Health Tips: ವಿಟಮಿನ್ (Vitamin) ಅಂಶಗಳು ನಮ್ಮ ದೇಹದ ಪ್ರತಿಯೊಂದು ಅಂಗದ ಕಾರ್ಯ ಚಟುವಟಿಕೆ ನಡೆಸುವುದಲ್ಲದೆ ಸೌಂದರ್ಯ ಹೆಚ್ಚಾಗಲು ಕೂಡ ಮುಖ್ಯ ಕಾರಣವಾಗಿದ್ದು, ಒಂದು ವೇಳೆ ದೇಹದಲ್ಲಿ ಈ ಆರೋಗ್ಯ ಕೊರತೆಯಿದ್ದರೆ ಸೌಂದರ್ಯ (Beauty) ಹಾಳಾಗುವುದು ಗ್ಯಾರಂಟಿ.. ಹಾಗಾದ್ರೆ ಅದು ಏನು ಅಂತ ತಿಳಿಯೋಣ….
![Skin Vitamins](https://sp-ao.shortpixel.ai/client/to_webp,q_glossy,ret_img,w_452,h_339/https://vijayatimes.com/wp-content/uploads/2024/01/vitamin1-1.jpg)
ಕಾಂತಿ ರಹಿತ ಚರ್ಮ ಮತ್ತು ವನ ಚರ್ಮವನ್ನು ನೀವು ಹೊಂದಿದರೆ ಅದಕ್ಕೆ ವಿಟಮಿನ್ ಇ #VitaminE ಕೊರತೆ ಕಾರಣವಾಗಿದೆ ಎಂದು ಹೇಳಬಹುದು. ಏಕೆಂದರೆ ವಿಟಮಿನ್ ಇ ಒಂದು ಆಂಟಿ ಆಕ್ಸಿಡೆಂಟ್ ಆಗಿದ್ದು, ನಮ್ಮ ಚರ್ಮವನ್ನು ಫ್ರೀ ರಾಡಿಕಲ್ ಗಳು ಹಾನಿ ಮಾಡದಂತೆ ತಡೆಯುತ್ತದೆ ಮತ್ತು ಆಕ್ಸಿ ಡೇಟೀವ್ ಒತ್ತಡವನ್ನು ನಿಯಂತ್ರಣ ಮಾಡುತ್ತದೆ. ಇದು ಜೀವಕೋಶಗಳ ಕಾರ್ಯ ಚಟುವಟಿಕೆಯನ್ನು ಉತ್ತಮ ಪಡಿಸುವುದರ ಜೊತೆ ಆರೋಗ್ಯಕರವಾದ ಚರ್ಮ (Healthy Skin) ನಿಮ್ಮದಾಗುವ ಹಾಗೆ ಮಾಡುತ್ತದೆ.ಹಾಗಾಗಿ ವಿಟಮಿನ್ ಈ ಇರುವ ಆಹಾರ ಪದಾರ್ಥ ವನ್ನು ಸೇವಿಸುವುದು ಒಳ್ಳೆಯದು.
ಚರ್ಮದ ಸಮಸ್ಯೆ ಉಂಟಾಗುವ ಲಕ್ಶಣಗಳು
ನಮ್ಮ ತ್ವಚೆಯಲ್ಲಿ ಜೀವಕೋಶಗಳ ಬೆಳವಣಿಗೆ ಆಗುವುದರ ಜೊತೆಗೆ ಚರ್ಮದ ರೋಗ ನಿರೋಧಕ ಶಕ್ತಿಯನ್ನು ಉತ್ತಮಪಡಿಸಿ ಹಾನಿಕಾರಕ ಅಂಶಗಳಿಂದ ಚರ್ಮವನ್ನು ರಕ್ಷಣೆ ಮಾಡುತ್ತದೆ. ವಿಟಮಿನ್ ಡಿ (Vitamin D) ಕೊರತೆಯು ತ್ವಚೆಯ ಸೋರಿಯಾಸಿಸ್ ಸಮಸ್ಯೆಯನ್ನು ಉಲ್ಬಣ ಗೊಳಿಸುತ್ತದೆ. ಒಣ ಚರ್ಮ ಕಂಡು ಬರಲು ಇದು ಕೂಡ ಒಂದು ಪ್ರಮುಖ ಕಾರಣವಾಗಿದೆ.
