ಪಶ್ಚಿಮ ಬಂಗಾಳ-ಅಸ್ಸಾಂ ನಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭ

ನವದೆಹಲಿ, ಮಾ. 27: ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗೆ ಇಂದಿನಿಂದ ಮೊದಲ ಹಂತದ ಮತದಾನ ಆರಂಭವಾಗಿದೆ. ಬೆಳಗ್ಗೆ 7 ರಿಂದಲೇ ಮತದಾನ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಕರೆ ನೀಡಿದ್ದಾರೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಎಲ್ಲೂ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ 730 ಅರೆಸೈನಿಕ ಪಡೆಗಳ ತುಕಡಿಯನ್ನು ನೇಮಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಪಶ್ಚಿಮಬಂಗಾಳದ 30 ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ 47 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಒಟ್ಟು 1.54 ಕೋಟಿಗೂ ಹೆಚ್ಚು ಮತದಾರರು ಇಂದು ಮತಚಲಾಯಿಸಲಿದ್ದಾರೆ. ಈ ಮೂಲಕ ಪ್ರಮುಖ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧಾರವಾಗಲಿದೆ.

ಮಾಹಿತಿಯ ಪ್ರಕಾರ, 92 ಅರೆಸೈನಿಕ ಪಡೆಗಳನ್ನು ಚುನಾವಣೆಗಾಗಿ ನೇಮಕ ಮಾಡಲಾಗಿದೆ. ಸೂಕ್ಷ್ಮ ಪ್ರದೇಶವಾದ ಬಂಕುರಾದಲ್ಲಿ 4, ಜರ್​ಗ್ರಾಮ್​ನಲ್ಲಿ 144, ಪಶ್ಚಿಮ ಮಿಡ್ನಾಪೋರ್ನಲ್ಲಿ 139, ಪೂರ್ವ ಮಿಡ್ನಾಪೋರ್ನಲ್ಲಿ 169 ಮತ್ತು ಪುರುಲಿಯಾದಲ್ಲಿ 186 ಅರೆಸೇನಾ ತುಕಡಿಯನ್ನು ನಿಯೋಜಿಸಲಾಗಿದೆ.

Exit mobile version