ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಡೀಪ್ ಫೇಕ್ ವಿಡಿಯೋ ವೈರಲ್

Lucknow: ಕಳೆದ ಕೆಲ ದಿನಗಳ ಹಿಂದಷ್ಟೇ ಸೆಲೆಬ್ರಿಟಿಗಳನ್ನು ಕಾಡಿದ್ದ ಡೀಪ್ ಫೇಕ್‌ ವಿಡಿಯೋ (Deep Fake Video) ಕಾಟ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನೂ ಬಿಟ್ಟಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಡೀಪ್‌ಫೇಕ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋದ ಸೈಬರ್ ಪೊಲೀಸ್ ಠಾಣೆಯಲ್ಲಿ 2 ಎಫ್‌ಐಆರ್‌ಗಳು (FIR) ದಾಖಲಾಗಿವೆ. ಡೀಪ್‌ಫೇಕ್ ವಿಡಿಯೋದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮುಖ ಬಳಸಿ ಔಷಧ ಖರೀದಿಸುವಂತೆ ಮನವಿ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಸ್ ಬುಕ್ (Facebook) ಕೇಂದ್ರ ಕಚೇರಿಯಿಂದ ಮಾಹಿತಿ ಕೇಳಿದ್ದಾರೆ.

ವಾಸ್ತವವಾಗಿ ಕೃತಕ ಬುದ್ಧಿಮತ್ತೆಯ ಸಹಾಯದಿಂದ, ಸೈಬರ್ ಅಪರಾಧಿಗಳು ಡೀಪ್‌ಫೇಕ್ ವೀಡಿಯೊವನ್ನು (Deepfake) ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಡೀಪ್ ಫೇಕ್ ವಿಡಿಯೋದಲ್ಲಿ ಮಧುಮೇಹ ಔಷಧಿ ಖರೀದಿಸಲು ಮನವಿ ಕುರಿತು ಮಾತನಾಡುವ ದೃಶ್ಯವಿದೆ.

ಔಷಧಿ ಪ್ರಚಾರಕ್ಕೆ, ಜನರು ಖರೀದಿಸುವಂತೆ ಮಾಡಲು ಯೋಗಿ ಆದಿತ್ಯನಾತ್ ಡೀಪ್ ಫೇಕ್ ವಿಡಿಯೋ ಬಳಸಿಕೊಂಡಿದ್ದಾರೆ. ಎರಡು ವಿಡಿಯೋಗಳು ಹರಿದಾಡುತ್ತಿದೆ. ಎರಡೂ ವಿಡಿಯೋಗಳಲ್ಲಿ ಯೋಗಿ ಆದಿತ್ಯನಾಥ್ ಔಷಧಿ ಖರೀದಿಸಲು ಮನವಿ ಮಾಡುವ ದೃಶ್ಯವಿದೆ.

ಭಾರತದ ವೈದ್ಯಕೀಯ ತಜ್ಞರು, ಸಂಶೋಧಕರು ಈ ಔಷಧಿ ಪತ್ತೆ ಹಚ್ಚಿದ್ದಾರೆ. ಈ ಔಷಧಿ ಸೇವನೆ ಅತ್ಯಂತ ಪರಿಣಾಕಾರಿ ಎಂದು ಹೇಳುವ ಯೋಗಿ ಆದಿತ್ಯನಾಥ್ ಮಾತುಗಳನ್ನು ಡೀಪ್ ಫೇಕ್ ಮೂಲಕ ಸೃಷ್ಟಿಸಿ ಹರಿಬಿಡಲಾಗಿದೆ. ಪ್ರಚಾರಕ್ಕಾಗಿ ಯೋಗಿ ಆದಿತ್ಯನಾಥ್ ಅವರನ್ನು ಬಳಸಿಕೊಂಡಿರುವುದು, ಡೀಪ್ ಫೇಕ್ ವಿಡಿಯೋ ಸೃಷ್ಟಿಸಿರುವುದು, ತಂತ್ರಜ್ಞಾನದ ದುರುಪಯೋಗಿ ಸೇರಿದಂತೆ ಹಲವು ಆರೋಪಗಳು ಕುರಿತು ದೂರು ದಾಖಲಾಗಿದೆ. 

ಇನ್ನು ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸುತ್ತಿದ್ದಂತೆ ಪ್ರಕರಣ ದಾಖಲಾಗಿದೆ. ಇದೀಗ ಸೈಬರ್ ಪೊಲೀಸರು (Cyber Police) ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂತ್ರಜ್ಞರ ಮೊರೆ ಹೋಗಿದ್ದಾರೆ.

Exit mobile version