ಭಾರತ ವಿರುದ್ಧದ ಮೊದಲನೇ ಟೆಸ್ಟ್ ಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ

West Indies : ಡೊಮಿನಿಕಾದಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯಕ್ಕೆ 13 (West Indies vs India) ಸದಸ್ಯರ ವೆಸ್ಟ್ ಇಂಡೀಸ್ ತಂಡದ ಪಟ್ಟಿ ಸಿದ್ಧವಾಗಿದೆ. ರಾಷ್ಟ್ರೀಯ

ತಂಡದಲ್ಲಿ ಯುವ ಎಡಗೈ ಬ್ಯಾಟ್ಸ್ಮನ್ ಗಳಾದ ಕಿರ್ಕ್ ಮೆಕೆಂಜಿ (Kirk McKenzie) ಮತ್ತು ಎಲಿಕ್ ಅಥನಾಜ್ (Elik Athanasius) ಅವರು ಚೊಚ್ಚಲ ಅವಕಾಶ ಪಡೆದಿದ್ದಾರೆ. ಇವರಿಬ್ಬರು ಬಾಂಗ್ಲಾದೇಶ

‘ಎ’ ತಂಡದ ವಿರುದ್ಧ ಗಮನಾರ್ಹ ಪ್ರದರ್ಶನ ಮಾಡಿದ್ದರು. ಕ್ರೈಗ್ ಬ್ರಾಥವೇಟ್ ಅವರು ಮೊದಲನೇ ಟೆಸ್ಟ್ನಲ್ಲಿ ವಿಂಡೀಸ್ ತಂಡವನ್ನು ಮುನ್ನಡೆಸಲಿದ್ದಾರೆ .

ಲಿಸ್ಟ್ ‘ಎ’ ಕ್ರಿಕೆಟ್ ನಲ್ಲಿ ಗಮನಸೆಳೆಯುವಂತಹ ಪ್ರದರ್ಶನ ತೋರಿದ್ದ ಕಿರ್ಕ್ ಮೆಕೆಂಜಿ ಹಾಗು ಎಲಿಕ್ ಅಥನಾಜ್ ಅವರಿಗೆ ಟೆಸ್ಟ್ ತಂಡದಲ್ಲಿ ಮೊದಲ ಅವಕಾಶ ಕಲ್ಪಿಸಲಾಗಿದೆ ಮತ್ತು ಬಲಿಷ್ಠವಾದ

ಭಾರತದ ವಿರುದ್ಧ ಸವಾಲುದಾಯಕ ಟೆಸ್ಟ್ ಸರಣಿಯ ಮೊದಲನೇ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತನ್ನ 13 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಎಂದಿನಂತೆ ಕ್ರೈಗ್

ಇದನ್ನು ಓದಿ: ಶಿಕ್ಷಣ ಸಚಿವರ ತವರಿನಲ್ಲಿ ಸೋರುತ್ತಿರುವ ಕೊಠಡಿಯೊಳಗೆ ಛತ್ರಿ ಹಿಡಿದು ಪಾಠ ಕೇಳುತ್ತಿದ್ದಾರೆ ವಿದ್ಯಾರ್ಥಿಗಳು !

ಬ್ರಾಥವೇಟ್ ತಂಡದ ನಾಯಕತ್ವ (West Indies vs India) ವಹಿಸಲಿದ್ದಾರೆ .

ಯಾವ ಕಾರಣಕ್ಕೆ ಇಬ್ಬರು ಆಟಗಾರರಿಗೆ ಪ್ರಾಮುಖ್ಯತೆ ?


ಬಾಂಗ್ಲಾದೇಶ (Bangladesh) ಇತ್ತೀಚೆಗೆ ‘ಎ’ ತಂಡದ ವಿರುದ್ಧ ಮತ್ತು ವೆಸ್ಟ್ ಇಂಡೀಸ್ ‘ಎ’ ಪರ ಎಡಗೈ ಬ್ಯಾಟ್ಸ್ಮನ್ ಕಿರ್ಕ್ ಮೆಕೆಂಜಿ ಹಾಗೂ ಮತ್ತೊಬ್ಬ ಎಡಗೈ ಬ್ಯಾಟ್ಸ್ಮನ್ ಎಲಿಕ್ ಅಥನಾಜ್ ಗಮನಾರ್ಹ

ಆಟ ಪ್ರದರ್ಶಿಸಿದ್ದರು. ಇದರ ಫಲವಾಗಿ ಇಬ್ಬರು ಎಡಗೈ ಬ್ಯಾಟ್ಸ್ಮನ್ ಗಳಿಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಚೊಚ್ಚಲ ಅವಕಾಶ ಕಲ್ಪಿಸಲಾಗಿದೆ. ಈ ಇಬ್ಬರು ಯುವ ಬ್ಯಾಟ್ಸ್ಮನ್ಗಳ ಬಗ್ಗೆ ವಿಂಡೀಸ್ ಚೀಫ್ ಸೆಲೆಕ್ಟರ್

ದೇಶಮಂಡ್ ಹೇಯ್ನ್ ಅವರು “ವೆಸ್ಟ್ ಇಂಡೀಸ್ ಕ್ರಿಕೆಟ್ನ ಭವಿಷ್ಯದ ತಾರೆಗಳು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ”.

2021ರ ನವೆಂಬರ್ ತಿಂಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ರಕೀಮಾ ಕಾರ್ನ್ವೆಲ್ (Rakima Cornwell) ಅವ್ರು ಇದೀಗ ತಮ್ಮ ವೃತ್ತಿ ಜೀವನದ 10ನೇ ಟೆಸ್ಟ್ ಆಡಲು ಎದುರು ನೋಡುತ್ತಿದ್ದಾರೆ.

ಭಾರತದ ಟೆಸ್ಟ್ ಸರಣಿಗೆ, ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ದೈತ್ಯಸ್ಪಿನ್ ಆಲ್ ರೌಂಡರ್ ರಕೀಮ್ ಕಾರ್ನ್ವೆಲ್ ಅವರು ಮರಳಿದ್ದಾರೆ.

ಭಾರತ ವಿರುದ್ದದ ಮೊದಲನೇ ಟೆಸ್ಟ್ ಗೆ ವೆಸ್ಟ್ ಇಂಡೀಸ್ ತಂಡ ಇಂತಿದೆ


ಕ್ರೈಗ್ ಬ್ರಾಥವೇಟ್ (Craig Brathwaite) (ನಾಯಕ ),ಜಾರ್ಮೈನ್ ಬ್ಲಾಕ್ವುಡ್ (Jermaine Blackwud) (ಉಪನಾಯಕ), ಎಲಿಕ್ ಅಥನಾಜ್, ಟಾಗೇನರೈನ್ ಚಂದ್ರಪಾಲ್, ರಕೀಮ್ ಕಾರ್ನ್ವೆಲ್,

ಜೋಶುವಾ ಡಾ ಸಿಲ್ವಾ, ಶಾನ್ನನ್ ಗ್ಯಾಬ್ರಿಯಲ್ ಜೇಸನ್ ಹೊಲ್ಟಾರ್ , ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ರೇಯ್ಮನ್ ರೀಫರ್, ಕೇಮರ್ ರೋಚ್ ಜೋಮ್ಲ್ ವ್ಯಾರಿಕನ್.

ಭವ್ಯಶ್ರೀ ಆರ್. ಜೆ

Exit mobile version