ಡೆಬಿಟ್ ಕಾರ್ಡ್ ಇಲ್ಲದೇ ಆಧಾರ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡಲು ಗೂಗಲ್ ಪೇ ಅವಕಾಶ

Digital News : ಗೂಗಲ್‌ ಪೇ (UPI activation through Aadhaar) ಬಳಸುತ್ತಿರುವವರಿಗೆ ಒಂದು ಗುಡ್‌ ನ್ಯೂಸ್. ಇನ್ನು ಮುಂದೆ ನೀವು ಯುಪಿಐ ಆ್ಯಕ್ಟಿವೇಟ್ ಮಾಡುವ ಸಂದರ್ಭದಲ್ಲಿ

ಬರೀ ಡೆಬಿಟ್ ಕಾರ್ಡ್ (Debit Card) ಮೂಲಕ ಮಾಡುವ ಅಗತ್ಯ ಇರುವುದಿಲ್ಲ. ಏಕೆಂದರೆ ಇನ್ನು ಮುಂದೆ ನೀವು ಆಧಾರ್ ಮೂಲಕವೂ ಯುಪಿಐ ವೆರಿಫಿಕೇಶನ್ ಮಾಡಬಹುದು.

ಇಂಥದ್ದೊಂದು ಸೌಲಭ್ಯವನ್ನುಇದೀಗ ಗೂಗಲ್ ಪೇ ಕಲ್ಪಿಸಿದೆ. ಇನ್ನು ಮುಂದೆ ಗ್ರಾಹಕರು ಗೂಗಲ್ ಪೇನಲ್ಲಿ ಯುಪಿಐಗೆ ಆಧಾರ್ ಕಾರ್ಡ್ ಮೂಲಕ ನೊಂದಣಿ ಮಾಡಿಸಬಹುದು.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಕೂಡ ಈ ಹೊಸ ಫೀಚರ್ಗೆ (UPI activation through Aadhaar) ಬೆಂಬಲ ನೀಡಿದೆ.

ನೊಂದಾಯಿತ ಮೊಬೈಲ್ ನಂಬರ್ ಇರಬೇಕು :

ಹಿಂದೆ, UPI ಅನ್ನು ಸಕ್ರೀಯಗೊಳಿಸಲು ಗೂಗಲ್‌ ಪೇಗೆ ಡೆಬಿಟ್ ಕಾರ್ಡ್ ಮಾತ್ರ ಅಗತ್ಯವಿತ್ತು ಇದೀಗ ಆಧಾರ್(Adhar Card) ಆಯ್ಕೆಯನ್ನೂ ಸೇರಿಸಲಾಗಿದೆ.

ಗ್ರಾಹಕರು ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯ ಸಹಾಯದಿಂದ UPI ಅನ್ನು ಸಕ್ರಿಯಗೊಳಿಸಬಹುದು.

ಇಲ್ಲಿ ಬ್ಯಾಂಕ್ ಖಾತೆ ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಒಂದೇ ಆಗಿರಬೇಕು.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ ಲಕ್ಷ್ಮಿ ಹೆಬ್ಬಾಳ್ಕರ್ ತವರಲ್ಲೇ ಲಾಂಚ್: ಬೆಳಗಾವಿಯಿಂದಲೇ ಏಕೆ ಚಾಲನೆ?

ಗೂಗಲ್‌ ಪೇ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯ ಮೊದಲ 6 ಅಂಕೆಗಳನ್ನು ನಮೂದಿಸಿದಾಗ, ಆ ಮಾಹಿತಿಯನ್ನು ಯುಐಡಿಎಐ (UIDAI) ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ.

ಈ ಆರು ಸಂಖ್ಯೆಗಳನ್ನು ನಮೂದಿಸಿದ ನಂತರ, ಯುಐಡಿಎಐಮತ್ತು ಬ್ಯಾಂಕ್‌ನಿಂದ ನಿಮಗೆ OTP ಬರುತ್ತದೆ. ಒಮ್ಮೆ ನಮೂದಿಸಿದ ನಂತರ, UPI ಅನ್ನು ಗ್ರಾಹಕರ ಬ್ಯಾಂಕ್ ಸಕ್ರಿಯಗೊಳ್ಳುತ್ತದೆ.

ಗ್ರಾಹಕರು ನಂತರ UPI ಪಿನ್ ಅನ್ನು ಸೆಟ್ ಮಾಡಬಹುದು. ಗೂಗಲ್‌ ಪೇ ಆಧಾರ್ ನಂಬರ್ನ ಮೊದಲ ಆರು ಅಂಕಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ.

ಯುಐಡಿಎಐನಿಂದ ದೃಢೀಕರಣಕ್ಕಾಗಿ ಮಾತ್ರ ಅದರ ಬಳಕೆ ಆಗುತ್ತದೆ ಎಂದು ಎಂಬುದನ್ನು ನಾವು ಇಲ್ಲಿ ಗಮನಿಸುವುದು ಮುಖ್ಯವಾಗಿದೆ.

ಇದನ್ನು ಯುಐಡಿಎಐ ದೃಢೀಕರಣಕ್ಕಾಗಿ ಮಾತ್ರ ಬಳಸುತ್ತದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.

ಹೆಚ್ಚಿನ ಭಾರತೀಯರು ಆಧಾರ್ ಸಂಖ್ಯೆಯನ್ನು ಬಳಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ್ದಾರೆ ಆದ್ದರಿಂದ,

UPI ಅನ್ನು ಆಧಾರ್‌ನೊಂದಿಗೆ ಸಕ್ರಿಯಗೊಳಿಸುವುದರಿಂದ ಹೆಚ್ಚಿನ ಜನರಿಗೆ ಪ್ರಯೋಜನವಾಗುತ್ತದೆ ಎಂದು ಗೂಗಲ್ ಪೇ ಲೆಕ್ಕಾಚಾರವಾಗಿದೆ.

ರಶ್ಮಿತಾ ಅನೀಶ್

Exit mobile version