‘ಕೆ.ಎಲ್‌ ರಾಹುಲ್‌ಗೆ ಸಿಕ್ಕಷ್ಟು ಅವಕಾಶ ಅನ್ಯರಿಗೆ ದೊರೆತಿಲ್ಲʼ! : ಅಸಮಾಧಾನ ವ್ಯಕ್ತಪಡಿಸಿದ ವೆಂಕಟೇಶ್ ಪ್ರಸಾದ್

New delhi : ಕನ್ನಡಿಗ ಕೆ.ಎಲ್‌ ರಾಹುಲ್‌(KL Rahul) ಕುರಿತು ಇದೀಗ ಭಾರತ ಕ್ರಿಕೆಟ್‌ ತಂಡದ ಮಾಜಿ ಹಿರಿಯ ಆಟಗಾರ ವೆಂಕಟೇಶ್‌ ಪ್ರಸಾದ್‌(Venkatesh Prasad) ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಆಯ್ಕೆ ಪ್ರಕ್ರಿಯೆ ಕುರಿತು ಮಾತನಾಡಿರುವ ವೆಂಕಟೇಶ್‌ ಪ್ರಸಾದ್‌ (Venkatesh Prasad expressed displeasure) ಅವರು, ಕೆ.ಎಲ್‌ ರಾಹುಲ್‌ ಅವರಿಗೆ ಸಿಕ್ಕ ಅವಕಾಶಗಳು ಬೇರೆ ಯಾವ ಆಟಗಾರರಿಗೆ ಲಭಿಸಿಲ್ಲ ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.

೪೬ ಟೆಸ್ಟ್ ಪಂದ್ಯಗಳಲ್ಲಿ ಆಟವಾಡಿರುವ ಕೆ.ಎಲ್ ರಾಹುಲ್‌ ಅವರ ರನ್ ಸರಾಸರಿ ಕೇವಲ ೩೪! ಎಂಟು ವರ್ಷಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌(Cricket) ಪಯಣದ ನಂತರವೂ ಅವರ ಈ ಒಂದು ಸರಾಸರಿ ಹೀಗಿದೆ.

ನನಗೆ ತಿಳಿದಿರುವಂತೆ ಇಲ್ಲಿಯವರೆಗೂ ಕೆ.ಎಲ್‌ ರಾಹುಲ್‌ ಅವರಿಗೆ ಸಿಕ್ಕಷ್ಟು ಅವಕಾಶ ಬೇರೆ ಯಾವ ಆಟಗಾರರಿಗೂ ದೊರೆತಿದ್ದು ನನಗೆ ನೆನಪಿಲ್ಲ ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

ಇತ್ತೀಚಿಗೆ ಪ್ರಾರಂಭವಾದ ಇಂಡೋ-ಆಸ್ಟ್ರೇಲಿಯಾ(Indo-Australlia) ಟೆಸ್ಟ್‌ ಸರಣಿ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಏಕಪಕ್ಷೀಯ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು ೧೩೨ ರನ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ(Team India) ಮೊದಲ ಹಂತದ ಗೆಲುವನ್ನು ಸಾಧಿಸಿ,

ಮುನ್ನುಗ್ಗುತ್ತಿರುವ ಸಮಯದಲ್ಲಿ ಇದೀಗ ವೆಂಕಟೇಶ್‌ ಪ್ರಸಾದ್‌ ಅವರ ಹೇಳಿಕೆ ಕ್ರಿಕೆಟ್‌ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳುತ್ತಿದೆ!

ಭಾರತ ಕ್ರಿಕೆಟ್‌ ತಂಡದ ಮಾಜಿ ಹಿರಿಯ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರು ಆಯ್ಕೆ ಸಮಿತಿಯ ವಿರುದ್ಧ ತೋರುತ್ತಿರುವ ಅಸಮಾಧಾನ ಯಾಕೋ ಮುಗಿಯುವ ಸೂಚನೆಯನ್ನು ಹೊಂದಿದೆ ಎಂಬಂತೆ ಕಾಣುತ್ತಿದೆ.

ವೆಂಕಟೇಶ್ ಪ್ರಸಾದ್ ಅವರು, ಭಾರತ ಕ್ರಿಕೆಟ್‌ ತಂಡದಲ್ಲಿ ಕೆ.ಎಲ್‌ ರಾಹುಲ್‌ ಪದೇ ಪದೇ ಅವಕಾಶ (Venkatesh Prasad expressed displeasure) ಪಡೆಯುತ್ತಿರುವುದರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಕಳೆದ ಕೆಲವು ಪಂದ್ಯಗಳಲ್ಲಿ ಕೆ.ಎಲ್‌ ರಾಹುಲ್‌ ಅವರು ನೋಡುತ್ತಿರುವ ಸತತ ವೈಫಲ್ಯ ಬಗ್ಗೆ ವೆಂಕಟೇಶ್ ಪ್ರಶ್ನಿಸಿದ್ದಾರೆ.

ಯಾರಿಗೂ ಇಷ್ಟು ಅವಕಾಶಗಳು ಸಿಕ್ಕಿಲ್ಲ : ಭಾರತೀಯ ಕ್ರಿಕೆಟ್‌ ತಂಡದಲ್ಲಿ(Indian Cricket Team) ಕೆ.ಎಲ್ ರಾಹುಲ್ ಅವರಿಗೆ ದೊರೆಯುತ್ತಿರುವ ಅವಕಾಶಗಳ ಬಗ್ಗೆ ಟ್ವಿಟರ್ನಲ್ಲಿ(Twitter) ಸರಣಿ ಅಸಮಾಧಾನ

ಹೊರಹಾಕಿರುವ ವೆಂಕಟೇಶ್‌ ಪ್ರಸಾದ್ ಅವರು, ಕೆ.ಎಲ್ ರಾಹುಲ್ ಮತ್ತು ಅವರ ಪ್ರತಿಭೆಯ ಬಗ್ಗೆ ನನಗೆ ತುಂಬಾ ಗೌರವವಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ದುರದೃಷ್ಟವಶಾತ್ ಅವರ ಪ್ರದರ್ಶನ ತುಂಬಾ ಸಾಧಾರಣವಾಗಿದೆ. ೪೬ ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ರನ್ ಸರಾಸರಿ ಕೇವಲ ೩೪ ಆಗಿದೆ.

ಅದು ಕೂಡ ಎಂಟು ವರ್ಷಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ನಂತರ. ಇಷ್ಟು ಕಳಪೆ ಪ್ರದರ್ಶನದ ನಂತರ ಬೇರೆ ಯಾರಿಗೂ ಇಷ್ಟೊಂದು ಅವಕಾಶಗಳು ಲಭಿಸಿರುವುದು ನನಗೆ ತಿಳಿದಿಲ್ಲ! ಎಂದು ಹೇಳಿದ್ದಾರೆ.

Exit mobile version