ಪ್ಯಾಸೆಂಜರ್ ರೈಲಿನ ಎಸಿ ಕೋಚ್‌ನಲ್ಲಿ ನೀರು ಸೋರಿಕೆ,ಇದು ಟ್ರೈನೋ, ಓಪನ್‌ ಶವರ್‌ ಬೋಗಿಯೋ ಎಂದು ನೆಟ್ಟಿಗರ ವ್ಯಂಗ್ಯ

New Delhi : ಪ್ಯಾಸೆಂಜರ್ ರೈಲಿನ ರೈಲು ಬೋಗಿಯೊಂದರ ಮೇಲ್ಛಾವಣಿಯಲ್ಲಿ ನೀರು ಸೋರಿಕೆಯ ವಿಡಿಯೋ ವೈರಲ್ (water leakage in train) ಆಗಿದ್ದು, ಭಾರತೀಯ ರೈಲ್ವೇಯ ವಿರುದ್ಧ ಆಕ್ರೋಶಕ್ಕೆ

ಕಾರಣವಾಗಿದೆ. ಮುಂಬೈ ಮತ್ತು ಇಂದೋರ್ ನಡುವಿನ ಆವಂತಿಕಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಚಿತ್ರೀಕರಿಸಿದ ಈ ವಿಡಿಯೋದಲ್ಲಿ ಪ್ರಯಾಣಿಕರು ಮಳೆಯ ಸಮಯದಲ್ಲಿ ಎಸಿ ಕೋಚ್‌ನ ಹೀನಾಯ

ಸ್ಥಿತಿಯ ಬಗ್ಗೆ ಕೋಪವನ್ನು ವ್ಯಕ್ತಪಡಿಸಿ ನಂತರ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಂಡಿದ್ದಾರೆ.

ಈ ಘಟನೆಯು ಮುಂಬೈ – ಇಂದೋರ್‌ (Mumbai Indore) ನಡುವಣ ಆವಂತಿಕಾ ಎಕ್ಸ್‌ಪ್ರೆಸ್‌ (Avantika Express) ರೈಲಿನ ಎಸಿ ಬೋಗಿಯಲ್ಲೇ ನಡೆದಿದೆ ನಂತರ ಕಾಂಗ್ರೆಸ್‌ (Congress)

ಸಹ ಈ ವಿಡಿಯೋವನ್ನು ಟ್ವೀಟ್‌ ಮಾಡಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು (Narendra Modi) ಪರೋಕ್ಷವಾಗಿ ವ್ಯಂಗ್ಯವಾಡಿತು.

ರೈಲ್ವೆ ಇಲಾಖೆ ವಿರುದ್ಧ ನೆಟ್ಟಿಗರ ಆಕ್ರೋಶ :

ಟ್ವಿಟ್ಟರ್‌(Twitter) ಬಳಕೆದಾರರು ಒಬ್ಬರು “ಭಾರತೀಯ ರೈಲ್ವೇ ತೆರೆದ ಶವರ್ ಸೌಲಭ್ಯದೊಂದಿಗೆ ಹೊಸ ಸೂಟ್ ಕೋಚ್ ಅನ್ನು ಪ್ರಾರಂಭಿಸಿದೆ” ಎಂಬ ವ್ಯಂಗ್ಯಭರಿತ ಪೋಸ್ಟ್‌ನಲ್ಲಿ (Post) ಹೇಳಿದ್ದಾರೆ.

ಇನ್ನೂ ಕೆಲವು ಬಳಕೆದಾರರು ಈ ರೈಲುಗಳಲ್ಲಿ ಪ್ರಯಾಣಿಕರಿಗೆ ಶವರ್ ಜೆಲ್, ಶಾಂಪೂ ಮತ್ತು ಬಾತ್ರೋಬ್ ಅನ್ನು ಒದಗಿಸಲು “ಭಾರತೀಯ ರೈಲ್ವೇ ಚರ್ಚಿಸುತ್ತಿವೆ” ಎಂದೂ ಟ್ರೋಲ್‌ ಮಾಡಿದ್ದಾರೆ.

