ಡಿಸೆಂಬರ್ 12ರಂದು ರಾಜ್ಯ ಒಕ್ಕಲಿಗ ಸಂಘದ ಚುನಾವಣೆ, ಚುನಾವಣಾ ಕಣದಲ್ಲಿ 141 ಅಭ್ಯರ್ಥಿಗಳು

ಬೆಂಗಳೂರು ನ 26 : ರಾಜ್ಯ ಒಕ್ಕಲಿಗರ ಸಂಘಕ್ಕೆ ಡಿ. 12ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಪಿ. ರವೀಂದ್ರ ತಿಳಿಸಿದ್ದಾರೆ.

ಈ ಬಗ್ಗೆ ಇಂದು ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಅವರು ‘ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಸೇರಿ ಒಟ್ಟು 389 ಮತ ಕೇಂದ್ರಗಳಿದ್ದು, 1,97,125 ಮತದಾರರು 15 ಅಭ್ಯರ್ಥಿಗಳ ಆಯ್ಕೆಗೆ ಮತದಾನ ಮಾಡಲಿದ್ದಾರೆ. ಇಲ್ಲಿಯವರೆಗೂ ಒಟ್ಟು 156 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವುಗಳ ಪೈಕಿ 4 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 11 ನಾಮಪತ್ರಗಳನ್ನು ವಾಪಸ್ ಪಡೆಯಲಾಗಿದೆ. ಅಭ್ಯರ್ಥಿಗಳ ಅಂತಿಮ ಸಂಖ್ಯೆ 141 ಇದೆ ಎಂದು ರವೀಂದ್ರ ತಿಳಿಸಿದ್ದಾರೆ.

ರಾಜ್ಯಾದ್ಯಂತ 11 ಜಿಲ್ಲಾ ಚುನಾವಣಾ ಕ್ಷೇತ್ರಗಳು ಇವೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಸೇರಿ ಒಟ್ಟು 389 ಮತಕೇಂದ್ರಗಳಿದ್ದು, ಮೈಸೂರಿನಲ್ಲಿ 54 ಮತಗಟ್ಟೆಗಳಿದ್ದು, 25,334 ಮತದಾರರಿದ್ದಾರೆ, ಇಲ್ಲಿ ಒಟ್ಟು 9 ಅಭ್ಯರ್ಥಿಗಳಿದ್ದಾರೆ. ಮಂಡ್ಯದಲ್ಲಿ 186 ಮತಗಟ್ಟೆಗಳಿದ್ದು, 91,845 ಮತದಾರರು ಮತ್ತು 16 ಅಭ್ಯರ್ಥಿಗಳು ಇದ್ದಾರೆ. ಹಾಸನದಲ್ಲಿ 100 ಮತಗಟ್ಟೆಗಳಿದ್ದು, 53,076 ಮತದಾರರಿದ್ದಾರೆ. ಇಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದಾರೆ. ಬೆಂಗಳೂರು ನಗರದಲ್ಲಿ 1,19,937 ಮತದಾರರಿದ್ದು, 238 ಮತಗಟ್ಟೆಗಳಿವೆ. ಬೆಂಗಳೂರು ಗ್ರಾಮಾಂತರದಲ್ಲಿ 34,334 ಮತದಾರರಿದ್ದು, 68 ಮತಗಟ್ಟೆಗಳಿವೆ, ರಾಮನಗರದಲ್ಲಿ 42,892 ಮತದಾರರಿದ್ದು, 84 ಮತಗಟ್ಟೆಗಳಿವೆ.   ಇನ್ನು ರಾಜ್ಯಾದ್ಯಂತ ಒಟ್ಟು 1049 ಮತಕೇಂದ್ರಗಳಿದ್ದು, 5,20,721 ಮತದಾರರಿದ್ದಾರೆ. ಒಟ್ಟು ಅಭ್ಯರ್ಥಿಗಳ ಸಂಖ್ಯೆ 221 ಇದೆ ಎಂದು ತಿಳಿಸಿದರು.

Exit mobile version