ಮತದಾನ ಮುಕ್ತಾಯ ; ಇಂಗ್ಲೆಂಡ್‌ ಪ್ರಧಾನಿಯಾಗ್ತಾರಾ ರಿಷಿ ಸುನಕ್?

London : ಇಂಗ್ಲೆಂಡ್‌ನಲ್ಲಿ(England) ಪ್ರಧಾನಿ(PM) ಗದ್ದುಗೆ ಎರಲು ನಡೆದ ಚುನಾವಣೆ(Election) ಮುಕ್ತಾಯಗೊಂಡಿದೆ. ಮತದಾನ(Voting) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇಂಗ್ಲೆಂಡ್‌ನ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬುದು ಮತ ಪೆಟ್ಟಿಗೆಯಲ್ಲಿ  ಭದ್ರವಾಗಿದೆ.

ಈ ನಿಟ್ಟಿನಲ್ಲಿ ಪ್ರಧಾನಿ ಹುದ್ದೆಯ ರೇಸ್ನಲ್ಲಿ  ಪ್ರಬಲ ಅಭ್ಯರ್ಥಿಯಾಗಿರುವ ಭಾರತದ ಮೂಲದ ರಿಷಿ ಸುನಕ್‌(Rishi Sunak) ಭವಿಷ್ಯ ಏನಾಗಲಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ. ಇಂಗ್ಲೆಂಡ್‌ನಲ್ಲಿ ಪ್ರಧಾನಿಯನ್ನು ಆಯ್ಕೆ ಮಾಡುವುದು ಆಡಳಿತ ಪಕ್ಷದ ಸದಸ್ಯರ ಜವಾಬ್ದಾರಿಯಾಗಿರುತ್ತದೆ.

ಬೋರಿಸ್‌ ಜಾನ್ಸನ್‌ ಪ್ರಧಾನಿ ಹುದ್ದೆಗೆ ರಾಜೀನಾಮೆ(Resign) ನೀಡಿದ ನಂತರ ಅವರದೇ ಪಕ್ಷದ ಸದಸ್ಯರು ಪ್ರಧಾನಿ ಹುದ್ದೆಗಾಗಿ ಕಣಕ್ಕಿಳಿದರು. ಇದರಲ್ಲಿ ಭಾರತದ ಮೂಲದ ರಿಷಿ ಸುನಕ್‌ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಲಿಜ್ ಟ್ರಸ್ ಪ್ರಬಲ ಸ್ಪರ್ಧಿಗಳಾಗಿದ್ದರು. ಈ ಇಬ್ಬರ ಮಧ್ಯೆ ಬಿರುಸಿದ ಹಣಾಹಣಿ  ನಡೆದಿದೆ.

ಇನ್ನು ಆಡಳಿತ ಪಕ್ಷದಲ್ಲಿ ಸುಮಾರು 1,80,000 ರಿಂದ 2,00,000 ಸದಸ್ಯರಿದ್ದಾರೆ ಎಂದು ಅಂದಾಜಿಸಲಾಗಿದೆ, ಅವರು ತಮ್ಮ ಪಕ್ಷದ ನಾಯಕನನ್ನು ಮತ್ತು ಆ ಮೂಲಕ ಬ್ರಿಟನ್‌ನ(Britian) ಮುಂದಿನ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ. ಇದು ಇಡೀ ಇಂಗ್ಲೆಂಡ್ ಜನಸಂಖ್ಯೆಯ ಶೇಕಡಾ 0.3 ರಷ್ಟಿದೆ.

ಇನ್ನು ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾನಿಲಯದ “ಮೈಲ್ ಎಂಡ್ ಇನ್‌ಸ್ಟಿಟ್ಯೂಟ್” ಪ್ರಕಾರ, ಆಡಳಿತದ ಪಕ್ಷದ 1,80,000 ರಿಂದ 2,00,000 ಸದಸ್ಯರಲ್ಲಿ ಶೇ.44 ಪ್ರತಿಶತದಷ್ಟು  ಜನರು 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 97 ಪ್ರತಿಶತದಷ್ಟು ಬಿಳಿಯರು ಎಂದು ಹೇಳಿದೆ. ಈ ಅಂಕಿ ಅಂಶಗಳು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಗೆಲುವಿಗೆ ಕಾರಣವಾಗುವ ಸಾಧ್ಯತೆಗಳನ್ನು ಹೆಚ್ಚಿಸಿದೆ.

