ಮತದಾರರ ಪಟ್ಟಿಯಲ್ಲಿನ ಪ್ರಭಾವಿಗಳನ್ನು ಗುರುತಿಸಿ, 100 ಸಮಿತಿ ರಚಿಸಿ : ಸಿಎಂ ಬೊಮ್ಮಾಯಿ ಕರೆ

Bengaluru : ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ(voter list influential people) ಮುನ್ನ ಮತದಾರರ ಪಟ್ಟಿಯ ಪ್ರತಿ ಪುಟದಲ್ಲಿ ಪ್ರಭಾವಿಗಳನ್ನು ಗುರುತಿಸುವಂತೆ ತಮ್ಮ ಪಕ್ಷದ ಬೂತ್ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಹೇಳಿದ್ದಾರೆ.

ಬೆಂಗಳೂರಿನ ಶಿವಾಜಿನಗರ(Shivaji nagar) ಕ್ಷೇತ್ರದ ವಸಂತನಗರ ವಾರ್ಡ್‌ನಲ್ಲಿ 10 ದಿನಗಳ ಕಾಲ ಬೂತ್ ಮಟ್ಟದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿಯ ‘ಬೂತ್ ವಿಜಯ’ (voter list influential people)ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವಾರ್ಡ್‌ನಲ್ಲಿಯೂ ಇತರರ ಮೇಲೆ ಪ್ರಭಾವ ಬೀರುವ ಪ್ರಮುಖ ಮತದಾರರೊಂದಿಗೆ ಸಭೆ ನಡೆಸಬೇಕು.

ಬೂತ್ ಮಟ್ಟದಲ್ಲಿ 100 ಪ್ರಭಾವಿಗಳ ಸಮಿತಿ ರಚಿಸಿ ಪ್ರತಿ ಬೂತ್‌ನಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳೆಯರು ಮತ್ತು ಯುವಕರನ್ನು ಒಳಗೊಂಡ ವೇದಿಕೆ ಇರಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.

ಪುಟ ಸಮಿತಿಗಳನ್ನು ರಚಿಸಬೇಕು ಎಂದು ಸೂಚಿಸಿದ ಅವರು, ರಚನೆಯಾಗುವ ಪುಟ ಸಮಿತಿಗಳಲ್ಲಿ ಪ್ರಭಾವಿಗಳು ಸೇರಿದಂತೆ 25 ಸದಸ್ಯರಿರಬೇಕು.

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಗುರಿ ಹೊಂದಿರುವ ಬಿಜೆಪಿ(BJP), ವಿಧಾನಸಭೆಯ ಒಟ್ಟು 224 ಸ್ಥಾನಗಳಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ.

ಚುನಾವಣೆಗೂ ಮುನ್ನ ಐದು ಬಾರಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ಕಾಂಗ್ರೆಸ್‌ನ(Congress) ಜನವಿರೋಧಿ ನೀತಿಗಳ ಬಗ್ಗೆ ತಿಳಿಸುವಂತೆ ಬೂತ್ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: https://vijayatimes.com/actor-kishores-post-goes-viral/

ತಮ್ಮ ಬೂತ್‌ ಕಾರ್ಯಕರ್ತರಿಗೆ ಪ್ರತ್ಯೇಕವಾಗಿ ಈ ವಿಷಯವನ್ನು ತಿಳಿಸಿದ ಸಿಎಂ, ನೀವು ಹೀಗೆ ಮಾಡಿದರೆ ಮಾತ್ರ ಬಿಜೆಪಿಯ ಧ್ವಜವು ಹಾರಲು ಸಾಧ್ಯ.

ಶಿವಾಜಿನಗರ (ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಸೋತಿರುವ) ಕ್ಷೇತ್ರಗಳಲ್ಲಿ ಹೆಚ್ಚು ಕೆಲಸ ಮಾಡುವುದು ಒಳಿತು ಎಂದು ತಮ್ಮ ಕಾರ್ಯಕರ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಸದ್ಯ ಬಿಜೆಪಿ ಈ ಬಾರಿಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಭಾರಿ ಪೈಪೋಟಿ ನಡೆಸುತ್ತಿದ್ದು, ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸುತ್ತಿದೆ.

ಈ ಮಧ್ಯೆ ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಉಲ್ಲೇಖಿಸಿ, ಬಿಜೆಪಿ ವಿರುದ್ಧ ಕಾಂಗ್ರೆಸ್‌ ಸರಣಿ ಆರೋಪಗಳನ್ನು ಮಾಡುತ್ತಿದೆ.

ಇನ್ನು ಈ ಆರೋಪಗಳನ್ನು ತಳ್ಳಿ ಹಾಕುತ್ತಿರುವ ಬಿಜೆಪಿ ರಾಜಕೀಯ ಬಲಾಬಲಗಳನ್ನು ಹಿಡಿದು ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಸೆಣಸಾಡುತ್ತಿದೆ.

Exit mobile version