• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಟ್ಯಾಕ್ಸಿ, ಕ್ಯಾಬ್​​ ಪ್ರಯಾಣಕ್ಕಿನ್ನು ಬೇಕಾಬಿಟ್ಟಿ ದರ ಕೇಳುವಂತಿಲ್ಲ: ಸರ್ಕಾರದಿಂದ ಏಕರೂಪದ ದರ ನಿಗದಿ.

Bhavya by Bhavya
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಟ್ಯಾಕ್ಸಿ, ಕ್ಯಾಬ್​​ ಪ್ರಯಾಣಕ್ಕಿನ್ನು ಬೇಕಾಬಿಟ್ಟಿ ದರ ಕೇಳುವಂತಿಲ್ಲ: ಸರ್ಕಾರದಿಂದ ಏಕರೂಪದ ದರ ನಿಗದಿ.
0
SHARES
124
VIEWS
Share on FacebookShare on Twitter

Bengaluru: ಸಿಟಿ ಟ್ಯಾಕ್ಸಿಗಳು (City Taxi) ಮತ್ತು ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಹವಮಾನದ ವ್ಯತ್ಯಾಸ ಮತ್ತು ಜನದಟ್ಟಣೆಗೆ ಅನುಗುಣವಾಗಿ ಪ್ರಯಾಣ ದರ ಏರಿಕೆ ಮಾಡುತ್ತಿರುವುದನ್ನು ತಪ್ಪಿಸಲು ಏಕರೂಪದ ದರ ನಿಗದಿಪಡಿಸಿ ಸರ್ಕಾರ (Karnataka Government) ಅಧಿಸೂಚನೆ ಹೊರಡಿಸಿದೆ. ಈ ನಿಯಮ ಓಲಾ (Ola), ಉಬರ್‌ (Uber) ಸಹಿತ ಎಲ್ಲ ಟ್ಯಾಕ್ಸಿಗಳಿಗೆ ಅನ್ವಯವಾಗಲಿದೆ.

City Taxi

ಮಳೆ ಬಂದಾಗ ದರ ಹೆಚ್ಚಳ ಮಾಡುವುದು, ಪೀಕ್ ಅವರ್ (Peak hour) ಅಥವಾ ಸಾರ್ವಜನಿಕರು ಕಚೇರಿಗೆ, ಕೆಲಸಕ್ಕೆ ತೆರಳುವ ಮತ್ತು ಮರಳುವ ಸಂದರ್ಭದಲ್ಲಿ ದರ ಹೆಚ್ಚಿಸುವುದು ಮತ್ತು ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಟ್ಯಾಕ್ಸಿ ಪ್ರಯಾಣ ದರ ಇಳಿಕೆ ಮಾಡಲಾಗುತ್ತಿತ್ತು. ಈಗಾಗಲೇ ಈ ತಾರತಮ್ಯ ಕುರಿತು ಅನೇಕ ದೂರುಗಳು ಬಂದಿದ್ದವು. ಅದನ್ನು ತಪ್ಪಿಸುವುದಕ್ಕಾಗಿ ಈಗ ಏಕರೂಪ ದರ ನಿಗದಿ ಮಾಡಲಾಗಿದೆ. ಟ್ಯಾಕ್ಸಿ ಹಾಗೂ ಅಗ್ರಿಗೇಟರ್ಸ್ ನಿಯಮದಡಿ (Taxi and Aggregators Rule) ಕಾರ್ಯನಿರ್ವಹಿಸುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಏಕರೂಪ ಪ್ರಯಾಣ ದರ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಕೂಡಲೇ ಹೊಸ ನಿಯವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶಿಸಿದೆ.

ನಿಗದಿಪಡಿಸಿದ ಹೊಸ ದರಗಳು ಹೀಗಿದೆ:

• ವಾಹನದ ಮೌಲ್ಯ 10 ಲಕ್ಷ ರೂ. ಗಿಂತ ಕಡಿಮೆ ಇದ್ದರೆ ಕನಿಷ್ಠ 4 ಕಿಮೀ ವರೆಗೆ ನಿಗದಿತ ದರ 100 ರೂ. ಇರಲಿದೆ. ಪ್ರತಿ ಕಿಮೀಗೆ 24 ರೂ ದರ ನಿಗದಿ ಪಡಿಸಲಾಗಿದೆ.

