ಚಿಕ್ಕೋಡಿಯಲ್ಲಿ ನೀರಿಗಾಗಿ ಹಾಹಾಕಾರ, ಸ್ಥಳೀಯರ ಮನವಿಗೂ ಸ್ಪಂದಿಸದ ಸರ್ಕಾರ !

Chikkodi: ಇನ್ನೇನು ಕೆಲವೇ ದಿನಗಳಲ್ಲಿ ಬೇಸಿಗೆ ಬಂದೇ ಬಿಡ್ತು . ಆದರೆ ಬೇಸಿಗೆಯ (Water Problem in Chikkodi) ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ನೀರಿಗಾಗಿ

ಹಾಹಾಕಾರ ಎದ್ದಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ (Drinking Water Crisis). ಕೃಷ್ಣಾ ನದಿ ಕೂಗಳತೆ ದೂರದಲ್ಲಿ

ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೌಡೇನವಾಡಿ ವಸತಿ ತೋಟದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಜೀವ ಜಲಕ್ಕಾಗಿ ಜೀವ ಕೈಯಲ್ಲಿ

ಹಿಡಿದು ನೀರು ತುಂಬಿಸೋ (Water Problem in Chikkodi) ಪರಿಸ್ಥಿತಿ ಎದುರಾಗಿದೆ.

ಇನ್ನೂರಕ್ಕೂ ಅಧಿಕ ಮನೆಗಳಿರುವ ಈ ಊರಲ್ಲಿ ನೀರಿಲ್ಲದೇ ಜನ ಪರಿತಪ್ಪಿಸುತ್ತಿದ್ದಾರೆ. ಬೋರ್ ವೆಲ್​ಗಳು (Bore Well) ಬತ್ತಿ ಹೋಗಿವೆ, ಹೀಗಾಗಿ ಜನರು ಬಾವಿ ನೀರಿನ

ಮೇಲೆ ಅವಲಂಬಿಸಿದ್ದಾರೆ. ಆದರೆ ಬಾವಿಯಿಂದ ನೀರು ತೆಗೆಯಬೇಕು ಎಂದರೆ ಜನರು ತಮ್ಮ ಜೀವವನ್ನೇ ಪಣಕ್ಕಿಡಬೇಕಿದೆ. ಮೆಟ್ಟಿಲಿಲ್ಲದ ಮೂವತ್ತು ಅಡಿ ಬಾವಿಗಿಳಿದು ನೀರು

ತುಂಬಬೇಕಿದೆ. ಮಹಿಳೆಯರು ಸೇರಿದಂತೆ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಬಾವಿಗೆ ಇಳಿದು ನೀರು ತುಂಬುತ್ತಾರೆ.

ಸ್ವಲ್ಪ ಯಾಮಾರಿದ್ರೂ ಕಾಲು ಜಾರಿ ಪಾತಾಳಕ್ಕೆ ಬೀಳುವ ಭಯ ಇರುತ್ತೆ. ಆದರೂ ಜೀವ ಜಲಕ್ಕಾಗಿ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಪ್ರತಿವರ್ಷ ಏಪ್ರಿಲ್ ಮೇ (April, May)

ತಿಂಗಳಲ್ಲಿ ಇಷ್ಟು ನೀರಿನ ಅಭಾವ ಉಂಟಾಗುತ್ತಿತ್ತು ಆದರೆ ಈ ಸಲ ಫೆಬ್ರವರಿ ತಿಂಗಳಲ್ಲಿಯೆ ಶುರುವಾಗಿದೆ. ಬಾವಿಯ ನೀರು ಕಲುಷಿತವಾದ್ರೂ, ಗಾಲೀಜಾಗಿದ್ದರೂ

ಅನಿವಾರ್ಯವೆಂಬಂತೆ ಅದೇ ನೀರನ್ನು ಕುಡಿದು ಜನ ಬದುಕುತ್ತಿದ್ದಾರೆ. ಹೀಗೆ ಬಾವಿಯಿಂದ ನೀರು ತುಂಬಿ ಎರಡು ಕಿ.ಮೀ. ದೂರ ನಡೆದುಕೊಂಡು ಬಂದು ಮನೆ ಸೇರಬೇಕಿದೆ.

ಕೆಲಸ ಕಾರ್ಯ ಬಿಟ್ಟು ನಿತ್ಯ ನೀರು ತುಂಬುವುದೇ ಇವರ ಕೆಲಸವಾಗಿದೆ. ಸಾಕಷ್ಟು ಬಾರಿ ಸ್ಥಳೀಯ ಶಾಸಕ ಗಣೇಶ್ ಹುಕ್ಕೇರಿಗೆ (Ganesh Hukkeri) ಮನವಿ ಮಾಡಿದರೂ

ಯಾವುದೇ ಪ್ರಯೋಜನವಾಗಿಲ್ಲ. ಈ ವರೆಗೂ ಸ್ಪಂದಿಸದ ಅಧಿಕಾರಿಗಳ ಮೇಲೆ ಹಾಗೂ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನು ಓದಿ : ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಪ್ರಧಾನಿ ಮೋದಿ

Exit mobile version