ಸುಂದರವಾಗಿ ಕಾಣಲು ವ್ಯಾಂಪೈರ್ ಫೇಶಿಯಲ್ ಮಾಡಿಸಿಕೊಂಡ 3 ಮಹಿಳೆಯರಲ್ಲಿ HIV ಪಾಸಿಟಿವ್!

Mexico: ಸುಂದರವಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಎಲ್ಲರ ಆಸೆ. ಹಾಗಾಗಿ ಕೆಲವರು ನೈಸರ್ಗಿಕವಾಗಿ ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಅತಿಯಾಗಿ ಕೃತಕ ಚಿಕಿತ್ಸೆಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಸ್ಪಾ, ಬ್ಯೂಟಿಪಾಲರ್ (Spa, Beauty Parlour) ಅಥವಾ ಸ್ಕಿನ್‌ ಕೇರ್‌ ಸೆಂಟರ್‌ (Skin Center Care)ನಲ್ಲಿ ಸಿಗುವ ಚಿಕಿತ್ಸೆಯನ್ನು ಪಡೆದು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಾರೆ.

HIV Test

ಆದರೆ ಈ ರೀತಿಯ ಕೆಲವು ಚಿಕಿತ್ಸೆ ಜೀವಕ್ಕೆ ಆಪತ್ತು ತರಬಹುದು. ಇಂಥಹದ್ದೇ ಆಘಾತಕಾರಿ ಘಟನೆಯೊಂದು ನಡೆಸಿದ್ದು, ಫೇಶಿಯಲ್​ ಮಾಡಿಸಿಕೊಂಡ ಮೂವರು ಮಹಿಳೆಯರಿಗೆ ಎಚ್‌ಐವಿ (HIV) ತಗುಲಿದೆ ಎಂಬ ಆಘಾತಕಾರಿ ವಿಚಾರ ವರದಿಯಾಗಿದೆ.

ಅಮೆರಿಕದ (America) ನ್ಯೂ ಮೆಕ್ಸಿಕೋ ಸ್ಪಾದಲ್ಲಿ ಕಾಸ್ಕೆಟಿಕ್ ಇಂಜೆಕ್ಷನ್ ಪ್ರೊಸೀಜರ್ ಮೂಲಕ ಮಾಡಿದ ವ್ಯಾಂಪೈರ್ ಫೇಶಿಯಲ್ (Vampire Facial) ಮಾಡಿಸಿಕೊಂಡ ಮೂವರಿಗೆ ಎಚ್‌ಐವಿ ತಗುಲಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರವು ಮಾಹಿತಿ ನೀಡಿದೆ. ವ್ಯಾಂಪೈರ್ ಫೇಶಿಯಲ್​​ ಅನ್ನು ಹುಡುಗಿಯರಿಗಿಂತ ವಯಸ್ಸಾದ ಮಹಿಳೆಯರು ಹೆಚ್ಚಾಗಿ ಮಾಡಿಸಿಕೊಳ್ಳುತ್ತಾರೆ. ವಯಸ್ಸಾದ ಮಹಿಳೆಯರ ಸುಕ್ಕು ಗಟ್ಟಿದ ಚರ್ಮದ ಕಾಂತಿಯನ್ನು ಸೂಜಿಯ ಮೂಲಕವೇ ಹೆಚ್ಚಿಸುವುದು ಇದರ ಪ್ರಮುಖ ವಿಧಾನವಾಗಿದೆ.

