ಸ್ಪಂದನಾಘಾತ : ಕೀಟೋ ಡಯೆಟ್‌ ಎಂದರೇನು? ದಿಢೀರ್‌ ತೂಕ ಇಳಿಸುವುದರಿಂದ ದೇಹದ ಮೇಲಾಗುವ ಪರಿಣಾಮವೇನು?

Bengaluru, ಆಗಸ್ಟ್‌ 08: ಕನ್ನಡ ಚಿತ್ರರಂಗದ ಅತ್ಯುತ್ತಮ ನಟ ಆಗಿರುವ ವಿಜಯ್ ರಾಘವೇಂದ್ರ(Vijay Raghavendra) ಅವರ ಪತ್ನಿ ಸ್ಪಂದನಾ(What is Keto Diet) ಅವರ ಹಠಾತ್ ನಿಧನದಿಂದ ಇದೀಗ

ಸಹಜವಾಗಿ ಹಲವರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಆಗಿದೆ. ಏಕೆಂದರೆ ಇತ್ತೀಚಿಗೆ ಸ್ಪಂದನಾ ಅವರು ಸರಿ ಸುಮಾರು 16 ಕೆ.ಜಿ ತೂಕ ಕಡಿಮೆ ಆಗಿದ್ದರು. ಇವರು ತೂಕ ಇಳಿಸಲು ಅನುಸರಿಸಿದ್ದು

ಕೀಟೋ ಡಯಟ್‌ (Keto Diet). ಈ ಡಯಟ್ಟೇ ಅವರ ಪ್ರಾಣಕ್ಕೆ ಕುತ್ತು ತಂದಿತಾ ಅನ್ನುವ ಅನುಮಾನ ಇದೀಗ (What is Keto Diet) ಹಲವರಲ್ಲಿ ಮೂಡಿದೆ.

ಈ ಮಧ್ಯೆ ಒಬ್ಬೊಬ್ಬರು ಅನುಸರಿಸುವ ಡಯಟ್ ಪದ್ಧತಿ ಹಾಗೂ ಡಯಟ್ ಮಾಡುವ ವಿಧಾನ ಸಾಮಾಜಿಕ ಜಾಲತಾಣ (Social Media) ಸೇರಿದಂತೆ ಹಲವೆಡೆ ಅತೀ ಹೆಚ್ಚು ಚರ್ಚೆಯಲ್ಲಿದೆ. ಬೇಗನೇ ಸಣ್ಣ ಆಗಬೇಕು

ಎಂದು ಬಯಸುವವರು ಕಿಟೋ ಡಯಟ್ ಅನ್ನು ಅನುಸರಿಸುತ್ತಿದ್ದಾರೆ. ಇದು ಇತ್ತೀಚೆಗೆ ಬಹಳ ಜನಪ್ರಿಯತೆ ಪಡೆದಿದ್ದು, ಇದರ ಬಗ್ಗೆ ಈಗ ಇದು ಭಾರೀ ಚರ್ಚೆಗೊಳಗಾಗಿದೆ.

ಏನಿದು ಕೀಟೋ ಡಯಟ್‌:
ಹಾಗಾದರೆ ಏನಿದು ಈ ಕೀಟೋ ಡಯಟ್?? ನಮ್ಮ ಆರೋಗ್ಯಕ್ಕೆ ಇದರಿಂದ ಯಾವ ರೀತಿಯ ಪರಿಣಾಮ ಬೀರುತ್ತದೆ? ಇದರ ಅನಾನುಕೂಲ ಏನು? ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ. ಸದ್ಯ ನಮ್ಮ ಸಿಲಿಕಾನ್

ಸಿಟಿಯಲ್ಲಿ ಈಗ ಅತೀ ಸಿಕ್ಕಾಪಟ್ಟೆ ಜನಪ್ರಿಯ ಆಗುತ್ತಿರುವುದು ಈ ಕೀಟೋ ಡಯಟ್‌ ಫುಡ್. ತೂಕವನ್ನು ಅತಿ ಬೇಗ ಕಡಿಮೆ ಮಾಡುವುದರಲ್ಲಿ, ಅದರಲ್ಲೂ ಇದು ಅತೀ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಬಹುದು.

ಆದರೆ ತಜ್ಞ ವೈದ್ಯರ ಅಭಿಪ್ರಾಯ ಪ್ರಕಾರ ಈ ಕೀಟೋ ಡಯಟ್‌ನಲ್ಲಿರುವವರು ಅತ್ಯಂತ ಎಚ್ಚರದಿಂದ ಇರುವುದು ಒಳ್ಳೆಯದು ಎಂದು ಹೇಳುತ್ತಾರೆ.

ಇದನ್ನೂ ಓದಿ : ವೇಗವಾಗಿ ಹರಡುತ್ತಿದೆ ಕೊರೊನಾ ರೂಪಾಂತರಿ EG.5.1 ಭಾರತಕ್ಕಿದೆಯೇ ಆತಂಕ? ತಜ್ಞರು ಹೇಳಿದ ಸತ್ಯವೇನು?ಏನಿದರ ಲಕ್ಷಣ?

