ಉತ್ತರಪ್ರದೇಶ: ಇಬ್ಬರಲ್ಲಿ ಕಪ್ಪಾ ರೂಪಾಂತರಿತ ತಳಿ ಪತ್ತೆ

ಲಖನೌ, ಜು. 09: ಕೊರೊನಾ ಸೋಂಕಿನ ‘ಕಪ್ಪಾ’ ರೂಪಾಂತರಿತ ತಳಿಯ ಎರಡು ಪ್ರಕರಣಗಳು ಉತ್ತರಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಅಧಿಕೃತ ಮಾಹಿತಿ ಬಿಡುಗಡೆಯಾಗಿದೆ.

ಇಲ್ಲಿನ ಕಿಂಗ್‌ ಜಾರ್ಜ್‌ ಮೆಡಿಕಲ್‌ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ 109 ಮಾದರಿಗಳ ಪರೀಕ್ಷೆ ನಡೆದಿತ್ತು. ಈ ಪೈಕಿ 107ರಲ್ಲಿ ಡೆಲ್ಟಾ ಪ್ಲಸ್‌ ಸೋಂಕು, 2ರಲ್ಲಿ ಕಪ್ಪಾ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ.

ಕಪ್ಪಾ ರೂಪಾಂತರಿತ ತಳಿ ಕುರಿತ ಪ್ರಶ್ನೆಗೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅಮಿತ್ ಮೋಹನ್ ಪ್ರಸಾದ್ ಅವರು, ಈ ಬಗ್ಗೆ ಆತಂಕಕ್ಕೆ ಅಗತ್ಯವಿಲ್ಲ. ಇದಕ್ಕೆ ಚಿಕಿತ್ಸೆ ಲಭ್ಯವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Exit mobile version