ಇಂಧನ ಬೆಲೆ ಏರಿಕೆಗೆ ಹಿಂದಿನ ಸರ್ಕಾರವೇ ಕಾರಣನಾ? ಹಳೇ ಸರಕಾರಗಳ ಆಯಿಲ್ ಬಾಂಡೇ ತೈಲಬೆಲೆಯೇರಿಕೆಗೆ ಮೂಲ ಅಂತ ಕೇಂದ್ರ ಸರ್ಕಾರ ಹೇಳ್ತಿದೆ ಇದು ನಿಜನಾ? ಸುಳ್ಳಾ?

ಗ್ಯಾಸ್, ಪೆಟ್ರೋಲ್‌, ಡೀಸೆಲ್‌ ದರ ಇಳಿಯುದ್ರ ಬಗ್ಗೆ ಮಾತೇ ಇಲ್ಲ. ನಮ್ಮ ದೇಶದಲ್ಲಿ ಈ ರೀತಿ ಇಂಧನ ಬೆಲೆ ಹೆಚ್ಚುತ್ತಾ ಹೋಗಲು ಮುಖ್ಯ ಕಾರಣ ಏನು? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಲೀಟರ್‌ಗೆ ಬರೀ 31 ರೂಪಾಯಿ ಇದ್ರೂ ನಮ್ಮ ದೇಶದಲ್ಲಿ ಯಾಕೆ ಇಂಧನ ಬೆಲೆ ಗಗನಕ್ಕೇರುತ್ತಿದೆ?  ನಮ್ಮ ಕೇಂದ್ರ ಹಣಕಾಸು ಸಚಿವರ ಪ್ರಕಾರ ಇದಕ್ಕೆಲ್ಲಾ ಹಿಂದಿನ ಯುಪಿಎ ಸರ್ಕಾರ ಮಾಡಿರುವ ಆಯಿಲ್ ಬಾಂಡ್ಗಳು ಕಾರಣವಂತೆ.

ಕಳೆದೊಂದು ವರ್ಷದಲ್ಲಿ ತೈಲ ದರ ಬದಲಾವಣೆ (ಬೆಂಗಳೂರು)

ಆಗಸ್ಟ್ 2020          ಆಗಸ್ಟ್ 2021

ಪೆಟ್ರೋಲ್           83.02 ರೂ              105.31 ರೂ

ಡೀಸೆಲ್               77.65 ರೂ                 94.91 ರೂ

ಗ್ಯಾಸ್ ಸಿಲಿಂಡರ್       597 ರೂ                862 ರೂ              

ವಾಣಿಜ್ಯ ಗ್ಯಾಸ್ ಸಿಲಿಂಡರ್           1100ರೂ          1760ರೂ

ಮಧ್ಯಪ್ರದೇಶದ ಶಾಸಕ ವಿಶ್ವಾಸ್ ಸಾರಂಗ್ ಅಂತೂ ತೈಲಬೆಲೆ ಏರಿರುವುದಕ್ಕೆ ನೆಹರೂ ಅವರ 1947ರ ಭಾಷಣದ ತಪ್ಪೇ ಕಾರಣ ಅಂತಲೂ ಹೇಳಿದ್ದಾರೆ. ಆದ್ರೆ ಕಾಂಗ್ರೆಸ್ ಸರಕಾರದ ಆಯಿಲ್ ಬಾಂಡ್ ಹಣ ಪಾವತಿ ಬಾಕಿ ಇರೋದ್ರ ಬಗ್ಗೆನೇ ಬಹಳ ಚರ್ಚೆಯಾಗಿದ್ದು. ನಿಜಕ್ಕೂ ಈ ಆಯಿಲ್ ಬಾಡ್ಗಳಂದ್ರೇನು? ಇವುಗಳಿಂದಲೇ ತೈಲಬೆಲೆ ಏರ್ತಿರೋದಾ? ಅಲ್ಲ ತನ್ನ ತಪ್ಪನ್ನ ಮುಚ್ಚೋದಕ್ಕೆ ಕೇಂದ್ರ ಸರ್ಕಾರ ಬೇರೆ ಬೇರೆ ಸಬೂಬುಗಳನ್ನ ಕೊಡ್ತಿದ್ಯಾ?

