ಅಲರ್ಜಿಗಳಿಂದ ದೂರ ಇರಬೇಕೇ? ಈ ಮಾರ್ಗಗಳನ್ನು ಅನುಸರಿಸಿ

health

Health Tips : ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಅಲರ್ಜಿ ಇರುತ್ತಾದೆ. ಅಲರ್ಜಿಯು ಸಾಮಾನ್ಯವಾಗಿ ನಮ್ಮ ಶರೀರದ ರೋಗ ನಿರೋಧಕ (Ways to prevent allergies) ಶಕ್ತಿಯ ವಿಪರೀತ ಪ್ರತಿಕ್ರಿಯೆಯಾಗಿದೆ.

ಶರೀರಕ್ಕೆ ಒಗ್ಗದ ವಸ್ತುವಿಗೆ ತೆರೆದುಕೊಂಡಾಗ ಅಲರ್ಜಿ ಉಂಟಾಗುತ್ತದೆ. ಹೀಗಾಗಿ ಅಲರ್ಜಿಗಳಿಂದ ದೂರವಿರಲಿ (Ways to prevent allergies) ಈ ಕೆಳಗಿನ ಮಾರ್ಗಗಳನ್ನು ಅನುಸರಿಸಿ.

ಬೆಳಿಗ್ಗೆ ಖಾಲೆ ಹೊಟ್ಟೆಯಲ್ಲಿ ನೀರಿನಲ್ಲಿ 5 ಹನಿ ಕ್ಯಾಸ್ಟರ್ ಆಯಿಲ್ ಸೇರಿಸಿ ಕುಡಿಯುವುದರಿಂದ ಚರ್ಮ ಮತ್ತು ಮೂಗಿನ ಮಾರ್ಗಗಳಲ್ಲಿನ ಅರ್ಜಿಯನ್ನು ತಡೆಯುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ಫುಡ್ ಅಲರ್ಜಿಯಾದರೆ ಸಾಮಾನ್ಯವಾಗಿ ಹೊಟ್ಟೆನೋವು, ನಾಲಿಗೆ ಊದುವುದು, ವಾಂತಿ, ಕೆಮ್ಮು, ಚರ್ಮ ತುರಿಕೆ, ತಲೆ ಸುತ್ತು ಹಾಗೂ ಉಸಿರಾಟದ ತೊಂದರೆಯಂಥ ಸಮಸ್ಯೆ ಕಾಡುತ್ತದೆ.

ಇದನ್ನು ಓದಿ: ಸರಕಾರಿ ಆಸ್ಪತ್ರೆ ವೈದ್ಯರಿಗೆ ಕೇಂದ್ರದ ಎಚ್ಚರಿಕೆ : ಜೆನೆರಿಕ್ ಔಷಧಿ ಬರೆಯಿರಿ ಇಲ್ಲವೇ ಕ್ರಮವನ್ನು ಎದುರಿಸಿ

ಇಂತಹವರು ಆಲ್ಕೋಹಾಲ್, ಸಕ್ಕರೆ, ಸಂಸ್ಕರಿಸಿದ ಆಹಾರ, ಧಾನ್ಯ, ತಂಬಾಕು, ಫ್ಲೇವರ್ ಆ್ಯಡೆಡ್ ಫುಡ್ ಗಳು, ರಸಾಯನಿಕ ಯುಕ್ತ ಆಹಾರಗಳಿಂದ ದೂರ ಉಳಿಯುವುದು ಉತ್ತಮ.

ಅಲರ್ಜಿಯಿಂದ ದೂರ ಉಳಿಯಲು ಆಯುರ್ವೇದದಲ್ಲಿ ಪ್ರಾಚೀನವಾದ ವಿಧಾನವೆಂದರೆ ಜಲ ನೇತಿ ಮೂಗಿನ ಮಾರ್ಗಗಳಿಂದ ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಇದು ಸೋಂಕನ್ನು ತಡೆಯುತ್ತದೆ. ಉಸಿರಾಟದ ಮಾರ್ಗವನ್ನು ಸುಗಮಗೊಳಿಸುತ್ತದೆ. ರಕ್ತತ ಪರಿಚಲನೆಯನ್ನೂ ಸುಧಾರಿಸುತ್ತದೆ. ನಿದ್ರೆ ಕೂಡ ಉತ್ತಮವಾಗಿರುತ್ತದೆ.

ಧೂಳಿನ ಅಲರ್ಜಿ ಇರುವವರು ವಾಯುಮಾಲಿನ್ಯ ಉಂಟಾದಾಗ ಹೊರಗೆ ಹೋಗಬೇಡಿ. ಇದು ಉಸಿರಾಟದ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಅದರಲ್ಲೂ ಪ್ರತಿ ಬಾರಿಯೂ ಏರ್ ಕ್ವಾಲಿಟಿ 100 ದಾಟಿದಾಗ ಮಾಲಿನ್ಯದಿಂದ

ಆಸ್ತಮಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಆದ್ದರಿಂದ ಗಾಳಿಯ ಗುಣಮಟ್ಟ ಕಡಿಮೆ ಇದ್ದಾಗ ಮನೆಯಲ್ಲಿರುವುದೇ ಹೆಚ್ಚು ಸೂಕ್ತ. ಈ ವಿಧಾನವನ್ನು ಅನುಸರಿಸಲು ನೀವು 10 ನಿಮಿಷಗಳನ್ನು ವ್ಯಯಿಸಬೇಕಾಗುತ್ತದೆ.

ಇದನ್ನು ಅನುಸರಿಸಿದ್ದೇ ಆದರೆ, ಜಲ್ ನೇತಿ ಮಾಡಲು ನಿಮ್ಮ ದಿನದಲ್ಲಿ ಹತ್ತು ನಿಮಿಷಗಳನ್ನು ತೆಗೆದುಕೊಳ್ಳಿ ಮತ್ತು ನೀವು ಜೀವನದುದ್ದಕ್ಕೂ ಸೈನಸೈಟಿಸ್ ಮುಕ್ತರಾಗಬಹುದು.

ಆಹಾರ ಅಲರ್ಜಿಯಿಂದ ಬಳಲುತ್ತಿರುವರು ವಿಟಮಿನ್ ಸಿ ಮತ್ತು ಇ ಯುಕ್ತ ಆಹಾರಗಳನ್ನು ಸೇವಿಸಬೇಕಾಗುತ್ತದೆ. ವಿಟಮಿನ್ ಸಿ ಮತ್ತು ಇ ಫುಡ್ ಅಲರ್ಜಿಗಳನ್ನು ದೂರ ಇಡುತ್ತದೆ.

ಮನಸ್ಸು ಸಮಾಧಾನವಿಲ್ಲವೆಂದಾಗ ಹಲವಾರು ಆಲೋಚಗಳು ಕಾಡಲು ಶುರುವಾಗುತ್ತದೆ. ಇದರಿಂದ ಮನುಷ್ಯ ಒತ್ತಡಕ್ಕೊಳಗಾಗುತ್ತಾನೆ. ಇದು ಅಲರ್ಜಿಗೆ ಆಹ್ವಾನ ನೀಡಿದಂತಾಗುತ್ತದೆ.

ಹೀಗಾಗಿ ವಿಶ್ರಾಂತಿ ಪಡೆದು ಒತ್ತಡಗಳಿಂದ ದೂರವಿರಿ.

Exit mobile version