ಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದ್ದು ಇದರ ಮೇಲೆ ಚೀನಾಕ್ಕೇ ಹಕ್ಕಿಲ್ಲ ಎಂದ ಯುನೈಟೆಡ್ ಸ್ಟೇಟ್ಸ್

New Delhi: ಅರುಣಾಚಲ ಪ್ರದೇಶ ನಮ್ಮದು ನಮ್ಮದು ಎನ್ನುತ್ತಿದ್ದ ಚೀನಾಕ್ಕೆ ಇದೀಗ ಭಾರೀ ಮುಖಭಂಗ (United States Supports India) ಉಂಟಾಗಿದೆ. ಅರುಣಾಚಲ ಪ್ರದೇಶ (Arunachala

Pradesh) ಭಾರತಕ್ಕೆ ಸಂಬಂಧಿಸಿದ್ದು, ಇದು ಚೀನಾದ ಹಕ್ಕಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ. ನೈಜ ನಿಯಂತ್ರಣ ರೇಖೆಯ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಪ್ರಯತ್ನಗಳನ್ನು

ನಾವು ಬಲವಾಗಿ ವಿರೋಧಿಸುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ (United States) ಹೇಳಿದೆ.

ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಅವರು ಇತ್ತೀಚೆಗೆ ಭೇಟಿ ನೀಡಿದ ನಂತರ ಚೀನಾ ಈ ಪ್ರದೇಶ ನಮ್ಮ ವ್ಯಾಪ್ತಿಗೆ ಬರುತ್ತದೆ ಎಂಬ ಹೇಳಿಕೆಯನ್ನು ನೀಡಿತ್ತು. ಇದೀಗ ಉದ್ಧಟತನ ಮಾಡುವ ಚೀನಾಗೆ

(China) ಅಮೇರಿಕಾ ತಕ್ಕ ಉತ್ತರ ನೀಡಿದೆ. ಹೌದು, ಅಮೆರಿಕ (America) ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಉಪ ವಕ್ತಾರ ವೇದಾಂತ್‌ ಪಟೇಲ್‌ ಅವರು ಅರುಣಾಚಲ ಪ್ರದೇಶದ ಕುರಿತು

ಮಾತನಾಡಿದ್ದಾರೆ. “ಅರುಣಾಚಲ ಪ್ರದೇಶವು ಭಾರತದ್ದು (United States Supports India) ಎಂದು ಅಮೆರಿಕ ಗುರುತಿಸುತ್ತದೆ.

ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ಚೀನಾ ಯಾವುದೇ ರೀತಿಯ ಅತಿಕ್ರಮಣ, ನಮ್ಮ ಭೂಪ್ರದೇಶ ಎಂಬುದಾಗಿ ಹೇಳುವುದು, ಹೆಚ್ಚುವರಿ ಸೈನಿಕರನ್ನು ನಿಯೋಜಿಸುವುದು ಸೇರಿ ಹಲವು ಚಟುವಟಿಕೆಗಳನ್ನು

ಅಮೆರಿಕ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ. ಅರುಣಾಚಲ ಪ್ರದೇಶದ ವಿಚಾರದಲ್ಲಿ ಚೀನಾ ಮೊದಲಿನಿಂದಲೂ ಕ್ಯಾತೆ ತೆಗೆಯುತ್ತದೆ. ಕೆಲ ದಿನಗಳ ಹಿಂದಷ್ಟೇ ನರೇಂದ್ರ ಮೋದಿ (Narendra Modi) ಅವರು

ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಮಾರ್ಚ್‌ (March) 9ರಂದು ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದ ಸೇಲಾ ಪಾಸ್‌ ನಲ್ಲಿ ನಿರ್ಮಿಸಿದ್ದ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದರು.

ಈ ಸಂದರ್ಭದಲ್ಲಿಯೂ ಚೀನಾ ವಿರೋಧ ವ್ಯಕ್ತಪಡಿಸುವ ಮೂಲಕ ಉದ್ಧಟತನ ಪ್ರದರ್ಶಿಸಿತ್ತು. ಆಗಲೂ ಇದನ್ನು ವಿರೋಧಿಸಿದ್ದ ಚೀನಾ, ನಮ್ಮ ಭೂಪ್ರದೇಶ ಎಂದು ಉದ್ಧಟತನದ ಹೇಳಿಕೆ ನೀಡಿತ್ತು. ಈ ಪ್ರದೇಶಕ್ಕೆ

ಜಂಗ್ನಾನ್‌ (Jangnan) ಎಂದು ಹೆಸರಿಟ್ಟಿರುವುದಾಗಿ ವರದಿ ಮಾಡಿತ್ತು. ಇಂತಹ ಪರಿಸ್ಥಿತಿಯ ಮಧ್ಯೆಯೇ, ಅಮೆರಿಕವು ಭಾರತದ ಪರವಾಗಿ ನಿಂತಿರುವುದು, ಅರುಣಾಚಲ ಪ್ರದೇಶವು ಭಾರತ ಭೂ ಪ್ರದೇಶ

ಎಂಬುದಾಗಿ ಹೇಳಿರುವುದು ಚೀನಾಗೆ ಹಿನ್ನಡೆಯಾಗಿದೆ.

ಇದನ್ನು ಓದಿ: ಉಗ್ರರ ದಾಳಿಗೆ ಬೆಚ್ಚಿಬಿದ್ದ ರಷ್ಯಾ, ಈ ಕುರಿತಾಗಿ ಮೊದಲೇ ಮಾಹಿತಿ ನೀಡಿದ್ದ ಅಮೇರಿಕಾ!

Exit mobile version