ಹೊಸದಿಲ್ಲಿ, ಮೇ. 13: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಲೋಕಸೇವಾ ಆಯೋಗವು ಜೂನ್ 27ಕ್ಕೆ ನಿಗದಿಪಡಿಸಿದ್ದ ಯುಪಿಎಸ್ಸಿ (ಪ್ರಿಲಿಮ್ಸ್)-2021 ಪರೀಕ್ಷೆಯನ್ನು ಮುಂದೂಡಿದೆ.
ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ದೇಶದ ವಿವಿಧ ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೀಗ ಕೇಂದ್ರ ಲೋಕಸೇವಾ ಆಯೋಗವು ಜೂನ್ 27ಕ್ಕೆ ನಿಗದಿಪಡಿಸಿದ್ದ ಯುಪಿಎಸ್ಸಿ (ಪ್ರಿಲಿಮ್ಸ್)-2021 ಪರೀಕ್ಷೆಯನ್ನು ಮುಂದೂಡಿದೆ.
ʻಕೋವಿಡ್ ಪರಿಸ್ಥಿತಿಯಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆ ಅಕ್ಟೋಬರ್ 10ರಂದು ನಡೆಯಲಿದೆʼ ಎಂದು ಯುಪಿಎಸ್ಸಿ ತಿಳಿಸಿದೆ.