ನೀವು ಸುಂದರವಾಗಿ ಚಿಕ್ಕ ವಯಸ್ಸಿನಂತೆ ಕಾಣಿಸಬೇಕೆ ಹಾಗಾದ್ರೆ ಈ 5 ಪದಾರ್ಥ ಬಳಸಿ

ಪ್ರತಿಯೊಬ್ಬ ವ್ಯಕ್ತಿಗೂ ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಇದಕ್ಕಾಗಿ ಜನರು ವಿವಿಧ ರೀತಿಯ ಸೌಂದರ್ಯವರ್ಧಕಗಳನ್ನು ವ್ಯಾಪಕವಾಗಿ ಬಳಸುತ್ತಾರೆ. ರಾಸಾಯನಿಕಗಳಿಂದ ತುಂಬಿದ ಸೌಂದರ್ಯವರ್ಧಕ ಉತ್ಪನ್ನಗಳು ನಿಮ್ಮನ್ನು ಕೆಲವು ಗಂಟೆಗಳವರೆಗೆ ಸುಂದರವಾಗಿ ಕಾಣಿಸುತ್ತದೆ ಆದರೆ ದೀರ್ಘಕಾಲ ತ್ವಚೆಯನ್ನು ಸುಂದರವಾಗಿಸುವುದಿಲ್ಲ. ನಿಮ್ಮ ತ್ವಚೆ ದೀರ್ಘಕಾಲದವರೆಗೆ ಸುಂದರವಾಗಿ ಯೌವ್ವನದಿಂದ ಕೂಡಿರಬೇಕಾದರೆ ನೈಸರ್ಗಿಕ ವಸ್ತುಗಳನ್ನು ಬಳಸಬೇಕು.

ಕಾಲಜನ್ (Collagen) ಒಂದು ಪ್ರೋಟೀನ್ ಆಗಿದ್ದು, ದೇಹದ ಪ್ರೋಟೀನ್‌ನ 30 ಪ್ರತಿಶತವು ಕಾಲಜನ್‌ನಿಂದ ಮಾಡಲ್ಪಟ್ಟಿದೆ. ಇದು ನಮ್ಮ ಚರ್ಮ, ಸ್ನಾಯುಗಳು, ಮೂಳೆಗಳು ಮತ್ತು ಸಂಯೋಜಕ ಅಂಗಾಂಶಗಳಿಗೆ ಬೆಂಬಲ, ಶಕ್ತಿ ಮತ್ತು ರಚನೆಯನ್ನು ಒದಗಿಸುತ್ತದೆ. ವಯಸ್ಸು ಹೆಚ್ಚಾದಂತೆ, ನಿಮ್ಮ ದೇಹದಲ್ಲಿನ ಕಾಲಜನ್ ಒಡೆಯುತ್ತಲೇ ಇರುತ್ತದೆ ಹಾಗೂ ದೇಹವು ಹೊಸ ಕಾಲಜನ್ ಅನ್ನು ತಯಾರಿಸುವ ಪ್ರವೃತ್ತಿಯು ಕ್ರಮೇಣ ಕಡಿಮೆಯಾಗುತ್ತದೆ.

ತುಳಸಿ:
ತುಳಸಿಯಲ್ಲಿ ಅನೇಕ ಆರೋಗ್ಯಕಾರಿ ಗುಣಲಕ್ಷಣಗಳು ಕಂಡುಬರುತ್ತವೆ ಆದರೆ ರೋಸ್ಮರಿನಿಕ್ (Rosemarie) ಆಮ್ಲ ಮತ್ತು ಉರ್ಸೋಲಿಕ್ ಆಮ್ಲ , ಯುಜೆನಾಲ್ ಇದರ ಅತ್ಯಂತ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳಾಗಿವೆ. ಫ್ರೀ ರಾಡಿಕಲ್ ವಿರುದ್ಧ ಹೋರಾಡುವ ಶಕ್ತಿ ಇದಕ್ಕಿದೆ. ಇದರ ಸೇವನೆಯಿಂದ ತ್ವಚೆಯಲ್ಲಿ ಕಾಲಜನ್ ಹೆಚ್ಚುತ್ತದೆ. ನಿಮ್ಮ ಆಹಾರದೊಂದಿಗೆ ಅಶ್ವಗಂಧವನ್ನುಸೇವಿಸುವುದರಿಂದ ಇದು ಆಯುರ್ವೇದ ಮೂಲಿಕೆಯಾಗಿದ್ದು, ಇದರ ಸೇವನೆಯು ವಯಸ್ಸಾದ ಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ.

