ಅಲ್-ಜವಾಹಿರಿಯ ಹತ್ಯೆಗೆ ಬಳಸಿದ್ದು, ಸ್ಪೋಟಗೊಳ್ಳದೇ ಕೊಲ್ಲುವ ಹೆಲ್ಫೈರ್ R9X ಕ್ಷಿಪಣಿ ; ಏನಿದರ ವಿಶೇಷತೆ?

R9X Missile

ಅಲ್-ಖೈದಾ(Al-Qeada) ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿಯನ್ನು ಹತ್ಯೆ(Murder) ಮಾಡಲು ಅಮೇರಿಕಾ(America) ಹೆಲ್ಫೈರ್ ಕ್ಷಿಪಣಿಯ ಬಳಕೆ ಮಾಡಿದೆ. ಹೆಲ್ಫೈರ್ ಕ್ಷಿಪಣಿಯ ವಿಶೇಷತೆ ಎಂದರೆ ಈ ಕ್ಷಿಪಣಿ ಸ್ಪೋಟಗೊಳ್ಳುವುದಿಲ್ಲ. ಆದರು ನಿಖರ ಗುರಿಯ ಮೇಲೆ ದಾಳಿ ಮಾಡುತ್ತದೆ ಎಂದು ರಕ್ಷಣಾ ತಜ್ಞರು ತಿಳಿಸಿದ್ದಾರೆ. ಈ ಕ್ಷಿಪಣಿಯನ್ನು ಅಮೇರಿಕಾ ಸೇನೆ(America Army) ಮಾತ್ರ ಬಳಸುತ್ತದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಅಲ್-ಜವಾಹಿರಿಯ ಕಾಬೂಲ್ನ ಮನೆಯ ಮೇಲೆ ಎರಡು ಹೆಲ್ಫೈರ್ ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ. ಆದರೆ ಅಲ್ಲಿ ಯಾವುದೇ ಸ್ಪೋಟ ಸಂಭವಿಸಿಲ್ಲ.

ಆದರೆ ಅಲ್-ಜವಾಹಿರಿಯನ್ನು ಹತ್ಯೆ ಮಾಡಲಾಗಿದೆ ಮತ್ತು ಬೇರೆ ಯಾರಿಗೂ ಹಾನಿಯಾಗಿಲ್ಲ ಎನ್ನಲಾಗಿದೆ. ಹತ್ಯೆ ಮಾಡಲು ಆರು ರೇಜರ್ ತರಹದ ಬ್ಲೇಡ್ಗಳನ್ನು ಹೊಂದಿರುವ ವಾರ್ಹೆಡ್-ಲೆಸ್ ಕ್ಷಿಪಣಿಯಾದ ಮಾರಕ ಹೆಲ್ಫೈರ್ R9X ಅನ್ನು ಅಮೇರಿಕಾ ಬಳಸಿದೆ. ಈ ಕ್ಷಿಪಣಿಗಳು ಸ್ಫೋಟಗೊಳ್ಳುವುದಿಲ್ಲ, ಆದರೆ ನಾಗರಿಕರ ಮೇಲಾಗುವ ಹಾನಿಯನ್ನು ತಪ್ಪಿಸಲು ನಿಖರವಾಗಿ ಗುರಿಗಳನ್ನು ಹೊಡೆಯುವ ಚಾಕು ತರಹದ ಬ್ಲೇಡ್ಗಳನ್ನು ಬಿಡುಗಡೆ ಮಾಡುತ್ತವೆ. ಹೆಲ್ಫೈರ್ R9X ಕ್ಷಿಪಣಿ ಯಾವುದೇ ಸ್ಫೋಟಕ ಪೇಲೋಡ್ ಇಲ್ಲದ ಕಾರಣ, ಯಾವುದೇ ಹಾನಿ ಉಂಟುಮಾಡುವುದಿಲ್ಲ.

ನಾಗರಿಕ ಸಾವು-ನೋವುಗಳನ್ನು ತಪ್ಪಿಸುವ ಸಂದರ್ಭದಲ್ಲಿ ಉಗ್ರಗಾಮಿ ಗುಂಪುಗಳ ನಾಯಕರನ್ನು ಕೊಲ್ಲಲು ಅಮೇರಿಕಾ ಸೇನೆ ಇದನ್ನು ಬಳಸುತ್ತದೆ. ಇನ್ನು 2017 ರಲ್ಲಿ ಅಲ್-ಖೈದಾ ಹಿರಿಯ ನಾಯಕ ಅಬು ಅಲ್-ಖೈರ್ ಅಲ್-ಮಸ್ರಿ ಸಿರಿಯಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೆಲ್ಫೈರ್ R9X ಕ್ಷಿಪಣಿಯನ್ನು ಮೊದಲ ಬಾರಿಗೆ ಬಳಸಿ ಆತನ ಹತ್ಯೆ ಮಾಡಲಾಯಿತು. ಆದರೆ ಪೆಂಟಗನ್ ಅದನ್ನು ಸಾರ್ವಜನಿಕವಾಗಿ ಎಂದಿಗೂ ಒಪ್ಪಿಕೊಂಡಿರಲಿಲ್ಲ. ಹೆಲ್ಫೈರ್ R9X ಕ್ಷಿಪಣಿಯನ್ನು “ನಿಂಜಾ ಬಾಂಬ್” ಎಂದೂ ಕರೆಯುತ್ತಾರೆ.

ಇದು ಸುಮಾರು 45 ಕೆಜಿ ತೂಕವಿದ್ದು, ಈ ಕ್ಷಿಪಣಿಯನ್ನು ಡ್ರೋನ್, ಹೆಲಿಕಾಪ್ಟರ್, ವಿಮಾನಗಳಿಂದಲೂ ಉಡಾಯಿಸಬಹುದು. ಇದು 500 ಮೀಟರ್ಗಳಿಂದ 11 ಕಿಮೀ ವರೆಗಿನ ಗುರಿಯ ಮೇಲೆ ನಿಖರ ದಾಳಿ ನಡೆಸುತ್ತದೆ.

Exit mobile version