ಕೇಂದ್ರ ಬಜೆಟ್‌: ಕರ್ನಾಟಕಕ್ಕೆ ಬಂಪರ್‌ಕೊಡುಗೆ ; ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ

ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಕೇಂದ್ರ ಬಜೆಟ್‌ಮಂಡಿಸಿದ್ದು, ಕರ್ನಾಟಕಕ್ಕೆ ಬಂಪರ್‌ಕೊಡುಗೆ (union budget 2023) ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ತಮ್ಮ ಬಜೆಟ್ನ  ಏಳು ಆದ್ಯತೆಗಳನ್ನು ವಿವರಿಸಿ, ಅವುಗಳನ್ನು ‘ಸಪ್ತರಿಷಿ’ ಎಂದು ಕರೆದಿದ್ದಾರೆ.

2023ರ ಬಜೆಟ್ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ ಅಡಿಯಲ್ಲಿ, ಸಾಂಪ್ರದಾಯಿಕ ಕುಶಲಕರ್ಮಿಗಳು,

ತಮ್ಮ ಉತ್ಪನ್ನಗಳ ಗುಣಮಟ್ಟ, ಪ್ರಮಾಣ ಮತ್ತು ವ್ಯಾಪ್ತಿಯನ್ನು ಉತ್ತಮಗೊಳಿಸುವತ್ತ ಗಮನಹರಿಸುವ ಸಹಾಯದ ಪ್ಯಾಕೇಜ್ ಅನ್ನು ಮೊದಲ ಬಾರಿಗೆ ಪಡೆಯುತ್ತಾರೆ. ಪ್ಯಾಕೇಜ್ ಹಣಕಾಸಿನ ನೆರವು, ಕೌಶಲ್ಯ ತರಬೇತಿ,

ಡಿಜಿಟಲ್, ಹಸಿರು ತಂತ್ರಗಳು, ಬ್ರ್ಯಾಂಡ್ ಪ್ರಚಾರ, ಡಿಜಿಟಲ್ ಪಾವತಿ, ಸಾಮಾಜಿಕ ಭದ್ರತೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ ಎಂದು (union budget 2023) ಹಣಕಾಸು ಸಚಿವರು ಹೇಳಿದ್ದಾರೆ.

2023ರ ಬಜೆಟ್‌ನ  7 ಆದ್ಯತೆಗಳು

1. ಅಂತರ್ಗತ ಅಭಿವೃದ್ಧಿ

2. ಕೊನೆಯ ಜನರನ್ನು ತಲುಪುವುದು

3. ಮೂಲಸೌಕರ್ಯ ಮತ್ತು ಹೂಡಿಕೆ

4. ಸಾಮರ್ಥ್ಯವನ್ನು ಅಭಿವೃದ್ದಿಪಡಿಸುವುದು.

5. ಹಸಿರು ಕ್ರಾಂತಿ

6. ಯುವ ಶಕ್ತಿ

7. ಹಣಕಾಸು ವಲಯ

 ಇನ್ನು  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಅವರು ಮಂಡಿಸಿರುವ ಬಜೆಟ್‌ನಲ್ಲಿ ಈ ಬಾರಿ ಕರ್ನಾಟಕಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡಿ, ಯೋಜನೆ ಅನುಷ್ಠಾನಕ್ಕಾಗಿ 5300 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ.

Budget 2023

ಅದೇ ರೀತಿ ಉತ್ತರ ಕರ್ನಾಟಕದ ಹಲವು ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಇನ್ನು ರಾಜ್ಯದ ಬರಪೀಡಿತ ಪ್ರದೇಶಗಳ ಅಭಿವೃದ್ದಿಗೂ ವಿಶೇಷ ಅನುದಾನ ಘೋಷಣೆ ಮಾಡಿದ್ದಾರೆ.

ಇದನ್ನು ಓದಿ: ಇಂದು ಬಿಡುಗಡೆಯಾಯಿತು ಆರ್ಥಿಕ ಸಮೀಕ್ಷೆ : ಏನಿದೆ ಆರ್ಥಿಕ ಸಮೀಕ್ಷೆಯಲ್ಲಿ

ಅದೇ ರೀತಿ ಮ್ಯಾನ್‌ಹೋಲ್‌ಗಳಿಗೆ ಮಾನವರ ಬಳಕೆಯನ್ನು ನಿಷೇಧ ಮಾಡಲಾಗಿದ್ದು,  ಮಷೀನ್‌ಬಳಕೆಗೆ ಆದ್ಯತೆ ನೀಡಲಾಗಿದೆ. ಇನ್ನು ಏಕಲವ್ಯ ವಸತಿ ಶಾಲೆಗಳಿಗೆ 18000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ,

ಡಿಜಿಟಲ್‌ವ್ಯವಹಾರಕ್ಕೆ ಪ್ಯಾನ್‌ಕಡ್ಡಾಯ, ಕೆವೈಸಿ ಸರಳೀಕರಣ, ಈ-ಕೋರ್ಟ್‌ಯೋಜನೆ, ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಸೇರಿದಂತೆ ಅನೇಕ ಮಹತ್ವದ  ನಿರ್ಧಾರಗಳನ್ನು ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

Exit mobile version