ತುಪ್ಪ:
ತುಪ್ಪದಲ್ಲಿ ವಿಟಮಿನ್ ಎ,ಇ (Vitamin A E) ಮತ್ತು ಡಿ ಸಮೃದ್ಧವಾಗಿದೆ. ಇದು ಆರೋಗ್ಯಕರ ಚರ್ಮಕ್ಕೆ ಅವಶ್ಯಕವಾಗಿದೆ. ವಿಟಮಿನ್ ಎ ಕೊಲೆಸ್ಟ್ರಾಲ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುವುದಲ್ಲದೆ ಇದು ಚರ್ಮವನ್ನು ಆರೋಗ್ಯಕರ ಮತ್ತು ಸುಂದರವಾಗಿಸುವ ಪ್ರೋಟೀನ್ (Protien) ಆಗಿದೆ. ಇದು ವಿಟಮಿನ್‌ಗಳನ್ನು ಹೊಂದಿರುತ್ತದೆ ಮತ್ತು ಇದು ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಅಕಾಲಿಕ ವಯಸ್ಸನ್ನು ತಡೆಯಲು ಸಹಾಯ ಮಾಡುತ್ತದೆ.

ಬ್ರಾಹ್ಮಿ(Brahmi:
ಬ್ರಾಹ್ಮಿ (Brahmi) ಒಂದು ಆಯುರ್ವೇದ ಮೂಲಿಕೆಯಾಗಿದ್ದು ಅದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು ಇದು ಜೀವಕೋಶಗಳನ್ನು ಸುಧಾರಿಸುತ್ತದೆ ಮತ್ತು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಗರ್ಭಾವಸ್ಥೆಯ ನಂತರ ಚರ್ಮದ ಪಿಗ್ಮೆಂಟೇಶನ್ (Pigmentation) ಮತ್ತು ಚರ್ಮದ ಮೇಲೆ ಇರುವ ಗೆರೆಯಂತಹ ಗುರುತುಗಳನ್ನು ಹೋಗಲಾಡಿಸಲು ಇದನ್ನು ಔಷಧೀಯ ಮತ್ತು ಆಯುರ್ವೇದದಲ್ಲಿ ಬಳಸಲಾಗುತ್ತದೆ.

ಬೆಟ್ಟದ ನೆಲ್ಲಿಕಾಯಿ
ಬೆಟ್ಟದ ನೆಲ್ಲಿಕಾಯಿ ವಿಟಮಿನ್ ಸಿ (Vitamin C) ಯ ಅತ್ಯುತ್ತಮ ನೈಸರ್ಗಿಕ ಮೂಲವಾಗಿದೆ. ನೆಲ್ಲಿಕಾಯಿ ನೈಸರ್ಗಿಕವಾಗಿ ದೇಹದ ಕಾಲಜನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಇದು ವಯಸ್ಸಾದ ಚಿಹ್ನೆಗಳನ್ನು ಕಡಿಮೆಮಾಡುವ ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ ಮತ್ತು ಇದು ತ್ವಚೆಯನ್ನು ಹೊಳೆಯುವಂತೆ ಮಾಡುವುದರ ಜೊತೆಗೆ ಹಾನಿಗೊಳಗಾದ ತ್ವಚೆಯನ್ನು ಸರಿಪಡಿಸುತ್ತದೆ.

ಮೇಘಾ ಮನೋಹರ ಕಂಪು

Exit mobile version