ನಮ್ಮ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳ ಮಾಸಿಕ ವೇತನ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ!

President

ನಮಗೆ ದೇಶದ ಪ್ರತಿಷ್ಠಿತ ಉದ್ಯಮಿಗಳ ಬಗ್ಗೆ ಅವರ ಸಂಸ್ಥೆಗಳು, ಆ ಸಂಸ್ಥೆಯ ಆದಾಯ ಎಷ್ಟು ಎಂಬುದರ ಬಗ್ಗೆ ಮಾಹಿತಿಯಿರುತ್ತದೆ. ಜಗತ್ಪ್ರಸಿದ್ದ ಶ್ರೀಮಂತರ(Rich Person) ಬಗ್ಗೆ ಕೂಡ ನಮಗೆ ಗೊತ್ತಿರುತ್ತದೆ.

ಆದರೆ ನಮ್ಮನ್ನು ಆಳುವ ಜನಪ್ರತಿನಿಧಿಗಳ ಹುದ್ದೆ, ಅವರ ವೇತನದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ. ನಮ್ಮ ದೇಶದ ಪ್ರಧಾನಿ(Primeminister), ರಾಷ್ಟ್ರಪತಿ(President), ರಾಜ್ಯಪಾಲರ(Governer) ಸಂಬಳ, ಸೇವಾವಧಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ವೇತನದ ಬಗ್ಗೆ ತಿಳಿದುಕೊಳ್ಳೋಣ.
ಪ್ರಸ್ತುತ ರಾಮನಾಥ್ ಕೋವಿಂದ್(Ramnath Kovind) ಅವರು ಭಾರತದ ರಾಷ್ಟ್ರಪತಿಗಳಾಗಿದ್ದಾರೆ. ಇವರು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ.

ಇವರ ಅಧಿಕಾರದ ಅವಧಿ ಐದು ವರ್ಷಗಳು, ಇವರ ತಿಂಗಳ ವೇತನ ಬರೋಬ್ಬರಿ ಐದು ಲಕ್ಷ ರೂಗಳು. ನಂತರದ ಹುದ್ದೆ ಪ್ರಧಾನಿ ಮಂತ್ರಿ, ಪ್ರಸ್ತುತ ನರೇಂದ್ರ ಮೋದಿ(Narendra Modi) ಅವರು ದೇಶದ ಪ್ರಧಾನಿ ಹುದ್ದೆಯಲ್ಲಿದ್ದಾರೆ. ಪ್ರಧಾನಿಯನ್ನು ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದಿಂದ ಆಯ್ಕೆ ಮಾಡಲಾಗಿರುತ್ತದೆ. ಇವರು ಭಾರತ ಸರ್ಕಾರ ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ. ಪ್ರಧಾನ ಮಂತ್ರಿಗಳ ಅಧಿಕಾರಾವಧಿಯು ಐದು ವರ್ಷಗಳು, ಇವರಿಗೆ ತಿಂಗಳ ವೇತನವಾಗಿ ಎರಡು ಲಕ್ಷದ ಎಂಭತ್ತು ಸಾವಿರ ರೂ.ಗಳು ದೊರೆಯುತ್ತದೆ.

ಇನ್ನು ರಾಷ್ಟ್ರಪತಿಗಳ(President) ನಂತರದ ಸ್ಥಾನ ಪಡೆದಿರುವ ಉಪರಾಷ್ಟ್ರಪತಿಗಳ(Vice-President) ವೇತನ ತಿಂಗಳಿಗೆ ನಾಲ್ಕು ಲಕ್ಷ ರೂ. ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಕಾರ್ಯಾಂಗದ ನೈಜ ಮುಖ್ಯಸ್ಥರು ಮುಖ್ಯಮಂತ್ರಿಗಳಾಗಿದ್ದರು ಕೂಡ ರಾಜ್ಯಪಾಲರು ಪ್ರಮುಖರಾಗಿರುತ್ತಾರೆ. ಮುಖ್ಯಮಂತ್ರಿಗಳ ಬಗ್ಗೆ ಅಸಮಾಧಾನ ಅಥವಾ ಇನ್ನಿತರೆ ಯಾವುದೇ ದೂರುಗಳಿದ್ದರೆ ರಾಜ್ಯಪಾಲರ ಮುಂದೆ ತಿಳಿಸಬಹುದಾಗಿದೆ. ಇನ್ನು ಇವರ ಸಂಭಾವನೆ ಮೂರುವರೆ ಲಕ್ಷ ರೂಪಾಯಿಗಳಾಗಿರುತ್ತದೆ.

Exit mobile version