ವ್ಯಾಂಪೈರ್ ಫೇಶಿಯಲ್‌ ಅನ್ನು ರಕ್ತಪಿಶಾಚಿ ಫೇಶಿಯಲ್ ಎಂದೂ ಕರೆಯಲಾಗುತ್ತದೆ. ಇದನ್ನು ಸೂಜಿ ಅಥವಾ ಇಂಜೆಕ್ಷನ್ (Injection) ಮೂಲಕ ಮಹಿಳೆಯರ ಮುಖದ ಮೇಲಿನ ಸುಕ್ಕು ಮಾಯಮಾಡುವುದು, ಅವರು ಯುವತಿಯರಂತೆ ಮಾಡುವ ಸೌಂದರ್ಯ ವರ್ಧಕ ವಿಧಾನ ಇದಾಗಿದೆ. ಅನೇಕ ಜನಪ್ರಿಯ ಕಾಸ್ಮೆಟಿಕ್ ಚಿಕಿತ್ಸೆಗಳಲ್ಲಿ ಸೂಜಿಯನ್ನು ಬಳಸಲಾಗುತ್ತದೆ. ಉದಾಹರಣೆಗೆ ಮುಖದ ಸುಕ್ಕುಗಳನ್ನು ತುಂಬಲು ಬೊಟೊಕ್ಸ್ (Botox) ಮತ್ತು ತುಟಿಗಳನ್ನು ಉಬ್ಬರಿಸಲು ಫಿಲ್ಲರ್‌ಗಳನ್ನು ಬಳಸುತ್ತಾರೆ.

ಫೇಶಿಯಲ್, ಪ್ಲೇಟ್‌ಲೆಟ್-ರಿಚ್​ ಪ್ಲಾಸ್ಮಾ ಮೈಕ್ರೊನೀಡ್ಲಿಂಗ್ ಸಿಸ್ಟಮ್ (Platelet-Rich Plasma Micro needling System)​, ವ್ಯಕ್ತಿಯ ರಕ್ತವನ್ನು ಹೊರತೆಗೆಯಲು, ಚರ್ಮದ ಕಾಂತಿಯನ್ನು ಹೆಚ್ಚಿಸಲು ಮುಖಕ್ಕೆ ಪ್ಲಾಸ್ಮಾ ಥೆರಪಿ ವೇಳೆ ಸಣ್ಣ ಪ್ರಮಾಣದ ಸೂಜಿಗಳ ಬಳಕೆ, ಟ್ಯಾಟೂ (Tattoo) ಹಾಕಲೂ ಸೂಜಿಗಳನ್ನು ಬಳಕೆ ಮಾಡಲಾಗುತ್ತದೆ.ನ್ಯೂ ಮೆಕ್ಸಿಕೋ ಆರೋಗ್ಯ ಇಲಾಖೆಯು, 2018 ರಲ್ಲಿ ಸ್ಪಾ ಬಗ್ಗೆ ತನಿಖೆ ಪ್ರಾರಂಭಿಸಿತ್ತು.

40ರ ಪ್ರಾಯದ ಮಹಿಳೆಗೆ ಯಾವುದೇ ಅಪಾಯಕಾರಿ ಅಂಶಗಳಿಲ್ಲದಿದ್ದರೂ ಸಹ ಹೆಚ್ಐವಿ ಸೋಂಕು ಧನಾತ್ಮಕ ವರದಿ ಬಂದಿತ್ತು. ಈಕೆ ಸ್ಪಾದಲ್ಲಿ ಸೌಂದರ್ಯವರ್ಧಕ ಚಿಕಿತ್ಸೆಗೆ ಒಳಗಾಗಿದ್ದರು ಎಂಬುದು ತಿಳಿದು ಬಂದಿದೆ.ಇದಾದ ಬಳಿಕ ಸೌಂದರ್ಯವರ್ಧಕ ಸ್ಪಾದಿಂದಲೇ ಮಹಿಳೆಯರಿಗೆ ಸೋಂಕು ತಾಕಿದೆ ಎಂಬುದು ದೃಢವಾದ ಬಳಿಕ ಅಂಗಡಿಯನ್ನು ಮುಚ್ಚಲಾಯಿತು. ಪರವಾನಗಿ ಇಲ್ಲದೇ, ಸ್ಪಾ ನಡೆಸುತ್ತಿದ್ದ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ.

Exit mobile version