಹ ಕೃತ್ಯವೆಸಗಿದ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿ (Two Dalit youths were killed) ಪ್ರತಿಭಟನೆ ನಡೆಸುತ್ತಿದ್ದಾರೆ.

ಮೃತರ ಸಂಬಂಧಿ ವೆಂಕಟೇಶ್ ರಾಜಾನಕುಂಟೆ ಠಾಣಾ ಪೊಲೀಸರಿಗೆ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಗುರುವಾರ ಬೆಳಿಗ್ಗೆ ನಾಗರಾಜ್,

ರಾಮಯ್ಯ ಹಾಗೂ ಗೋಪಾಲ್ ಎಂಬುವರು ಕೆಎಂಎಫ್ ಕಾರ್ಖಾನೆಗೆ (KMF factory) ಒಂದೇ ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ,

ಈ ರಭಸಕ್ಕೆ ನಾಗರಾಜ್ ಮತ್ತು ರಾಮಯ್ಯ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ .

ಇದನ್ನೂ ಓದಿ : https://vijayatimes.com/thiruvananthapuram-incident/

ಇನ್ನು ಗೋಪಾಲ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು, ಕಾರನ್ನು ರೌಡಿಗಳಾದ ಭರತ್, ನಿಶಾಂತ್, ವಿನಯ್ ಮತ್ತಿತರರು ಅತಿವೇಗದಲ್ಲಿ ಚಾಲನೆ ಮಾಡಿ ಉದ್ದೇಶಪೂರ್ವಕವಾಗಿ ಅಪಘಾತ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ 20 ದಿನಗಳ ಹಿಂದೆ ಜಾತಿ ಹೆಸರಲ್ಲಿ ಏನು ನಡೆದಿತ್ತು?

ಕಳೆದ ಇಪ್ಪತ್ತು ದಿನಗಳ ಹಿಂದೆ :
ಹೆಸರುಘಟ್ಟದಲ್ಲಿ ಹೋಟೆಲ್‌ನಲ್ಲಿ ನಾಗರಾಜ್ ನೀರು ಕುಡಿಯುತ್ತಿದ್ದಾಗ ಭರತ್ ಎಂಬ ವ್ಯಕ್ತಿ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ತಡೆದಿದ್ದಾನೆ.

ಹೆಚ್ಚುವರಿಯಾಗಿ, ಅವರು ಚುನಾವಣೆಯ (Election) ನಂತರ ಅವರನ್ನು ಕೊಲ್ಲುವುದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ : https://vijayatimes.com/action-against-pgimer-students/

ಈ ಭರತ್ ಆಗಲೇ ಒರಟು ಮನುಷ್ಯನಾಗಿದ್ದನು ಮತ್ತು ಆತನ ತಂದೆಯ ಮೇಲೆ ಕೂಡ ಅನೇಕ ಗಂಭೀರ ಆರೋಪಗಳಿವೆ.

ಆದ್ದರಿಂದ ದೂರಿನಲ್ಲಿ ಭರತ್, ನಿಶಾಂತ್ ಮತ್ತು ವಿನಯ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಬಿಎಸ್ಪಿ (BSP) ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಕೊಲೆಗೆ ಕಾರು ಕಾರಣವಾಗಿತ್ತು.

ಅಪರಾಧ ನಡೆದ ಸ್ಥಳವನ್ನು ತನಿಖೆ ಮಾಡಿದರೆ ಅದು ಕೊಲೆ ಎಂದು ಹೇಳಬಹುದು. ಸದ್ಯ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನಾದರೂ ಇಂತಹ ಭೀಕರ ಕೃತ್ಯ ಎಸಗಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

Exit mobile version