ಪ್ರೀಮಿಯಂ ಶುಲ್ಕವನ್ನು ‘’2 – ಟೈರ್‌ AC ಸೀಟಿಗೆ ಪಾವತಿಸಿದ್ದರೂ ಸಹ ಪ್ರಯಾಣಿಕರು ಇಂತಹ ಅನಾನುಕೂಲತೆಗಳನ್ನು ಸಹಿಸಿಕೊಳ್ಳುತ್ತಾರೆ.ಶುಲ್ಕವನ್ನು ಈ ಕೋಚ್‌ನ ಪ್ರಯಾಣಿಕರಿಗೆ ಮರುಪಾವತಿಸಲು

ಭಾರತೀಯ ರೈಲ್ವೆ ಪರಿಗಣಿಸುತ್ತದೆಯೇ??? ಎಂದು ಇನ್ನೊಬ್ಬ ಬಳಕೆದಾರರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ರೈಲ್ವೆ ಇಲಾಖೆಯಲ್ಲಿ 3624 ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಹಾಗೆ, ಮತ್ತೊಬ್ಬ ಬಳಕೆದಾರರು “ಶವರ್ ಸೌಲಭ್ಯದೊಂದಿಗೆ ಮೊದಲನೇ ಎಸಿ ರೈಲು? ಮಳೆ ನೀರು ಕೊಯ್ಲು ಜೊತೆಗೆ “ವಂದೇ ಭಾರತ್ (Vande Bharat) ಅನ್ನು ಸೇರಿಸಲಾಗಿದೆ” ಅದರಲ್ಲಿ ತಪ್ಪೇನಿದೆ.”

ಎಂದು ಮತ್ತೊಬ್ಬ ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ರೈಲುಗಳಲ್ಲಿ ಉನ್ನತ ತಂತ್ರಜ್ಞಾನದ ಕೂಲಿಂಗ್ ವ್ಯವಸ್ಥೆಗೆ ಧನ್ಯವಾದಗಳು” ಎಂದೂ ಕಾಮೆಂಟ್ ಮಾಡಿದ್ದಾರೆ.

ಪಶ್ಚಿಮ ರೈಲ್ವೆ ಇಲಾಖೆಯು(Western Railway Department) ಈ ವಿಡಿಯೋ ಹೆಚ್ಚು ವೈರಲ್‌ ಆಗುತ್ತಿದ್ದ ಹಾಗೆ ಪ್ರತಿಕ್ರಿಯೆ ನೀಡಿದ್ದು, ಆವಂತಿಕಾ ಎಕ್ಸ್‌ಪ್ರೆಸ್‌ನ ಎಲ್ಲಾ ಕೋಚ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ,

ಈ ಸಮಸ್ಯೆಯನ್ನು ತಕ್ಷಣವೇ ಹಾಜರುಪಡಿಸಲಾಗಿದೆ ಎಂದು ಹೇಳಿದೆ. ಆವಂತಿಕಾ ಎಕ್ಸ್‌ಪ್ರೆಸ್ ಮುಂಬೈನಿಂದ ಇಂದೋರ್‌ಗೆ ಹೋಗುವ ರೈಲು ಆಗಿದೆ ಈ ರೈಲಿನಲ್ಲಿ ಎಸಿ ವೆಂಟ್‌ಗಳಿಂದ ಮಳೆ

ನೀರು ಸೋರಿಕೆಯಾಗುತ್ತಿರುವ ಈ ವೈರಲ್ ವಿಡಿಯೋ ನೋಡಿದ ನಂತರ ರೈಲ್ವೆ (water leakage in train) ಇಲಾಖೆಯು ಈ ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ : ಹಗಲಿನಲ್ಲಿ ಬಳಸುವ ವಿದ್ಯುತ್‌ಗೆ ಶೇ.20 ಕಡಿಮೆ ಶುಲ್ಕ: ಬಿಲ್ಲಿಂಗ್‌ ವ್ಯವಸ್ಥೆಯಲ್ಲಿ ಬದಲಾವಣೆಗೆ ಕೇಂದ್ರ ನಿರ್ಧಾರ

ಸಮಸ್ಯೆಯನ್ನು ತ್ವರಿತವಾಗಿ ಹಾಜರುಪಡಿಸಲಾಗಿದೆ. ಮತ್ತು ಎಲ್ಲಾ ಆವಂತಿಕಾ ಎಕ್ಸ್‌ಪ್ರೆಸ್ ಕೋಚ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ಇದೀಗ ತನ್ನ ರಿಟರ್ನ್‌ ಜರ್ನಿಯನ್ನು ರೈಲು ಪ್ರಾರಂಭಿಸಿದೆ,

ಅಂತಹ ಯಾವುದೇ ಸಮಸ್ಯೆ ಈಗ ಇಲ್ಲ ಎಂದು ಭಾನುವಾರ ಪಶ್ಚಿಮ ರೈಲ್ವೆ ರಾತ್ರಿ ಟ್ವೀಟ್ (Tweet) ಮಾಡಿದೆ.

ರಶ್ಮಿತಾ ಅನೀಶ್

Exit mobile version