ವರುಣ್ ಗಾಂಧಿಯ  ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ : ರಾಹುಲ್‌ ಗಾಂಧಿ

Hoshiarpur :  ನನ್ನ ಸೋದರ ಸಂಬಂಧಿ ವರುಣ್‌ ಗಾಂಧಿ(Varun Gandhs ideology) ಆಯ್ಕೆ ಮಾಡಿಕೊಂಡಿರುವ ಸಿದ್ದಾಂತವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ(Rahul gandhi) ಹೇಳಿದ್ದಾರೆ.

ಭಾರತ್ ಜೋಡೋ(Bharath jodo) ಯಾತ್ರೆಯ ವೇಳೆ ಪಂಜಾಬ್‌ನ(Punjab) ಹೋಶಿಯಾರ್‌ಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರ ಸೋದರ ಸಂಬಂಧಿ ಮತ್ತು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಗೆ ಸೇರಬಹುದೇ?

ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತವಿದೆ. ಆದರೆ  ವರುಣ್ ಗಾಂಧಿ (Varun Gandhs ideology) ಇನ್ನೊಂದನ್ನು ಅಳವಡಿಸಿಕೊಂಡಿದ್ದಾನೆ.

ಹೀಗಾಗಿ ಅವನು ಅಳವಡಿಸಿಕೊಂಡ ಸಿದ್ಧಾಂತವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ನಾನು ಆರ್‌ಎಸ್‌ಎಸ್(RSS) ಕಚೇರಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

https://youtu.be/AuBu-4fSqI8

“ವರುಣ್ ಗಾಂಧಿ ಅವರು ಬಿಜೆಪಿಯಲ್ಲಿದ್ದಾರೆ ಮತ್ತು ಅವರು ಭಾರತ್‌ ಜೋಡೋ ಯಾತ್ರೆಗೆ ಕಾಲಿಟ್ಟರೆ ಅದು ಅವರಿಗೆ ಸಮಸ್ಯೆಯಾಗಬಹುದು” ಎಂದು ರಾಹುಲ್‌ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.  

ಪತ್ರಿಕಾಗೋಷ್ಠಿಯ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ(Twitter)  ಕಾಂಗ್ರೆಸ್‌ ಪೋಸ್ಟ್ ಮಾಡಿದೆ.

ಇನ್ನು ವರುಣ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಸೇರುವ ಬಗ್ಗೆ ಊಹಾಪೋಹಗಳು ಎದ್ದಿದ್ದವು.

  ಇದು ಕೇಂದ್ರ ಸರ್ಕಾರಕ್ಕೆ ಅಸಮಾಧಾನ ಮತ್ತು ಮುಜುಗರಕ್ಕೆ ಕಾರಣವಾಗಿದ್ದು, ಬಿಜೆಪಿ(BJP) ವಿರುದ್ಧದ ದಾಳಿಯನ್ನು ತೀಕ್ಷ್ಣಗೊಳಿಸಲು ಪ್ರತಿಪಕ್ಷಗಳು ಇದನ್ನು ಬಳಸಿಕೊಳ್ಳಲು ಯೋಜಿಸಿದ್ದವು ಎನ್ನಲಾಗಿದೆ.

ಮೂರು ಬಾರಿ ಸಂಸದರಾಗಿರುವ ವರುಣ್ ಅವರು “ಪ್ರತಿದಿನ ವೈಯಕ್ತಿಕ ಅಭಿಪ್ರಾಯಗಳನ್ನು ನೀಡಲು ಇಷ್ಟಪಡುತ್ತಾರೆ” ಎಂದು ಹೇಳುವ ಮೂಲಕ ಬಿಜೆಪಿ ಈ ಟೀಕೆಗಳನ್ನು ತಳ್ಳಿಹಾಕಲು ಪ್ರಯತ್ನಿಸಿದೆ.

ವರುಣ್ ಮತ್ತು ಅವರ ತಾಯಿ, ಉತ್ತರ ಪ್ರದೇಶದ ಬಿಜೆಪಿ ಸಂಸದೆ ಮತ್ತು ಪಕ್ಷದ ಹಿರಿಯ ನಾಯಕಿ ಮೇನಕಾ ಗಾಂಧಿ(Menaka gandhi),

ತಮ್ಮ ಟ್ವಿಟರ್ ಬಯೋಸ್‌ನಲ್ಲಿ ಬಿಜೆಪಿ ಪಕ್ಷದ ಹೆಸರನ್ನು ಬಳಸಬೇಡಿ ಎಂದು ಹೇಳಿದ್ದರು. ಅದೇ ರೀತಿ ಕಳೆದ  ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿರಲಿಲ್ಲ.

ಬಿಜೆಪಿ ನಾಯಕರ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ವರುಣ್‌ಗಾಂಧಿ ಮತ್ತು ಮೇನಕಾ ಗಾಂಧಿ ಬಿಜೆಪಿ ಪಕ್ಷವನ್ನು ತೊರೆದು, ಕಾಂಗ್ರೆಸ್‌ ಪಕ್ಷವನ್ನು ಸೇರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

Exit mobile version