ರಿಷಿ ಸುನಕ್ ‌ಹಿಂದುಳಿಯಲು ಮೂರು ಪ್ರಮುಖ ಕಾರಣಗಳಿವೆ: ರಿಷಿ  ಸುನಕ್‌ ಸಂಪತ್ತು, ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಬ್ರಿಟನ್‌ ರಾಣಿಗಿಂತ ಶ್ರೀಮಂತರು. ಹೀಗಾಗಿ ರಿಷಿಯಂತಹ ಶ್ರೀಮಂತ ವ್ಯಕ್ತಿಗೆ, ಸಾಮಾನ್ಯ ಜನರ ಸಮಸ್ಯೆಗಳು ಅರ್ಥವಾಗುವುದಿಲ್ಲ ಎಂದು ಹಲವರು ನಂಬುತ್ತಾರೆ.

ಆದರೆ ಅಚ್ಚರಿ ಎಂದರೆ, ಲಿಜ್ ಟ್ರಸ್‌ನಿಂದ ಹಿಡಿದು ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಮತ್ತು ಪ್ರಸ್ತುತ ಪಿಎಂ ಬೋರಿಸ್ ಜಾನ್ಸನ್ ಅವರೆಲ್ಲರೂ ಮಿಲಿಯನೇರ್‌ಗಳು ಎಂಬುದು ಗಮನಿಸಬೇಕಾದ ಸಂಗತಿ.

ರಿಷಿ- ಬೋರಿಸ್‌ ಮಧ್ಯೆ ವೈಮನಸ್ಸು : ರಿಷಿ ಸುನಕ್‌ ದಿಢೀರನೇ  ರಾಜೀನಾಮೆ ನೀಡುವ ಮೂಲಕ ತನ್ನನ್ನು ಕ್ಯಾಬಿನೆಟ್‌ಗೆ ಕರೆತಂದ ಬೋರಿಸ್ ಜಾನ್ಸನ್‌  ಬೆನ್ನಿಗೆ  ಚೂರಿ ಇರಿದ ವ್ಯಕ್ತಿಯಾಗಿದ್ದಾರೆ ಎಂದು ಆಪಾದಿಸಲಾಗುತ್ತದೆ. ರಿಷಿ ರಾಜೀನಾಮೆಯ ನಂತರ ಸುಮಾರು 50 ಸಂಸದರು ರಾಜೀನಾಮೆ ನೀಡಿದರು, ಇದರ ಪರಿಣಾಮವಾಗಿ ಬೋರಿಸ್ ಅಂತಿಮವಾಗಿ ರಾಜೀನಾಮೆ ನೀಡಿದರು.

ಹೀಗಾಗಿ ಬೋರಿಸ್‌ ಜಾನ್ಸನ್‌ ಬೆಂಬಲಿಗರು ರಿಷಿಯನ್ನು ಹೆಚ್ಚು ದ್ವೇಷಿಸುತ್ತಾರೆ. ಈ ಅಂಶ ರಿಷಿ ಸುನಕ್‌ಗೆ ದೊಡ್ಡ ಹೊಡೆತ ನೀಡಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಎಂದಿಗೂ ಯಾವುದೇ ಅಭ್ಯರ್ಥಿಗಳನ್ನು ಬಹಿರಂಗವಾಗಿ ಬೆಂಬಲಿಸದಿದ್ದರೂ, ಅವರು  ಪರೋಕ್ಷವಾಗಿ ಲಿಜ್ ಟ್ರಸ್ ರನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ.

ರಿಷಿಯ ಆರ್ಥಿಕ ಯೋಜನೆ : ತನ್ನ ಎದುರಾಳಿಯಂತೆ ಯಾವುದೇ ತೆರಿಗೆ ಕಡಿತವನ್ನು ನೀಡದೆ, ರಿಷಿ  ಸುನಕ್‌ ಮುಂಬರುವ ಸಮಯಗಳು ಕಠಿಣವಾಗಬಹುದು, ಹಣದುಬ್ಬರವನ್ನು ನಿಭಾಯಿಸಲು ಕಠಿಣ ನಿರ್ಧಾರಗಳು ಬೇಕಾಗಬಹುದು ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. 

ಮತ್ತೊಂದೆಡೆ, ಹೆಚ್ಚಿನ ತೆರಿಗೆಗಳು “ಉಸಿರುಗಟ್ಟಿಸುತ್ತಿವೆ” ಎಂದು ಟ್ರಸ್ ಅಭಿಪ್ರಾಯಪಟ್ಟಿದೆ, ಇದರ ಪರಿಣಾಮವಾಗಿ  ಸಾಮಾನ್ಯ ಜನರು ಲಿಜ್ ಟ್ರಸ್ ರನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ. ಏಕೆಂದರೆ ಲಿಜ್ ಟ್ರಸ್ ಅವರು ಕನ್ಸರ್ವೇಟಿವ್ ಪಕ್ಷದ ಸದಸ್ಯತ್ವವನ್ನು ಮೆಚ್ಚಿಸಲು ಏನು ಹೇಳಬೇಕೋ ಅದನ್ನು ಹೇಳಿದ್ದಾರೆ.  ಇದು ಚುನಾವಣೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

Exit mobile version