ಯಾಕೆಂದರೆ ಈ ಜನಪ್ರಿಯವಾಗಿರುವ ಅತಿಯಾದ ಕೀಟೋ‌ ಫುಡ್ ಡಯಟ್‌ ನಮ್ಮ ಆರೋಗ್ಯಕ್ಕೆ (Health) ಚೂರು ಕೂಡ ಒಳ್ಳೆಯದಲ್ಲ. ವೈದ್ಯರು ಅಭಿಪ್ರಾಯ ಪಟ್ಟಿರುವ ಪ್ರಕಾರ ಈ ಡಯಟ್‌ ಅನುಸರಿಸುದರಿಂದ

ಹೃದಯ ಸ್ತಂಭನ(Cardiac arrest) ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅತಿಯಾದ ಪ್ರೋಟಿನ್(Protein) ಅಂಶಗಳು ಈ ಆಹಾರದಲ್ಲಿ ಇರುತ್ತದೆ. ಆದರೆ ಇದರಲ್ಲಿ ಯಾವುದೇ ರೀತಿಯ ಕಾರ್ಬೋಹೈಡ್ರೇಟ್

(carbohydrates) ಇರುವುದಿಲ್ಲ. ನಮ್ಮ‌ ದೇಹಕ್ಕೆ ಪ್ರೋಟಿನ್ ಹೇಗೆ ಮುಖ್ಯವೋ ಅದರಂತೆ ಕಾರ್ಬೋಹೈಡ್ರೇಟ್ ಕೂಡಾ ತುಂಬಾ ಮುಖ್ಯವಾಗುತ್ತದೆ.ನಮ್ಮ ದೇಹದ ರಕ್ತನಾಳಗಳಿಗೆ ಈ ಅತಿಯಾದ ಪ್ರೋಟಿನ್‌

ಫುಡ್‌ಗಳಿಂದ ಹಾನಿ ಆಗುತ್ತದೆ. ಇದರಿಂದ ಹೃದಯ ಸ್ತಂಭನ ಸಾಧ್ಯತೆಗಳು ಹೆಚ್ಚಾಗುತ್ತದೆ. ಹಾಗಾಗಿ ಕೀಟೋ ಡಯಟ್‌ ಒಂದು ಹಂತದಲ್ಲಿ ಮಾತ್ರ ಇರಲಿ ಎಂದು ಹೃದ್ರೋಗ ತಜ್ಞ ಡಾ.‌ಸಿ.ಎನ್.ಮಂಜುನಾಥ್

(Dr C.N Manjunath) ಸಲಹೆ ನೀಡಿದ್ದಾರೆ.

ಹಾಗಾದರೆ ಈ ಕೀಟೋ ಡಯಟ್ ಎಂದರೇನು?

ಈ ಬಗ್ಗೆ ಹೇಳಬೇಕಾದರೆ , ದೇಹಕ್ಕೆ ಹೆಚ್ಚು ಕೊಬ್ಬಿನ(Fat) ಅಂಶ ಮತ್ತು ಪ್ರೋಟಿನ್ ಅಂಶ ಕೊಡುವ ಆಹಾರ ಪದ್ಧತಿಯೇ ಈ ಕಿಟೋ ಡಯಟ್. ಆದರೆ ಇದರಲ್ಲಿ ಅತೀ ಕಡಿಮೆ ಕಾರ್ಬೋಹೈಡ್ರೇಟ್ ಅಂಶ ಇರಲಿದೆ.

ಈ ಆಹಾರದಲ್ಲಿ ನಿಮಗೆ ಶೇ 25 ರಷ್ಟು ಪ್ರೋಟಿನ್, ಶೇ.70% ಕೊಬ್ಬು, ಹಾಗೂ ಶೇ.5 ರಷ್ಟು ಮಾತ್ರ ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಮಾಂಸ,ಬಾದಾಮಿ,ಕ್ರೀಮ್, ಮೊಟ್ಟೆ, ಕೋಕೋ, ಚೀಸ್, ಮೊಸರು,

ಹೆವಿ ಕ್ರೀಮ್, ಬೆಣ್ಣೆ, ಮತ್ತು ಪನ್ನೀರ್, ಸೇರಿದಂತೆ ಅನೇಕ‌ ಪ್ರೋಟೀನ್ ಸೇವನೆ ಮಾಡುತ್ತಾರೆ. ಆದರೆ ಅಕ್ಕಿ, ರಾಗಿ,ಬ್ರೆಡ್, ಮೈದಾ,ಸಕ್ಕರೆ, ಕಾರ್ನ್,ಬಾಳೆಹಣ್ಣು, ಓಟ್ಸ್, ಆಲೂಗಡ್ಡೆ, ಸಂಸ್ಕರಿಸಿದ ಎಣ್ಣೆ, ಸೇಬು,

ಮುಂತಾದವುಗಳನ್ನು ಸೇವನೆ ಮಾಡುವುದಿಲ್ಲ.

ದೇಹದ ಅಸಮತೋಲನವು ಈ ರೀತಿಯ ಆಹಾರ ಪದ್ಧತಿಯಿಂದ ಆಗುತ್ತದೆ. ದೇಹದಲ್ಲಿ ಯಾವುದೇ ರೀತಿಯ ಸಮತೋಲನತೆ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ.

ಅದಕ್ಕಾಗಿ ಯಾವತ್ತೂ ಆರೋಗ್ಯಕರವಾದ ಮಾರ್ಗದಲ್ಲಿ ತೂಕ ಇಳಿಸಬೇಕು. ನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದು,ಆರೋಗ್ಯಕರವಾದ ಉತ್ತಮ ಆಹಾರ ಸೇವನೆ ಮಾಡಬೇಕು, ವಾಕ್ ಮಾಡುವುದು,

ಹಣ್ಣು ತರಕಾರಿ ಸೇವನೆ ಮಾಡಬೇಕು ಎಂದು ಜಯದೇವ ಆಸ್ಪತ್ರೆ(Jaydev Hospital) ನಿರ್ದೇಶಕ ಡಾಕ್ಟರ್ ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

ರಶ್ಮಿತಾ ಅನೀಶ್

Exit mobile version