ವಂದೇ ಭಾರತ್ ಎಕ್ಸ್‌ಪ್ರೆಸ್ ನವೆಂಬರ್ 10 ರಂದು ದಕ್ಷಿಣದಲ್ಲಿ ಪ್ರಾರಂಭಿಸುವ ಸಾಧ್ಯತೆ ಹೆಚ್ಚಿದೆ : ವರದಿ

ICF

New Delhi : ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ರೈಲು ತನ್ನ ಐದನೇ ಆವೃತ್ತಿಯನ್ನು ಪ್ರಾರಂಭಿಸುವುದರೊಂದಿಗೆ ನವೆಂಬರ್

10 ರಂದು ದಕ್ಷಿಣ(South) ಭಾಗದಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ(PTI) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಐದನೇ ಆವೃತ್ತಿಯನ್ನು ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ ಪ್ರಾರಂಭಿಸಲಾಗುವುದು ಎಂದು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ರೈಲ್ವೆ ಇತ್ತೀಚೆಗೆ ಗುಜರಾತ್ (Gujarat) ಮತ್ತು ಹಿಮಾಚಲ ಪ್ರದೇಶದಿಂದ (Himachal Pradesh) ಚುನಾವಣೆಗೆ ಒಳಪಡುವ ರಾಜ್ಯಗಳಿಂದ ಮೂರನೇ ಮತ್ತು ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಿತು.

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆಗಳಿಗೆ ಚಾಲನೆ ನೀಡಿದರು.

ಮುಂದಿನ ವಾರದಿಂದ ದೆಹಲಿ ಮತ್ತು ಚಂಡೀಗಢ ನಡುವಿನ ಪ್ರಯಾಣದ ಸಮಯವನ್ನು ಮೂರು (Vande Bharat Express To South) ಗಂಟೆಗಳಿಗೆ ಇಳಿಸಲು ರೈಲು ಸಿದ್ಧವಾಗಿದೆ.

ಇದನ್ನೂ ಓದಿ : https://vijayatimes.com/first-bone-bank-in-indore/

ಉನಾದಿಂದ ನವದೆಹಲಿಗೆ ಪ್ರಯಾಣದ ಸಮಯ ಎರಡು ಗಂಟೆಗಳಷ್ಟು ಕಡಿಮೆಯಾಗುತ್ತದೆ. ರೈಲು ಗುಡ್ಡಗಾಡು ರಾಜ್ಯದ ಅಂಬ್ ಅಂಡೌರಾದಿಂದ ನವದೆಹಲಿಗೆ ವಾರದಲ್ಲಿ ಆರು ದಿನಗಳು ಚಲಿಸುತ್ತದೆ,

ಬುಧವಾರ ಹೊರತುಪಡಿಸಿ, ಅಂಬಾಲಾ, ಚಂಡೀಗಢ, ಆನಂದಪುರ ಸಾಹಿಬ್ (Vande Bharat Express To South) ಮತ್ತು ಉನಾದಲ್ಲಿ ನಿಲುಗಡೆ ಇರುತ್ತದೆ.

https://youtu.be/o48c9O1X5I4

ಹೊಸ ವಂದೇ ಭಾರತ್ ರೈಲು ಹಿಂದಿನ ರೈಲುಗಳಿಗೆ ಹೋಲಿಸಿದರೆ ಸುಧಾರಿತ ಆವೃತ್ತಿಯಾಗಿದೆ ಎನ್ನಲಾಗಿದೆ. ಇನ್ನು ವಿಶೇಷ ಎಂದರೆ ಇದು ಹೆಚ್ಚು ಹಗುರವಾಗಿದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ವಂದೇ ಭಾರತ್ 2.0 ರೈಲುಗಳು ಕವಾಚ್ ಎಂಬ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆಯನ್ನು (TCAS) ಹೊಂದಿದ್ದು,

ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ಕೋಚ್‌ಗಳು ವಿಕೋಪ ಸೂಚನೆಯ ಲೈಟ್‌ಗಳನ್ನು ಹೊಂದಿವೆ. ರೈಲಿನ ಹೊರಭಾಗವು ಎಂಟು ಫ್ಲಾಟ್‌ಫಾರ್ಮ್-ಸೈಡ್ ಕ್ಯಾಮೆರಾಗಳನ್ನು ಹೊಂದಿದ್ದು, ಕೋಚ್‌ಗಳಲ್ಲಿ ಪ್ರಯಾಣಿಕರ-ಗಾರ್ಡ್ ಸಂವಹನ ಸೌಲಭ್ಯವೂ ಇದೆ, ಇದು ಸ್ವಯಂಚಾಲಿತ ಧ್ವನಿ ರೆಕಾರ್ಡಿಂಗ್ ವೈಶಿಷ್ಟ್ಯದೊಂದಿಗೆ ಇರುವುದು ಮತ್ತಷ್ಟು ವಿಶೇಷವಾಗಿದೆ.

ರೈಲು ಜಾಲಗಳ ಮೂಲಕ ಸರಕು ಸಾಗಣೆಯನ್ನು ಸಮಯೋಚಿತವಾಗಿ ತಲುಪಿಸಲು ಅನುಕೂಲವಾಗುವಂತೆ ಭಾರತೀಯ ರೈಲ್ವೇಯು, ವಂದೇ ಭಾರತ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ವೇಗದ ಸರಕು ಸಾಗಣೆ ರೈಲುಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ.

ಇದನ್ನೂ ಓದಿ : https://vijayatimes.com/suvendu-adhikari-slams-tmc/

ಸದ್ಯ ದಕ್ಷಿಣದತ್ತ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಪ್ರಾರಂಭವಾದರೇ ಜನಸಾಮಾನ್ಯರಿಗೆ ಪ್ರಯಾಣದ ಸಮಯ ಮತ್ತಷ್ಟು ಉಳಿತಾಯವಾಗುತ್ತದೆ ಹಾಗೂ ಸರಿಯಾದ ಸಮಯಕ್ಕೆ ಸುಲಭವಾಗಿ, ವೇಗವಾಗಿ ಪ್ರಯಾಣ ಮಾಡಲು ಇದು ಲಾಭದಾಯಕವಾಗಿದೆ.

Exit mobile version