ಪ್ರಧಾನಿ ಮೋದಿ ಭೇಟಿಯಾದ ಯುಎಸ್‌ ರಕ್ಷಣಾ ಕಾರ್ಯದರ್ಶಿ

ಹೊಸದಿಲ್ಲಿ, ಮಾ. 20: ಯುಎಸ್‌ನ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಜೇಮ್ಸ್‌ ಆಸ್ಟಿನ್‌ ಅವರು ಶುಕ್ರವಾರ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಕ್ಷಣಾ ಸಹಭಾಗಿತ್ವ ಕುರಿತು ಮಾತುಕತೆ ನಡೆಸಿದರು.

ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ, ಸಮೃದ್ಧಿ ನೆಲೆಗೊಳ್ಳಲು ಅಮೆರಿಕಾ ಭಾರತದೊಂದಿಗೆ ಸದಾ ಜೊತೆಯಾಗಿರುತ್ತದೆ. ಭಾರತದ ಜೊತೆಗೆ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಅಮೆರಿಕಾ ಉತ್ಸುಕವಾಗಿದೆ ಆಸ್ಟಿನ್‌ ಹೇಳಿದ್ದಾರೆ.

ಭಾರತ ಹಾಗೂ ಅಮೆರಿಕಾ ಸಂಬಂಧ ಬಲಗೊಳಿಸುವುದು, ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಸಹಕಾರ ಹೆಚ್ಚಿಸುವುದು, ಪೂರ್ವ ಲಡಾಖ್​ನಲ್ಲಿ ಚೀನಾ ತೋರಿರುವ ನಡೆ, ಭಯೋತ್ಪಾದನೆ ಹಾಗೂ ಅಫ್ಘಾನ್ ಶಾಂತಿಯ ಸವಾಲು ಇತ್ಯಾದಿ ವಿಚಾರಗಳನ್ನು ಮೋದಿ ಹಾಗೂ ಆಸ್ಟಿನ್ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಕ್ಷಣಾ ಕಾರ್ಯದರ್ಶಿಯಾಗಿ ಭಾರತಕ್ಕೆ ಮೊದಲ ಭೇಟಿ ನೀಡಿದ್ದಾರೆ. ಆಸ್ಟಿನ್ ಮೂರು ದೇಶಗಳ ಪ್ರವಾಸ ಕೈಗೊಂಡಿದ್ದು, ಕೊನೆಯಾಗಿ ಭಾರತಕ್ಕೆ ಆಗಮಿಸಿದ್ದಾರೆ.

Exit mobile version