ದಾವಣಗೆರೆಯಲ್ಲಿ ಕೈ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ʼಕುರುಬಾಸ್ತ್ರʼ ; ಕೈ ಕಂಗಾಲು..?!

Davanagere : ಬೆಣ್ಣೆನಗರಿ ದಾವಣಗೆರೆಯಲ್ಲಿ (Davanagere) ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ದಟ್ಟವಾಗಿವೆ. ಕಾಂಗ್ರೆಸ್ (Vinay Kumar missed MP Ticket)

ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ (Vinay Kumar) ನಿಧಾನವಾಗಿ ತಮ್ಮ ಪ್ರಚಾರಕಾರ್ಯವನ್ನು ಚುರುಕುಗೊಳಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ತಳಮಳ ಉಂಟು ಮಾಡಿದೆ.

ಈ ಹಿಂದೆ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಮತ್ತು ಕಾಂಗ್ರೆಸ್ಸಿನ ಡಾ.ಪ್ರಭಾ ಮಲ್ಲಿಕಾರ್ಜುನ (Dr. Prabha Mallikarjuna) ನಡುವೆ ನೇರ ಹಣಾಹಣಿ ಇದೆ ಎನ್ನಲಾಗುತ್ತಿತ್ತು.

ಆದರೆ ಇದೀಗ ದಾವಣಗೆರೆಯ ಗ್ರಾಮೀಳ ಭಾಗದಲ್ಲಿ ನಿಧಾನವಾಗಿ ವಿನಯ್ ಕುಮಾರ್ ಪರವಾದ ಅಲೆ ಕಾಣಿಸಿಕೊಳ್ಳುತ್ತಿದ್ದು, ಈ ಅಲೆ ಯಾರ ಮತ ಬುಟ್ಟಿಗೆ ಕನ್ನ ಹಾಕಲಿದೆ ಎಂಬುದು ನಿಗೂಢ.

ಪಕ್ಷೇತರ ಅಭ್ಯರ್ಥಿಯಾಗಿ (non-party candidate) ಸ್ಪರ್ಧಿಸಿರುವ ಯುವ ನಾಯಕ ವಿನಯ್ ಕುಮಾರ್ಗೆ ಸಿಗುತ್ತಿರುವ ಜನಬೆಂಬಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಬಿಜೆಪಿ ಮತ್ತು ಕಾಂಗ್ರೆಸ್

(BJP & Congress) ಪಕ್ಷಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿದೆ. ವಿನಯ್ ಕುಮಾರ್ (Vinay kumar) ಸ್ಪರ್ಧೆಯೇ ದಾವಣಗೆರೆ ಕ್ಷೇತ್ರದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.

ʼಕುರುಬಾಸ್ತ್ರʼ (ʼKurubastraʼ) ಪ್ರಯೋಗಿಸಿದ ವಿನಯ್ ಕುಮಾರ್ : ವಿನಯ್ ಕುಮಾರ್ ಕುರುಬ ಸಮುದಾಯಕ್ಕೆ ಸೇರಿದ್ದು, ದಾವಣಗೆರೆಯ ಗ್ರಾಮೀಣ ಭಾಗದ (Rural part of Davangere)

ಕುರುಬ ಸಮುದಾಯದ ಮತದಾರರು ಇವರತ್ತ ಹೆಚ್ಚಿನ ಒಲವು ತೋರುತ್ತಿರುವುದು, ಲಿಂಗಾಯತ ಸಮುದಾಯ ಅಭ್ಯರ್ಥಿಗಳಾಗಿರುವ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಮತ್ತು ಕಾಂಗ್ರೆಸ್ಸಿನ ಡಾ.ಪ್ರಭಾ

ಮಲ್ಲಿಕಾರ್ಜುನಗೆ ತಲೆನೋವು ತಂದಿದೆ. ವಿನಯ್ ಕುಮಾರ್ ತಮ್ಮ ಪಾದಯಾತ್ರೆಯ ಮೂಲಕ ಗ್ರಾಮೀಣ ಭಾಗದಲ್ಲಿ ಜನರ ವಿಶ್ವಾಸ ಗಳಿಸುತ್ತಿದ್ದು, ಚುನಾವಣೆಯ (Election) ಮೇಲೆ ಇದರ

ಪರಿಣಾಮ ಏನಾಗಲಿದೆ (Vinay Kumar missed MP Ticket) ಎಂಬುದನ್ನು ಕಾದು ನೋಡಬೇಕಿದೆ.

“ವಿನಯ್ ಕುಮಾರ್ಗೆ ಮತ ದಾವಣಗೆರೆಗೆ ಹಿತ” (“Vote for Vinay Kumar is good for Davangere”) ಘೋಷಣೆ : “ವಿನಯ್ ಕುಮಾರ್ಗೆ ಮತ ದಾವಣಗೆರೆಗೆ ಹಿತ” ಎನ್ನುವ ಘೋಷ

ವ್ಯಾಕ್ಯ ಇದೀಗ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. ಕೇವಲ ಎರಡು ಹಣವಂತರ ಕುಟುಂಬಗಳು ದಶಕಗಳಿಂದ ಈ ಕ್ಷೇತ್ರವನ್ನು ಆಳುತ್ತಿವೆ. ದಾವಣಗೆರೆ ಎನ್ನುವುದು ಪಾಳೇಗಾರ ಕುಟುಂಬದ ಸ್ವತ್ತಲ್ಲ.

ಈ ಬಾರಿ ಸಾಮಾನ್ಯ ನಾಗರಿಕನಾದ ನನಗೆ ದಾವಣಗೆರೆಯ ಮತದಾರರು ಆರ್ಶೀವಾದ ಮಾಡಲಿದ್ದಾರೆ ಎಂದು ವಿನಯ್ ಕುಮಾರ್ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುತ್ತಿದ್ದಾರೆ.

ಇದನ್ನು ಓದಿ: ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಪಕ್ಷದ ವಿನೂತನ ಪ್ರತಿಭಟನೆ.

Exit mobile version