ಅಫ್ಘಾನ್ ಗೆ ಶಾಶ್ವತ ಸೇನೆಯನ್ನು ನಿಯೋಜಿಸಲು ಸಾಧ್ಯವಿಲ್ಲ – ಜೋ ಬೈಡೆನ್

ವಾಷಿಂಗ್ಟನ್ ಆ 17 : ಅಫ್ಘಾನಿಸ್ತಾನಕ್ಕೆ ಶಾಶ್ವತವಾಗಿ ಸೇನೆಯನನ್ನು ಸಾಧ್ಯವಿಲ್ಲಅಫ್ಘಾನಿಸ್ತಾನವನ್ನು ನಂಬಿ ನಮ್ಮ ಸೇನೆಯನ್ನು ಬಲಿ ಕೊಡಲು ಸಾಧ್ಯವಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು 20 ವರ್ಷಗಳಿಂದ ಅಫ್ಘಾನ್ ನಲ್ಲಿದ್ದ ನಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಸಮಯವಿಲ್ಲ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 1 ಮೇ 2021ಕ್ಕೆ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ತಾಲಿಬಾನ್ ಜೊತೆ ಒಪ್ಪಂದಕೂಡ ಮಾಡಿಕೊಂಡಿದ್ದರು.

ಟ್ರಂಪ್ ಅವದಿಯಲ್ಲೆ ಸೇನೆ ಹಿಂಪಡೆಯುವಿಕೆ ಆರಂಭಗೊಂಡಿತ್ತು. ನಾನು ಕೂಡ ನನ್ನ ನಿರ್ಧಾರಕ್ಕೆ ಬದ್ದನಾಗಿದ್ದೇನೆ. ಅಫ್ಘಾನ್ ಅಧ್ಯಕ್ಷರು ನಂಬಿಕೆ ಉಳಿಸಿಕೊಳ್ಳಲಿಲ್ಲ ಮತ್ತು ಅಫ್ಘಾನ್ ಸೈನಿಕರೆ ಅವರ ದೇಶವನ್ನು ಉಳಿಸಿಕೊಳ್ಳಲು ಹೋರಾಡಲಿಲ್ಲ ನಾನೇಕೆ ನನ್ನ ಸೈನ್ಯವನ್ನು ಬಲಿಕೊಡಲಿ ಎಂದು ಅವರು ಪ್ರತಿಕ್ರಿಯಿಸಿದರು.

Exit mobile version