ಕೇಂದ್ರ ಬಜೆಟ್-2024: ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ..?

NewDelhi: ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ತನ್ನ ಅಧಿಕಾರವಧಿಯ ಕೊನೆಯ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದು, ಚುನಾವಣೆ ಹೊಸ್ತಿಲಲ್ಲೇ ಇದ್ದರೂ, ಮೋದಿ ಸರ್ಕಾರ ಯಾವುದೇ ಜನಪ್ರಿಯ ಮತ್ತು ಉಚಿತ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಆರ್ಥಿಕ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ.

“ವಿಕಸಿತ ಭಾರತ” ಎಂಬ ಧ್ಯೇಯ ಹೊಂದಿರುವ 47.66 ಲಕ್ಷ ಕೋಟಿ ರೂಪಾಯಿ ಗಾತ್ರದ ಮಧ್ಯಂತರ ಬಜೆಟ್ (Budget) ಇದಾಗಿದ್ದು, ಬಡವರು, ಮಹಿಳೆಯರು, ಯುವಕರು, ರೈತರ ಅಭಿವೃದ್ಧಿ, ಕಲ್ಯಾಣವೇ ಪ್ರಥಮ ಆದ್ಯತೆ ಆಗಬೇಕು ಎಂಬ ಪ್ರಧಾನಿ ಸಲಹೆ ಮೇರೆಗೆ ಬಜೆಟ್ ರೂಪಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ತಿಳಿಸಿದರು.

ಮೋದಿ ಸರ್ಕಾರದ ಮಧ್ಯಂತರ ಬಜೆಟ್ ಮುಖ್ಯಾಂಶಗಳು :
5 ವರ್ಷದಲ್ಲಿ 2 ಕೋಟಿ ಮನೆ ನಿರ್ಮಾಣ
1 ಕೋಟಿ ಕುಟುಂಬಗಳಿಗೆ 300 ಯೂನಿಟ್ ಉಚಿತ ವಿದ್ಯುತ್
• ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ವಿಸ್ತರಣೆ
• ಗರ್ಭಕಂಠ ಕ್ಯಾನ್ಸರ್ (Cancer) ತಡೆಗೆ 9-14 ವರ್ಷದ ಹೆಣ್ಮಕ್ಕಳಿಗೆ ಉಚಿತ ವ್ಯಾಕ್ಸಿನ್
49 ಸಾವಿರ ರೈಲು ಬೋಗಿಗಳ ನಿರ್ಮಾಣ
• ಇಂಧನ-ಖನಿಜ-ಸೀಮೆಂಟ್ ರೈಲ್ವೇ ಕಾರಿಡಾರ್
• ರಾಜ್ಯಗಳಿಗೆ 75 ಸಾವಿರ ಕೋಟಿ ರೂ.ವರೆಗೂ ಬಡ್ಡಿರಹಿತ ಸಾಲ
• ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ
• ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ

ಯಾವ ಇಲಾಖೆಗೆ ಎಷ್ಟು ಅನುದಾನ..?
• ರಕ್ಷಣಾ ಇಲಾಖೆ – 6.2 ಲಕ್ಷ ಕೋಟಿ ರೂ.
• ರಸ್ತೆ ಸಾರಿಗೆ-ಹೆದ್ದಾರಿ ಇಲಾಖೆ – 2.78 ಲಕ್ಷ ಕೋಟಿ ರೂ.
• ರೈಲ್ವೇ ಇಲಾಖೆ – 2.55 ಲಕ್ಷ ಕೋಟಿ ರೂ.
• ಗ್ರಾಹಕ ವ್ಯವಹಾರ ಇಲಾಖೆ – 2.13 ಲಕ್ಷ ಕೋಟಿ ರೂ.
• ಗೃಹ ಇಲಾಖೆ – 2.03 ಲಕ್ಷ ಕೋಟಿ ರೂ.
• ಗ್ರಾಮೀಣಾಭಿವೃದ್ಧಿ ಇಲಾಖೆ – 1.77 ಲಕ್ಷ ಕೋಟಿ ರೂ.
• ರಸಗೊಬ್ಬರ-ಕೆಮಿಕಲ್ ಇಲಾಖೆ – 1.68 ಲಕ್ಷ ಕೋಟಿ ರೂ.
• ಮಾಹಿತಿ,ಸಂವಹನ ಇಲಾಖೆ – 1.37 ಲಕ್ಷ ಕೋಟಿ ರೂ.
• ಕೃಷಿ, ರೈತ ಕಲ್ಯಾಣ ಇಲಾಖೆ – 1.27 ಲಕ್ಷ ಕೋಟಿ ರೂ.

Exit mobile version