![Vitamins Health Tips](https://sp-ao.shortpixel.ai/client/to_webp,q_glossy,ret_img,w_440,h_330/https://vijayatimes.com/wp-content/uploads/2024/01/Rare_Selena_Single_Shot-1024x768.webp)
ದೇಹದಲ್ಲಿ ವಿಟಮಿನ್ ಇ ಕೊರತೆಯಾದರೆ ಅದರಿಂದ ಚರ್ಮದ ಕಿರಿಕಿರಿ ಮತ್ತು ಉರಿಯುತ ಕಂಡು ಬರುತ್ತದೆ. ವಿಟಮಿನ್ ಅಂಶವಿರುವ ಆಹಾರ ಸೇವಿಸಿದರೆ ಚರ್ಮದಲ್ಲಿ ತೇವಾಂಶವನ್ನು ಹಾಗೆ ಉಳಿಸಿ ತ್ವಚೆಯ ಆರೋಗ್ಯವನ್ನು ಉತ್ತಮ ಪಡಿಸುತ್ತದೆ. ವಿಟಮಿನ್ ಇ ನಮ್ಮ ದೇಹದ ವಿಷಕಾರಿ ಅಂಶಗಳ ವಿರುದ್ಧ ಇದು ಹೋರಾಡುವುದಲ್ಲದೆ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಇದೊಂದು ತ್ವಚೆಯನ್ನು ರಕ್ಷಿಸುವ ಆಂಟಿ ಆಕ್ಸಿಡೆಂಟ್ (Anti Oxidant) ಆಗಿದೆ. . ಹೀಗಾಗಿ ನಮ್ಮ ಚರ್ಮದ ಆರೋಗ್ಯಕ್ಕೆ ಇದು ಕೊಲೆಜನ್ ಉತ್ಪತ್ತಿಯ ಮೂಲಕ ನೆರವಾಗುತ್ತದೆ.
ವಿಟಮಿನ್ ಬಿ (Vitamin B) ಕೊರತೆ ನಮ್ಮ ತ್ವಚೆಯಲ್ಲಿ ಮೊಡವೆಗಳು, ದದ್ದುಗಳು ಮತ್ತು ಒಣ ಚರ್ಮದ ಸಹಿತ ಒಡೆದ ತುಟಿಗಳು ಮತ್ತು ಚರ್ಮದ ಮೇಲೆ ಸುಕ್ಕುಗಳು ಕಂಡು ಬರುವ ಹಾಗೆ ಮಾಡುತ್ತದೆ. ಸೂರ್ಯನ ಬಿಸಿಲಿಗೆ ನಮ್ಮ ಚರ್ಮ ಹೆಚ್ಚು ಹಾಳಾಗುತ್ತದೆ ಮತ್ತು ನಮ್ಮ ಚರ್ಮ ಹೆಚ್ಚು ಕೆಂಪಾಗುತ್ತದೆ. ವಿಟಮಿನ್ ಬಿ ತನ್ನಲ್ಲಿ ಆಂಟಿ ಇನ್ಫ್ಲಮೆಟರಿ ಗುಣಲಕ್ಷಣ ಗಳನ್ನು ಹೊಂದಿದ್ದು, ಚರ್ಮದ ಮೇಲೆ ಉಂಟಾಗುವ ಇಸುಬು, ಮೊಡವೆ (Pimple) ಮತ್ತು ಚರ್ಮದ ಕಿರಿಕಿರಿ ಯನ್ನು ತಡೆಯುತ್ತದೆ.
ನಮ್ಮ ಚರ್ಮದ ಜೀವಕೋಶಗಳಿಗೆ ಬಹಳ ಅಗತ್ಯವಾದ ವಿಟಮಿನ್ ಅಂಶ ಇದಾಗಿದೆ. ಇದು ಚರ್ಮದ ಜೀವಕೋಶಗಳನ್ನು ಸರಿಪಡಿಸುವುದರ ಜೊತೆಗೆ ಉರಿಯುತವನ್ನು ನಿಯಂತ್ರಣ ಮಾಡಿ ಇಸುಬು ಮತ್ತು ಇನ್ನಿತರ ಚರ್ಮದ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹಲವಾರು ಕ್ಲಿನಿಕಲ್ (Clinical) ಅಧ್ಯಯನಗಳು ಕೂಡ ಇಸಬು ಸಮಸ್ಯೆಯನ್ನು ಮುಕ್ತಗೊಳಿಸಲು ವಿಟಮಿನ್ ಎ ಕಾರ್ಯ ಚಟುವಟಿಕೆಯ ಬಗ್ಗೆ ಸಂಶೋಧನೆ ನಡೆಸಿವೆ.
ಮೇಘಾ ಮನೋಹರ ಕಂಪು