UPSC ನೇಮಕಾತಿ 2023 : ಯುಪಿಎಸ್ಸಿ 261 ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಜುಲೈ 13 ಕೊನೆ ದಿನ

Job News : ಕೇಂದ್ರ ಲೋಕಸೇವಾ ಆಯೋಗವು(Central Public Service Commision) ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್(Junior Translation Officer) ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಒಟ್ಟು 261 ಹುದ್ದೆಗಳಿಗೆ ಯುಪಿಎಸ್ಸಿ(UPSC) ಅರ್ಜಿ ಆಹ್ವಾನಿಸಿದೆ. ಬಿಇ, B.Tech, ಪದವಿ, ಎಲ್‌ಲಿ M.Sc, ಮಾಸ್ಟರ್, ಎಂಡಿ, ಪೋಸ್ಟ್ ಗ್ರಾಜುಯೇಟ್ ಸರ್ಟಿಫಿಕೇಟ್ ಪದವಿ ಹೊಂದಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ ಮಂಡಳಿಯಿಂದ ಸಂಬಂಧಿತ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು .

13 ಜುಲೈ(July) 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಯುಪಿಎಸ್ಸಿ ನೇಮಕಾತಿ 2023 ಅರ್ಹತಾ ಮಾನದಂಡ, ವಯಸ್ಸಿನ ಮಿತಿ, ಆನ್ನೈನ್ ಅರ್ಜಿ, ವೇತನ, ಶುಲ್ಕ ರಚನೆ, ಯುಪಿಎಸ್ಸಿ ಪ್ರವೇಶ ಪತ್ರ 2023, ಉದ್ಯೋಗ ಪ್ರೊಫೈಲ್, ಪಠ್ಯಕ್ರಮ ಮತ್ತು ಹೆಚ್ಚಿನವುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಅಭ್ಯರ್ಥಿಗಳು ಅಧಿಕೃತ ಸೈಟ್ : https://www.upsc.gov.in ಅನ್ನು ಹೆಚ್ಚಿನ ಮಾಹಿತಿಗಾಗಿ ಬಳಸಬಹುದು.

ವೇತನ ಶ್ರೇಣಿ/ ಸಂಭಾವನೆ :

ಯುಪಿಎಸ್ಸಿ ಜೂನಿಯರ್ ಟ್ರಾನ್ಸೆಷನ್ ಆಫೀಸರ್ ಹುದ್ದೆಗಳಿಗೆ ಸಂಭಾವನೆ ವೇತನ : 07 – 11 ವೇತನ ಮಟ್ಟ

ಅರ್ಜಿ ಶುಲ್ಕ: ಒಬಿಸಿ, ಸಾಮಾನ್ಯ ಮತ್ತು ಇಡಬ್ಲ್ಯೂಎಸ್- 25 ರೂ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:

ಎಸ್ಟಿ, ಎಸ್ಸಿ, ಮತ್ತು ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ

ಪ್ರಮುಖ ದಿನಾಂಕ :

ಯುಪಿಎಸ್ಸಿ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24.06.2023

ಯುಪಿಎಸ್ಸಿ ಉದ್ಯೋಗ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 13-07-2023

ರಶ್ಮಿತಾ ಅನೀಶ್

Exit mobile version