• ವಾಹನ ಮೌಲ್ಯ 10 ಲಕ್ಷ ದಿಂದ 15 ಲಕ್ಷ ವರೆಗೆ ಇದ್ದರೆ ಕನಿಷ್ಠ 4 ಕಿಮೀ ವರೆಗೆ ನಿಗದಿತ ದರ 115 ರೂ. ಇರಲಿದೆ. ಪ್ರತಿ ಕಿಮೀಗೆ 28 ರೂ. ದರ ನಿಗದಿ ಪಡಿಸಲಾಗಿದೆ.

• ವಾಹನ ಮೌಲ್ಯ 15 ಲಕ್ಷಗಿಂತ ಅಧಿಕವಾಗಿದ್ದರೆ ಕನಿಷ್ಠ 4 ಕಿಮೀ ವರೆಗೆ ನಿಗದಿತ ದರ 130 ರೂ. ಇರಲಿದೆ. ಪ್ರತಿ ಕಿಮೀಗೆ 32 ರೂ. ದರ ನಿಗದಿ ಪಡಿಸಲಾಗಿದೆ.

Uniform Fares

• ಲಗೇಜ್ (Luggage) ದರಗಳು ಮೊದಲಿನ 120 ಕೆಜಿವರೆಗೆ ಉಚಿತ (ಸೂಟ್ ಕೇಸ್, ಬೆಡ್ಡಿಂಗ್ ಇತ್ಯಾದಿ ವೈಯಕ್ತಿಕ ಲಗೇಜುಗಳು) ನಂತರದ ಪ್ರತಿ 30 ಕೆಜಿಗೆ ಅಥವಾ ಅದರ ಭಾಗಕ್ಕೆ 7 ರೂ.

• ಪ್ರಯಾಣಿಕರ ಕಾಯುವಿಕೆಯ ದರಗಳು ಮೊದಲ 5 ನಿಮಿಷಗಳವರೆಗೆ ಉಚಿತ. ನಂತರದ ಪ್ರತಿ 1 ನಿಮಿಷಕ್ಕೆ 1 ರೂ.

• ರಾತ್ರಿ 12 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣ ದರದ ಮೇಲೆ ಶೇ.10 ರಷ್ಟು ಹೆಚ್ಚುವರಿ ದರ ನೀಡಬೇಕು.

• ಸಿಟಿ ಟ್ಯಾಕ್ಸಿಯವರು ಅಗ್ರಿಗೇಟರ್‌ಗಳು ಅನ್ವಯಿಸುವಂತಹ ಜಿ.ಎಸ್.ಟಿ. ಮತ್ತು ಟೋಲ್ (GST And Toll) ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದಾಗಿದೆ. ಇನ್ನು ಮುಂದೆ ಸಮಯದ ಆಧಾರದಲ್ಲಿ ದರಗಳನ್ನು ವಸೂಲಿ ಮಾಡಬಾರದು. ಸರ್ಕಾರದಿಂದ ಕಿಮೀ ಆಧಾರದಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದರಗಳನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು.ಸರ್ಕಾರ ನಿಗದಿಪಡಿಸಿರುವ ದರಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಯಾವುದೇ ದರಗಳನ್ನು ಪ್ರಯಾಣಿಕರಿಂದ ಪಡೆಯುವಂತಿಲ್ಲ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.

Tags: bengaluruCity TaxiOlaTaxi and aggregators RulesUber

Related News

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್
ಪ್ರಮುಖ ಸುದ್ದಿ

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್

April 17, 2026
ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ
ಪ್ರಮುಖ ಸುದ್ದಿ

ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ

April 17, 2026
ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್
ಪ್ರಮುಖ ಸುದ್ದಿ

ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್

April 17, 2026
ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ
ದೇಶ-ವಿದೇಶ

ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ

April 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.