ಯುಪಿಎಸ್‌ಸಿ ಫಲಿತಾಂಶ ಪ್ರಕಟ, ಟಾಪರ್ ಆಗಿ ಹೊರಹೊಮ್ಮಿದ ಶುಭಂ ಕುಮಾರ್

ದೆಹಲಿ ಸೆ 25 : ಬಹು ನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಬಿಹಾರ್ ಮೂಲದ ಮುಂಬೈ ಐಐಟಿ ನ ಎಂಜಿನಿಯರಿಂಗ್ ಪದವೀಧರ ಶುಭಂ ಕುಮಾರ್ ಮೊದಲ ರ್ಯಾಂಕ್ ಪಡೆದಿದ್ದಾರೆ. ಮಧ್ಯಪ್ರದೇಶದ ಶ್ರೀಮತಿ ಜಾಗೃತಿ ಅವಸ್ಥಿ ಎರಡನೇ ರ್ಯಾಂಕ್ ಪಡೆದಿದ್ದಾರೆ. ಮೂರನೇ ರ್ಯಾಂಕ್ ಅಂಕಿತ್ ಜೈನ್ ಪಡೆದಿದ್ದಾರೆ.ಕರ್ನಾಟಕದ ಅಕ್ಷಯ್ ಸಿಂಹ 77 ನೇ ರ್ಯಾಂಕ್ ಪಡೆದಿದ್ದಾರೆ.

ಅಕ್ಟೋಬರ್,4, 2020 ರಂದು ನಡೆಸಲಾದ ಪರೀಕ್ಷೆಗೆ 10,40,060 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ, ಅದರಲ್ಲಿ 4,82,770 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.05 ಜನವರಿ, 2021 ರಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ 10564 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಪರ್ಸನಾಲಿಟಿ ಪರೀಕ್ಷೆಗೆ ಹಾಜರಾದ 2053 ಅಭ್ಯರ್ಥಿಗಳ ಪೈಕಿ 761 ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಯಾಗಿದ್ದಾರೆ.ಇವರಲ್ಲಿ 545 ಪುರುಷರು ಮತ್ತು 216 ಮಹಿಳೆಯರು ಸೇರಿದ್ದಾರೆ.ರ್ಯಾಂಕ್ ಗಳ ಆಧಾರದ ಮೇಲೆ  ವಿವಿಧ ಸೇವೆಗಳಿಗೆ ನೇಮಕಗೊಳ್ಳಲಿದ್ದಾರೆ.

ಮೊದಲ ರ್ಯಾಂಕ್ ಪಡೆದ ಶುಭಂ ಕುಮಾರ್ ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು.ಎರಡನೇ ರ್ಯಾಂಕ್ ಪಡೆದ ಜಾಗೃತಿ ಅವಸ್ಥಿ ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಪರೀಕ್ಷೆಗೆ ಅರ್ಹತೆ ಪಡೆದಿದ್ದಳು.ಜೊತೆಗೆ ಜಾಗೃತಿ  ಭೋಪಾಲ್‌ನಿಂದ ಬಿ ಟೆಕ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪದವಿ ಪಡೆದಿದ್ದಾರೆ. ಎಂದು ಕೇಂದ್ರ ಲೋಕಸೇವಾ ಆಯೋಗ ತಿಳಿಸಿದೆ.

Exit mobile version