ದೆಹಲಿಯಲ್ಲಿ ಸ್ಕ್ರಾಪ್ ಪದ್ದತಿ ಜಾರಿಗೆ

ನವದೆಹಲಿ ಡಿ 4 : ಕೇಂದ್ರ ಸರ್ಕಾರದ ಮಹತ್ವದ ಸ್ಕ್ರಾಪ್‌ ಪದ್ದತಿಗೆ ದೆಹಲಿ ಸರ್ಕಾರ ಚಾಲನೆ ನೀಡಿದ್ದು ಇನ್ನು ಮುಂದೆ ಇದನ್ನು ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದೆ. ದೆಹಲಿಯಲ್ಲಿ ದಿನೇ ದಿನೇ ಮಾಲಿನ್ಯ (Delhi Pollution) ಹೆಚ್ಚುತ್ತಿದ್ದು, ಮಾರಕ ರೂಪ ಪಡೆದುಕೊಳ್ಳುತ್ತಿದೆ. ವಾಯುಮಾಲಿನ್ಯಕ್ಕೆ ಬೇರೆ ಬೇರೆ ಕಾರಣಗಳಿವೆ. ವಾಹನಗಳಿಂದ ಹೊರಬರುವ ಹೊಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯವನ್ನು ಉಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾಲಿನ್ಯದಿಂದ ಮುಕ್ತಿ ಪಡೆಯಲು ದೆಹಲಿ ಸರ್ಕಾರ (Delhi government) ದೊಡ್ಡ ಹೆಜ್ಜೆ ಇಟ್ಟಿದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರಾಪ್ (Vehicle scrappimg) ಗೊಳಿಸಲಾಗುವುದು.  

ವಾಹನ ಮಾಲೀಕರಿಗೆ ದಂಡ  : 
15 ವರ್ಷಕ್ಕಿಂತ ಹಳೆಯ ವಾಹನಗಳು ವಾಹನಗಳು ರಸ್ತೆಯಲ್ಲಿ ಸಂಚರಿಸುವುದು ಕಂಡು ಬಂದರೆ ಕೂಡಲೇ ಆ ವಾಹನಗಳನ್ನು ಜಪ್ತಿ ಮಾಡಲಾಗುವುದು. ವಾಹನಗಳನ್ನು ಜಪ್ತಿ ಮಾಡುವುದು ಮಾತ್ರವಲ್ಲ  ಅದರ ಮಾಲೀಕರಿಗೆ ದಂಡ ವಿಧಿಸಲಾಗುವುದು. ಮತ್ತು ವಾಹನವನ್ನು ಸಾರಿಗೆ ಇಲಾಖೆಯ ಪರವಾನಗಿ ಸ್ಕ್ರಾಪ್ ಗೆ ಹಸ್ತಾಂತರಿಸಲಾಗುವುದು.  ವಾಹನವನ್ನು ಸ್ಕ್ರ್ಯಾಪೇಜ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಸ್ಕ್ರಾಪರ್ ಸ್ಥಳಕ್ಕೆ ಬರಲು ಸಾಧ್ಯವಾಗದಿದ್ದರೆ,  ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕನ್ನು ಸ್ಥಳೀಯ ಪೊಲೀಸರಿಗೆ (police) ಹೊಂದಿರುತ್ತಾರೆ. ನಂತರ ಅದನ್ನು ಪೊಲೀಸರು ಸ್ಕ್ರ್ಯಾಪಿಂಗ್ ಯಾರ್ಡ್‌ಗೆ ಕಳುಹಿಸುತ್ತಾರೆ
15 ವರ್ಷಕ್ಕಿಂತ ಹಳೆಯದಾದ ಕಾರುಗಳನ್ನು (Old vehicle) ರಸ್ತೆಗಳಲ್ಲಿಯೂ ನಿಲ್ಲಿಸುವಂತಿಲ್ಲ. ಒಂದು ವೇಳೆ ಇಂಥಹ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದರೂ, ಕಾರು ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ರಾಜ್ಯದಿಂದ ಅಧಿಕಾರ ಪಡೆದ ಸ್ಕ್ರಾಪರ್ ಮೂಲಕ ಈ ವಾಹನದ ಮಾರುಕಟ್ಟೆ ಮೌಲ್ಯವನ್ನು ಲೆಕ್ಕಹಾಕಿ, ಅದರ ಮೊತ್ತವನ್ನು ಮಾಲೀಕರಿಗೆ ನೀಡಲಾಗುತ್ತದೆ.  ಸ್ಕ್ರಾಪರ್ ಮತ್ತು ವಾಹನ ಮಾಲೀಕರ ನಡುವೆ ಏನಾದರೂ ವಿವಾದಗಳಿದ್ದರೆ, ಅದನ್ನು ಸ್ಥಳೀಯ ಪೊಲೀಸರು ಬಗೆಹರಿಸುತ್ತಾರೆ. ಡಿಸೆಂಬರ್ 3 ರಿಂದ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಪ್ರವೇಶವನ್ನು ರಾಜ್ಯ ಸರ್ಕಾರ ನಿಷೇಧಿಸಿಸ್ಸು, ಈ ನಿರ್ಧಾರವು ಮುನ್ನೆಲೆಗೆ ಬಂದಿದೆ.

15 ವರ್ಷಕ್ಕಿಂತ ಹಳೆಯದಾದ ವಾಹನ ಸ್ಕ್ರ್ಯಾಪ್ ಮಾಡುವುದು ಕಡ್ಡಾಯ
ಫಿಟ್‌ನೆಸ್ ಪರೀಕ್ಷೆಯ ನಂತರ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು (Petrol vehicle) ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಸುಸ್ಥಿತಿಯಲ್ಲಿ ಕಂಡುಬಂದರೆ ಅವುಗಳನ್ನು ಬಳಸಲು ಇದುವರೆಗೆ ಅವಕಾಶವಿತ್ತು. ವಾಹನಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ (Fitness test) ಪಾಸ್ ಆಗದಿದ್ದರೆ, ಅವುಗಳನ್ನು ನಷ್ಟಗೊಳಿಸಲು ಆದೇಶ ನೀಡಲಾಗಿತ್ತು. ವಾಹನ ಸ್ಕ್ರ್ಯಾಪಿಂಗ್ ಅನ್ನು ಉತ್ತೇಜಿಸಲು, ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ,  ತನ್ನ ವಾಹನವನ್ನು ಸ್ಕ್ರಾಪ್ ಮಾಡಲು ಮಾಲೀಕರಿಗೆ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಇದೀಗ ದೆಹಲಿ ಸರ್ಕಾರವು ಹೆಚ್ಚುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ವಿಧಾನವನ್ನು ಅಳವಡಿಸಿಕೊಂಡಿದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದನ್ನು ಕಡ್ಡಾಯಗೊಳಿಸಿದೆ.

Exit mobile version