ದೇಶದಲ್ಲೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ಆದರೆ ಇದಕ್ಕೆಲ್ಲ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಕಾರಣ ಅಂತ ಹೇಳಿ ಬಿಜೆಪಿ ಕೈತೊಳ್ಕೊಳ್ತಿದೆ. 2026ರವರೆಗೂ ಯುಪಿಎ ನೀಡಿರೋ ಆಯಿಲ್ ಬಾಂಡ್ ಗಳ ಹಣ ಪಾವತಿ ಮಾಡ್ಬೇಕಿರೋದ್ರಿಂದ ದರ ಹೆಚ್ಚಾಗಿದೆ ಅಂತಿದ್ದಾರೆ. 2005 ರಿಂದ 2010 ರವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ 100 ಡಾಲರ್ ಪ್ರತಿ ಬಾರಲ್ ಮೇಲೆ ಇದ್ದಾಗ್ಲೂ, ಜನರ ಜೇಬು ಸುಡಬಾರ್ದು ಅಂತ ಆಗಿನ ಸರ್ಕಾರ ತೈಲ ಕಂಪನಿಗಳೊಂದಿಗೆ ಒಡಬಂಡಿಕೆಯೊಂದನ್ನ ಮಾಡಿತ್ತು.

2005 ರಿಂದ 10ರವರೆಗೆ ಕೇಂದ್ರ ಸರಕಾರ 1.40 ಲಕ್ಷ ಕೋಟಿಯಷ್ಟು ಮೊತ್ತದ ಆಯಿಲ್ ಬಾಂಡುಗಳನ್ನು ಕಂತಿನ ಮೇಲೆ ಬಡ್ಡಿಯೊಂದಿಗೆ ಹಣವನ್ನು ಮರುಪಾವತಿಸುವ ಬಾಂಡನ್ನು ತೈಲ ಕಂಪನಿಗಳಿಗೆ ನೀಡಿತ್ತು. ಸುಲಭವಾಗಿ ವಿವರಿಸುವುದಾದರೆ ನಮಗಿಷ್ಟದ ವಸ್ತು ಖರೀದಿಸಲು ಬಡ್ಡಿ ಸಮೇತ EMI ಪಾವತಿಸುವ ರೀತಿನೇ ಇದು ಕೂಡ. ಇದ್ರಿಂದ ದೇಶದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆ ಎಗ್ರಿಮೆಂಟ್ ನಲ್ಲಿ 2021ರಿಂದ 2026ರವರೆಗೆ ಹಣ ಬಡ್ಡಿ ಸಮೇತ ಪಾವತಿಯಾಗುವಂತೆ ಭರವೆಸೆಯೂ ನೀಡಿತ್ತು. 2010ರವೇಳೆಗೆ ಇದರಲ್ಲಿ ಒಟ್ಟು 10 ಸಾವಿರ ಕೋಟಿ ವಾಪಾಸಾಗಿ ಆಗಿತ್ತು.

ಆದ್ರೆ ಭಾರತದಲ್ಲಿ ಪ್ರಸ್ತುತ ಪೆಟ್ರೋಲ್ ನ 58% ಮತ್ತು ಡೀಸೆಲ್ ನ 52% ಕೇಂದ್ರಕ್ಕೆ ತೆರಿಗೆ ಸಂದಾಯವಾಗ್ತಾ ಇದೆ. ಈಗಿರೋ ದರದಲ್ಲಿ ಬರಿ ಒಂದು ವರ್ಷದ ಟ್ಯಾಕ್ಸ್ ಕಲೆಕ್ಷನ್ನೇ ಬರೋಬ್ಬರಿ 3 ಲಕ್ಷ ಕೋಟಿ ಆಗುತ್ತೆ.

ಒಂದು ವರ್ಷಕ್ಕೆ 3ಲಕ್ಷ ಕೋಟಿ ಕಲೆಕ್ಷನ್ ಮಾದುವ ಕೇಂದ್ರ, ಕೆಲವು ಸಾವಿರ ಕೋಟಿಗಳ ಕಂತನ್ನು ಪಾವತಿಸೋದು ಕಷ್ಟಾನಾ? ಉಳಿದ ಹಣ ಏನಾಗುತ್ತೆ? ಮಾತಿಗೆ ನೂರು ಬಾರಿ ಕಾಂಗ್ರೆಸ್ ನ ದೂರ್ತಿರುವ  ಕೇಂದ್ರ ಸರ್ಕಾರ ಯಾಕಿದ್ರ ಬಗ್ಗೆ ಮಾತಾಡ್ತಿಲ್ವೋ ಗೊತ್ತಿಲ್ಲ. ವಿರೋಧ ಪಕ್ಷಗಳಂತೂ ಜನಸಾಮಾನ್ಯರ ಕೂಗಿಗೆ ದನಿಯಾಗೋ ಗೋಜಿಗೇ ಹೋಗ್ತಿಲ್ಲ. ಬೆಲೆಯೇರಿಕೆ ಜವಾಬ್ದಾರಿಯಿಂದ ಜನರ ದಾರಿ ತಪ್ಪಿಸಿ, ಮೂರ್ಖರನ್ನಗಿಸಿ ನುಣುಚಿಕೊಳ್ತಿರೋರನ್ನ ಜನನೂ ಪ್ರಶ್ನೆ ಮಾಡ್ತಿಲ್ಲ.

Exit mobile version