ಒಂದೇ ಕಡೆಯಲ್ಲಿ ಐದು ಹುಲಿಗಳ ದರ್ಶನ: ಕಬಿನಿಯಲ್ಲಿ ಸಫಾರಿಗೆ ಹೋದವರು ಫುಲ್ ಖುಷ್

ಮೈಸೂರು, ಮಾ. 01: ವಾರಾಂತ್ಯದಲ್ಲಿ ಕಾಡಿನಲ್ಲಿ ಸಫಾರಿ ಹೋದ ಪ್ರಾಣಿಪ್ರಿಯರಿಗೆ ಒಂದೇ ಒಂದು ಹುಲಿ ಕಣ್ಣಿಗೆ ಕಾಣಿಸಿದ್ರೆ ಸಾಕು ಎನ್ನುವ ಪ್ರಾಣಿಪ್ರಿಯರು ಇದ್ದಾರೆ. ಆದರೂ ಅದೆಷ್ಟೋ ಜನರಿಗೆ ಆ ಅವಕಾಶ ಸಿಗೋದೆ ಇಲ್ಲ.

ಆದರೆ ನಿನ್ನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಕಬಿನಿಯಲ್ಲಿ ಹುಲಿಗಳ ಅಪರೂಪದ ದರ್ಶನವಾಗಿದೆ. ನಾಗರಹೊಳೆಯ ಕಬಿನಿಯಲ್ಲಿ ಸಫಾರಿ ಮಾಡಿದವರಿಗೆ ಐದು ಹುಲಿಗಳ ದರ್ಶನವಾಗಿದೆ. ಐದು ಹುಲಿಗಳನ್ನು ಒಟ್ಟಿಗೆ ಕಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.

ಸದ್ಯ ಐದು ಹುಲಿಗಳು ಒಂದೇ ಕಡೆಯಲ್ಲಿ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಫಾರಿಗೆ ಹೋಗಿರುವ ಪ್ರವಾಸಗರು ಈ ವೀಡಿಯೋವನ್ನ ಸೆರೆಹಿಡಿದಿದ್ದಾರೆ. ಒಮ್ಮೆಲೆ 5 ಹುಲಿಗಳು ಬರಲಿದ್ದು ,ಒಂದರ ಮೇಲೊಂದು ಕೂತು ಆಟವಾಡುತ್ತವೆ. 5 ಹುಲಿಗಳು ಟೀಂ ನೋಡಿದ ಪ್ರವಾಸಿಗರು ಸಖತ್ ಖುಷ್ ಆಗಿದ್ದು, ಅಪರೂಪದಲ್ಲಿ ಸಿಗುವ ಇಂತಹ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಬ್ಬಿಸಿದೆ.

ನಾಗರಹೊಳೆಯಲ್ಲಿ ಇತ್ತೀಚೆಗೆ ಹುಲಿಗಳ ಸಂತತಿ ಹೆಚ್ಚಾಗಿದ್ದು, ಮೇಲಿಂದ ಮೇಲೆ ಪ್ರವಾಸಿಗರಿಗೆ ಹುಲಿದರ್ಶನವಾಗುತ್ತಿದೆ . ಆದ್ರೆ ಹಲವು ದಿನಗಳ ಬಳಿಕ ಒಮ್ಮೆಲೆ 5 ಹುಲಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದು ,ಪ್ರವಾಸಿಗರನ್ನ ರೋಮಾಂಚನಗೊಳಿಸಿದೆ. ಬೇಸಿಗೆ ಹೆಚ್ಚಾಗ್ತಿದ್ದಂತೆ ಕಾಡಿನಲ್ಲಿ ನೀರಿನ ಸಮಸ್ಯೆ ತಲೆದೂರುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗ್ತಿದೆ . ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರೋ ಸಾಧ್ಯತೆ ಹೆಚ್ಚಿದೆ.

ಲಅರಣ್ಯಾಧಿಕಾರಿಗಳು ಸಿಕ್ಕಾಪಟ್ಟೆ ಅಲರ್ಟ್ ಆಗಿದ್ದಾರೆ. ಒಟ್ಟಾರೆ ಸಫಾರಿಯಲ್ಲಿ ಕಾಣಿಸಿರುವ ಹುಲಿಗಳ ವೀಡಿಯೋ ಎಲ್ಲೆಡೆ ಹರಿದಾಡ್ತಿದ್ದು , ಅಯ್ಯೋ ನಮ್ಗೂ ಆದಷ್ಟೂ ಈ ರೀತಿ ಅವಕಾಶ ಸಿಗಲಿ ಅಂತ ಪ್ರಾಣಿಪ್ರಿಯರು ಕನವರಿಸುತ್ತಿದ್ದಾರೆ.

Exit mobile version