America : ಹಾಲಿವುಡ್ ನಟಿ, ವ್ಯಾಂಪೈರ್ ಡೈರೀಸ್(The Vampire Diaries) ಸಿರೀಸ್ನಲ್ಲಿ FBI ಏಜೆಂಟ್ ರೆನೀ ವಾಕರ್ (Vampire Diaries AnnieWersching died) ಪಾತ್ರದಲ್ಲಿ ಮಿಂಚಿದ ಖ್ಯಾತ ನಟಿ ಅನ್ನಿ ವರ್ಶಿಂಗ್(Annie Wersching) ನಿಧನರಾಗಿದ್ದಾರೆ!
45 ವರ್ಷ ವಯಸ್ಸಿನ ಅನ್ನಿ ವರ್ಷಿಂಗ್ ಅವರು ಕ್ಯಾನ್ಸರ್ ರೋಗದಿಂದ ತೀವ್ರವಾಗಿ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ದ ಲಾಸ್ಟ್ ಆಫ್ ಅಸ್ ಎಂಬ ವಿಡಿಯೋ ಗೇಮ್ನಲ್ಲಿ ಟೆಸ್ಗೆ ಧ್ವನಿ ನೀಡಿದ ನಟಿ ಅನ್ನಿ ವರ್ಶಿಂಗ್ ಅವರನ್ನು ಕಳೆದುಕೊಂಡ ಹಾಲಿವುಡ್(Hollywood) ಚಿತ್ರರಂಗ ಅವರನ್ನು ನೆನೆದು ಭಾವಕರಾಗಿದೆ.

ಕ್ಯಾನ್ಸರ್(Cancer) ಖಾಯಿಲೆಗೆ ತ್ತುತ್ತಾಗಿದ್ದ ಅವರು, ಕಳೆದ ಕೆಲ ದಿನಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದರು.
ಆದ್ರೆ, ವೈದ್ಯರು ನೀಡಿದ ಯಾವುದೇ ಚಿಕಿತ್ಸೆಗೆ ಸ್ಪಂದಿಸದ ನಟಿ ಅನ್ನಿ ವರ್ಶಿಂಗ್ ಅವರು ಭಾನುವಾರ
ಬೆಳಿಗ್ಗೆ ಲಾಸ್ ಏಂಜಲೀಸ್ನಲ್ಲಿ ನಿಧನರಾದರು ಎಂದು ಅವರ ಪ್ರಚಾರಕರು ಅಸೋಸಿಯೇಟೆಡ್ ಪ್ರೆಸ್ಗೆ ಮಾಹಿತಿ ನೀಡಿದರು.
ದ ಲಾಸ್ಟ್ ಆಫ್ ಅಸ್ (The Last of us)ಅನ್ನು ರಚಿಸಿದ ನೀಲ್ ಡ್ರಕ್ಮನ್ ಅವರು ಟ್ವಿಟ್ಟರ್ನಲ್ಲಿ(Twitter) ನಟಿಗೆ ಸಂತಾಪ ಸೂಚಿಸಿದ ಅವರು,
ನಾವು ಒಬ್ಬ ಅದ್ಭುತ, ಒಳ್ಳೆ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ.
ಈ ಘಟನೆಯಿಂದ ನನ್ನ ಹೃದಯ ಛಿದ್ರಗೊಂಡಿದೆ! ಅವರ ಎಲ್ಲಾ ನೆನಪುಗಳು ಅವರ ಪ್ರೀತಿಪಾತ್ರರ ಜೊತೆಯಲ್ಲಿವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಮೀಸೋರಿಯಾ, ಸೇಂಟ್ ಲೂಯಿಸ್ನಲ್ಲಿ ಹುಟ್ಟಿ ಬೆಳೆದ ನಟಿ ಅನ್ನಿ ವರ್ಶಿಂಗ್ ಅವರು, ತಮ್ಮ ಎರಡು ದಶಕಗಳ ವೃತ್ತಿಜೀವನದ (Vampire Diaries AnnieWersching died) ಅವಧಿಯಲ್ಲಿ ಹತ್ತಾರು ದೂರದರ್ಶನ ಕಾರ್ಯಕ್ರಮಗಳು,
24, ಬಾಷ್, ದಿ ವ್ಯಾಂಪೈರ್ ಡೈರೀಸ್, ಮಾರ್ವೆಲ್ನ ರನ್ಅವೇಸ್, ದಿ ರೂಕಿನ ಏಳನೇ ಮತ್ತು ಎಂಟನೇ ಸೀಸನ್ಗಳಲ್ಲಿ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಅವರ ಇತ್ತೀಚಿನ ಜನಪ್ರಿಯ ವಿಡಿಯೋ ಗೇಮ್ ದಿ ಲಾಸ್ಟ್ ಆಫ್ ಅಸ್ ಗಾಗಿ ಟೆಸ್ಗೆ ಧ್ವನಿ ಮತ್ತು ಮೋಷನ್ ಕ್ಯಾಪ್ಚರ್ ಪ್ರದರ್ಶನವನ್ನು ನೀಡಿದ್ದಾರೆ.

ಡೆಡ್ಲೈನ್ ಪ್ರಕಟಿಸಿರುವ ವರದಿಯ ಪ್ರಕಾರ, ನಟಿ ಅನ್ನಿ ವರ್ಶಿಂಗ್ ಅವರಿಗೆ 2020 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು!
ಆದರೂ ಕೂಡ ತಮ್ಮ ವೃತ್ತಿಯನ್ನು ನಿಲ್ಲಿಸದೇ, ಎಂದಿನಂತೆ ತಮ್ಮ ನಟನೆ ಸೇರಿದಂತೆ ಎಲ್ಲಾ ವರ್ಗದ ಕೆಲಸವನ್ನು ಮುಂದುವರಿಸಿಕೊಂಡು ಹೋದರು. ನಟಿ ಅನ್ನಿ ಅವರು ತಮ್ಮ ಪತಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.